ನವ ಭಾರತದ 'ರಾಷ್ಟ್ರಪಿತ' ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಧಾನಿಯನ್ನು ವ್ಯಂಗ್ಯವಾಡಿದ ನಿತೀಶ್‌

ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿಲ್ಲ. ನಾವು 'ರಾಷ್ಟ್ರದ ಹೊಸ ಪಿತಾಮಹ' ಎಂಬ ಹೇಳಿಕೆಯ ಬಗ್ಗೆ ಓದಿದ್ದೇವೆ. 'ನವ ಭಾರತ'ದ 'ಹೊಸ ಪಿತಾಮಹ' ರಾಷ್ಟ್ರಕ್ಕಾಗಿ ಏನು ಮಾಡಿದ್ದಾರೆ?" ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ ಪ್ರಶ್ನೆ ಮಾಡಿದ್ದಾರೆ.

bihar chief minister nitish kumars reply to devendra fadnavis wife amruta fadnavis wife two father of the nation remark ash

ಭಾರತಕ್ಕೆ (India) ಇಬ್ಬರು ರಾಷ್ಟ್ರಪಿತರಿದ್ದಾರೆ (Father of the nation). ಒಬ್ಬರು ಮಹಾತ್ಮ ಗಾಂಧೀಜಿ (Mahatma Gandhiji) ಹಾಗೂ ನವ ಭಾರತದ (New India) ರಾಷ್ಟ್ರಪಿತ ಪ್ರಧಾನಿ ಮೋದಿ (PM Narendra Modi) ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ (Maharashtra Deputy CM Devendra Fadnavis) ಅವರ ಪತ್ನಿ ಅಮೃತಾ ಫಡ್ನವೀಸ್‌ (Amruta Fadnavis) ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ (Bihar CM Nitish Kumar) ವ್ಯಂಗ್ಯವಾಡಿದ್ದು, ನವ ಭಾರತದ ರಾಷ್ಟ್ರಪಿತನ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.  'ನವ ಭಾರತ'ದ 'ಹೊಸ ತಂದೆ' ರಾಷ್ಟ್ರಕ್ಕಾಗಿ ಏನು ಮಾಡಿದ್ದಾರೆ ಎಂದು ಶನಿವಾರ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಅಮೃತಾ ಫಡ್ನವೀಸ್‌ ಹೇಳಿಕೆಯನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ. ಡಿಸೆಂಬರ್ 21 ರಂದು ಪ್ರಧಾನಿ ಮೋದಿಯನ್ನು 'ನವ ಭಾರತದ ರಾಷ್ಟ್ರಪಿತ' ಎಂದು ಅಮೃತಾ ಫಡ್ನವೀಸ್ ಅವರು ಕರೆದಿದ್ದರು.

ಈ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಬಿಹಾರ ಸಿಎಂ ನಿತೀಶ್‌ ಕುಮಾರ್, "ಸ್ವಾತಂತ್ರ್ಯದ ಹೋರಾಟಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ, ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿಲ್ಲ. ನಾವು 'ರಾಷ್ಟ್ರದ ಹೊಸ ಪಿತಾಮಹ' ಎಂಬ ಹೇಳಿಕೆಯ ಬಗ್ಗೆ ಓದಿದ್ದೇವೆ. 'ನವ ಭಾರತ'ದ 'ಹೊಸ ಪಿತಾಮಹ' ರಾಷ್ಟ್ರಕ್ಕಾಗಿ ಏನು ಮಾಡಿದ್ದಾರೆ?" ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ: ಪ್ರಧಾನಿ ಮೋದಿ ರಾಷ್ಟ್ರಪಿತ; ದೇಶದಲ್ಲಿ ಇಬ್ಬರು ರಾಷ್ಟ್ರಪಿತರು ಎಂದ ದೇವೇಂದ್ರ ಫಡ್ನವೀಸ್‌ ಪತ್ನಿ ಅಮೃತಾ

"ಭಾರತವು ಇಬ್ಬರು ರಾಷ್ಟ್ರ ಪಿತಾಮಹರನ್ನು ಹೊಂದಿದೆ. ಒಬ್ಬರು ಹಿಂದಿನ ಭಾರತಕ್ಕೆ ಸೇರಿದವರು ಮತ್ತು ಇನ್ನೊಬ್ಬರು ನವ ಭಾರತಕ್ಕಾಗಿ. ಮಹಾತ್ಮ ಗಾಂಧಿ ಅವರು ಭಾರತದ 'ರಾಷ್ಟ್ರಪಿತ' ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನವ ಭಾರತದ 'ರಾಷ್ಟ್ರಪಿತ' ಎಂದು ನಾನು ನಂಬುತ್ತೇನೆ ಎಂದೂ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ಫಡ್ನವೀಸ್‌ ಹೇಳಿಕೆ ನೀಡಿದ್ದರು.

ಇನ್ನು, ಈ ಹೇಳಿಕೆಗೆ ತಿರುಗೇಟು ನೀಡಿದ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಮಹಾತ್ಮ ಗಾಂಧಿಯನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು ಮತ್ತು ಬಿಜೆಪಿಯ "ನವ ಭಾರತ" ವನ್ನು ವ್ಯಂಗ್ಯವಾಡಿದರು. "ರಾಷ್ಟ್ರಪಿತನನ್ನು ಯಾರೊಂದಿಗೂ ಹೋಲಿಸಲಾಗುವುದಿಲ್ಲ. ಅವರ (ಬಿಜೆಪಿ) 'ನವ ಭಾರತ' ಕೇವಲ ಕೆಲವು ಸ್ನೇಹಿತರನ್ನು ಶ್ರೀಮಂತರನ್ನಾಗಿ ಮಾಡುವುದು ಮತ್ತು ಉಳಿದ ಜನಸಂಖ್ಯೆಯು ದೀನದಲಿತರು ಮತ್ತು ಹಸಿವಿನಿಂದಲೇ ಉಳಿಯುತ್ತದೆ. ನಮಗೆ ಈ 'ನವ' ಭಾರತದ ಅಗತ್ಯವಿಲ್ಲ’’ ಎಂದೂ ನಾನಾ ಪಟೋಲೆ ಹೇಳಿದರು. ಕೆಲವು ಶ್ರೀಮಂತ ಉದ್ಯಮಿಗಳಿಗಾಗಿ ಮೋದಿಜಿಯನ್ನು ನವಭಾರತದ ರಾಷ್ಟ್ರಪಿತರನ್ನಾಗಿ ಮಾಡಲು ಅವರು ಬಯಸಿದರೆ, ಅವರು ಅದನ್ನು ಮಾಡಲಿ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದೂ ನಾನಾ ಪಟೋಲೆ ಹೇಳಿದರು.

ಇದನ್ನೂ ಓದಿ: ಮತ್ತೆ ಬಿಜೆಪಿ ಜೊತೆ ಕೈಜೋಡಿಸುತ್ತಾರೆ ನಿತೀಶ್ ಕುಮಾರ್, ತಲ್ಲಣ ಸೃಷ್ಟಿಸಿದ ಪ್ರಶಾಂತ್ ಕಿಶೋರ್!

ಇನ್ನೊಂದೆಡೆ, ಹಿರಿಯ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಅವರು ಸಹ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅವರ ಪತ್ನಿ ಮಾಡಿದ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. "ಬಿಜೆಪಿಯಲ್ಲಿ ಇಬ್ಬರು ಪಿತಾಮಹರಿರಬಹುದು, ಆದರೆ ದೇಶದಲ್ಲಿ ಅಲ್ಲ, ಭಾರತಕ್ಕೆ ಒಬ್ಬರೇ ರಾಷ್ಟ್ರಪಿತ" ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಹೇಳಿದರು.

Latest Videos
Follow Us:
Download App:
  • android
  • ios