Asianet Suvarna News Asianet Suvarna News

ಪ್ರಧಾನಿ ಮೋದಿ ರಾಷ್ಟ್ರಪಿತ; ದೇಶದಲ್ಲಿ ಇಬ್ಬರು ರಾಷ್ಟ್ರಪಿತರು ಎಂದ ದೇವೇಂದ್ರ ಫಡ್ನವೀಸ್‌ ಪತ್ನಿ ಅಮೃತಾ

ಮಹಾತ್ಮಾ ಗಾಂಧಿಯವರು ರಾಷ್ಟ್ರಪಿತ ಮತ್ತು ಮೋದೀಜಿ ನವ ಭಾರತದ ಪಿತಾಮಹ. ದೇಶಕ್ಕೆ ಇಬ್ಬರು ರಾಷ್ಟ್ರ ಪಿತಾಮಹರು - ಒಬ್ಬರು ಈ ಯುಗದವರು, ಇನ್ನೊಬ್ಬರು ಆ ಯುಗದವರು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ಫಡ್ನವೀಸ್‌ ಅವರು ಹೇಳಿದ್ದಾರೆ. 

two fathers of the nation amruta fadnavis new india title for pm ash
Author
First Published Dec 21, 2022, 7:01 PM IST

ಮಹಾರಾಷ್ಟ್ರ (Maharashtra) ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರ ಪತ್ನಿ ಅಮೃತಾ ಫಡ್ನವೀಸ್‌ (Amruta Fadnavis) ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) "ರಾಷ್ಟ್ರಪಿತ" (Father of  the Nation) ಎಂದು ಕರೆದಿದ್ದಾರೆ. ಆದರೆ ನಂತರ ಅವರ ಹೇಳಿಕೆಯನ್ನು ಸ್ವಲ್ಪಮಟ್ಟಿಗೆ ತಿರುಚಿದ್ದು, ನಂತರ ಮಹಾತ್ಮ ಗಾಂಧೀಜಿಯವರ (Mahatma Gandhi) ಹೆಸರನ್ನು ಸಹ ಅವರು ಸೇರಿಸಿದ್ದಾರೆ. ಗಾಂಧೀಜಿ ಅವರನ್ನು ಮಾತ್ರ ಭಾರತದ ರಾಷ್ಟ್ರಪಿತ ಎಂಬ ಗೌರವವನ್ನು ನೀಡಲಾಗುತ್ತದೆ.

ಈ ವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ ಬರಹಗಾರರ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮೃತಾ ಫಡ್ನವೀಸ್‌ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, ವೇದಿಕೆಯ ಮೇಲಿನ ಸಂದರ್ಶನದಲ್ಲಿ, ಪ್ರಧಾನಿ ಮೋದಿಯನ್ನು ರಾಷ್ಟ್ರಪಿತ ಎಂದು ಕರೆದರೆ, ಮಹಾತ್ಮ ಗಾಂಧಿ ಏನಾಗುತ್ತಾರೆ ಎಂದೂ ಅವರನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ಫಡ್ನವೀಸ್‌,  "ಮಹಾತ್ಮಾ ಗಾಂಧಿಯವರು ರಾಷ್ಟ್ರಪಿತ ಮತ್ತು ಮೋದೀಜಿ ನವ ಭಾರತದ ಪಿತಾಮಹ. ದೇಶಕ್ಕೆ ಇಬ್ಬರು ರಾಷ್ಟ್ರ ಪಿತಾಮಹರು - ಒಬ್ಬರು ಈ ಯುಗದವರು, ಇನ್ನೊಬ್ಬರು ಆ ಯುಗದವರು" ಎಂದೂ ಅವರು ಮರಾಠಿಯಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: PM Narenddra Modi ಗೆ ರಕ್ತದಲ್ಲಿ ಪತ್ರ ಬರೆದು ರವಾನಿಸಿದ ಕಾರ್ಮಿಕರು!

ಅಮೃತಾ ಫಡ್ನವೀಸ್‌ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಈ ರೀತಿ ಹೇಳಿರುವುದು ಇದೇ ಮೊದಲೇನಲ್ಲ. 2019 ರಲ್ಲಿ ಪ್ರಧಾನ ಮಂತ್ರಿಯ ಹುಟ್ಟುಹಬ್ಬಕ್ಕೆ ನೀಡಿದ್ದ ಸಂದೇಶದಲ್ಲಿ, ‘’ನಮ್ಮ ದೇಶದ ಪಿತಾಮಹ ನರೇಂದ್ರ ಮೋದಿ ಜೀ ಅವರಿಗೆ ಜನ್ಮದಿನದ ಶುಭಾಶಯಗಳು - ಅವರು ಸಮಾಜದ ಒಳಿತಿಗಾಗಿ ಪಟ್ಟುಬಿಡದೆ ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುತ್ತಾರೆ’’ ಎಂದು ದೇವೇಂದ್ರ ಫಟ್ನವೀಸ್‌ ಪತ್ನಿ ಟ್ವೀಟ್‌ ಮಾಡಿದ್ದರು. 

ತನ್ನ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳು ಮತ್ತು ಸಾರ್ವಜನಿಕ ಹೇಳಿಕೆಗಳಿಗಾಗಿ ಆಗಾಗ್ಗೆ ಸುದ್ದಿಯಲ್ಲಿರುವ ಅಮೃತಾ ಫಡ್ನವೀಸ್‌ ಈ ವರ್ಷದ ಆರಂಭದಲ್ಲಿ ಶಿವಸೇನೆಯ ದಂಗೆಯ ಮಧ್ಯದಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿರುದ್ಧ ಟೀಕೆ ಮಾಡಿದ್ದರು. ಬಳಿಕ, ಉದ್ಧವ್‌ ಠಾಕ್ರೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆಯನ್ನೇ ನೀಡಬೇಕಾಯಿತು. 

ಇದನ್ನೂ ಓದಿ: ಮೋದಿ, ಸುಪ್ರೀಂ, ಚುನಾವಣಾ ಆಯೋಗದ ಬಗ್ಗೆ ಸುಳ್ಳು ಸುದ್ದಿ ಹರಡ್ತಿದ್ದ 3 ಯೂಟ್ಯೂಬ್ ಚಾನೆಲ್‌ ಪತ್ತೆಹಚ್ಚಿದ PIB..!

"ಏಕ್ 'ಥಾ' ಕಪಟಿ ರಾಜಾ... (ಒಮ್ಮೆ ದುಷ್ಟ ರಾಜನಿದ್ದ)" ಎಂದು ಟ್ವೀಟ್‌ನಲ್ಲಿ ಬರೆದು ನಂತರ ಅದನ್ನು ಅಮೃತಾ ಫಡ್ನವೀಸ್‌ ಡಿಲೀಟ್‌ ಮಾಡಿದ್ದರು. ಆಕೆಯ "ರಾಜ"ನ ಉಲ್ಲೇಖ ಮತ್ತು 'ಥಾ' ('ಆಗಿದ್ದರು') ಸುತ್ತಲೂ ಅವರು ಬಳಸಿದ ಉದ್ಧರಣ ಚಿಹ್ನೆಗಳು ಉದ್ಧವ್‌ ಠಾಕ್ರೆಯವರಿಗೆ ಮಾಡಿದ್ದ ಟ್ವೀಟ್‌ ಎಂದು ಎಲ್ಲರೂ ಅರ್ಥೈಸಿಕೊಂಡಿದ್ದರು. ಬಳಿಕ, ಸೇನಾ ದಂಗೆಯ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾದರೆ, ಅಮೃತಾ ಫಡ್ನವೀಸ್‌ ಅವರ ಪತಿ ಅಂದರೆ ದೇವೇಂದ್ರ ಫಡ್ನವೀಸ್‌ ಉಪ ಮುಖ್ಯಮಂತ್ರಿಯಾಗಿದ್ದರು. 

ಇದನ್ನೂ ಓದಿ: ಜಾಗತಿಕ ದುರಂತವನ್ನು ಮೋದಿ ತಪ್ಪಿಸಿದರು: ಅಮೆರಿಕ ಪ್ರಶಂಸೆ

Follow Us:
Download App:
  • android
  • ios