ಭಾರತದಲ್ಲಿ ಚೀನಾ ಕುರಿತಾಗಿ ಪ್ರಚಾರ, ಅಮೆರಿಕದ ಕೋಟ್ಯಧಿಪತಿಯ ಮಹಾಸಂಚು
ತನ್ನ ನಿರೂಪಣೆಯನ್ನು ಸೂಕ್ಷ್ಮವಾಗಿ ಮುನ್ನಡೆಸಲು ಮತ್ತು ಟೀಕೆಗಳನ್ನು ದಿಕ್ಕನ್ನು ತಿರುಗಿಸಲು ಚೀನಾ ಜಾಗತಿಕವಾಗಿ ಎಂಥಾ ಭದ್ರವಾದ ಜಾಲವನ್ನು ನಿರೂಪಿಸಿದೆ ಎನ್ನುವುದನ್ನು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಟಿಸಿದೆ.
ಬೆಂಗಳೂರು (ಆ.7): ಇತ್ತೀಚಿನ ನ್ಯೂಯಾರ್ಕ್ ಟೈಮ್ಸ್ ತನಿಖೆಯಿಂದ ಆಕ್ಟಿವಿಸ್ಟ್ ಗುಂಪುಗಳು, ಲಾಭೋದ್ದೇಶವಿಲ್ಲದ ಸಂಸ್ಥೆಗಳು, ಶೆಲ್ ಕಂಪನಿಗಳು ಮತ್ತು ಚೀನಾ ಮತ್ತು ಚೀನೀ ಪ್ರಚಾರದೊಂದಿಗಿನ ಅವರ ನಿಕಟ ಸಂಪರ್ಕಗಳ ಸಂಕೀರ್ಣ ಜಾಲವನ್ನು ಬಹಿರಂಗಪಡಿಸಲಾಗಿದೆ. ಈ ನೆಟ್‌ವರ್ಕ್‌ನ ಲಿಂಚ್‌ಪಿನ್ ಟೆಕ್ ಮ್ಯಾಗ್ನೇಟ್ ನೆವಿಲ್ಲೆ ರಾಯ್ ಸಿಂಘಮ್ ಎಂದು ನಂಬಲಾಗಿದೆ. ಮಾಧ್ಯಮ ಪ್ಲಾಟ್‌ಫಾರ್ಮ್ ನ್ಯೂಸ್‌ಕ್ಲಿಕ್ ಸುಮಾರು 38 ಕೋಟಿ ರೂಪಾಯಿ ವಿದೇಶಿ ನಿಧಿಯನ್ನು ಪಡೆದಿದೆ ಎಂದು ಜಾರಿ ನಿರ್ದೇಶನಾಲಯದ ತನಿಖೆಯು ಎರಡು ವರ್ಷಗಳ ನಂತರ ಈ ಬಹಿರಂಗವಾಗಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ (CPC) ಪ್ರಚಾರದ ಅಂಗಕ್ಕೆ ಸಂಬಂಧಿಸಿರುವ ಅಮೆರಿಕನ್ ಮಿಲಿಯನೇರ್‌ಗೆ ನಿಧಿಯ ಹರಿವು ಪತ್ತೆಯಾಗಿದೆ. ಭಾರತೀಯ ಜನತಾ ಪಕ್ಷವು (ಬಿಜೆಪಿ) ಜಾರಿ ನಿರ್ದೇಶನಾಲಯದ ತನಿಖೆಯ ಅಂಶಗಳನ್ನು ಹಿಂದೆಯೇ ಗಮನಿಸಿತ್ತು. ವಿದೇಶಿ ಘಟಕಗಳು "ಭಾರತ ವಿರೋಧಿ" ಶಕ್ತಿಗಳೊಂದಿಗೆ ಸಹಕರಿಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಇಮೇಜ್‌ಗೆ ಕಳಂಕ ತರುವ ಗುರಿಯನ್ನು ಹೊಂದಿದೆ ಎಂದು ಹೇಳಿತ್ತು.
ದಿ ನ್ಯೂಯಾರ್ಕ್ ಟೈಮ್ಸ್ ವರದಿಯು ಸಿಂಘಮ್ ಅವರ ನೆಟ್‌ವರ್ಕ್ ನ್ಯೂಸ್‌ಕ್ಲಿಕ್‌ಗೆ ಧನಸಹಾಯ ನೀಡಿದೆ ಎಂದು ಅನಾವರಣ ಮಾಡಿದೆ. ನ್ಯೂಸ್‌ಕ್ಲಿಕ್ ಎನ್ನುವುದು ದೆಹಲಿಯ ಸುದ್ದಿ ವೆಬ್‌ಸೈಟ್ ಆಗಿದ್ದು, ಚೀನಾ ಪರವಾಗಿ ಅಂಶಗಳನ್ನು ಪ್ರಚುರಪಡಿಸುವ ಕವರೇಜ್‌ಗಳನ್ನೇ ಹೆಚ್ಚಾಗಿ ಮಾಡುತ್ತದೆ. ಚೀನಾ ತನ್ನ ನಿಲುವನ್ನು ಸೂಕ್ಷ್ಮವಾಗಿ ಪ್ರಚಾರ ಮಾಡಲು ಮತ್ತು ಟೀಕೆಗಳನ್ನು ತಿರುಗಿಸಲು ಕಾರ್ಯಕರ್ತರು ಮತ್ತು ಎನ್‌ಜಿಒಗಳ ಜಾಗತಿಕ ಜಾಲವನ್ನು ಹೇಗೆ ಬಳಸಿಕೊಂಡಿದೆ ಎನ್ನುವುದನ್ನು ತನಿಖೆಯಲ್ಲಿ ತಿಳಿಸಲಾಗಿದೆ.
ನೆವಿಲ್ಲೆ ರಾಯ್ ಸಿಂಘಮ್ ಅವರ ಗುಂಪುಗಳು ಚೀನೀ ಪರ ಸಂದೇಶಗಳನ್ನು ಪ್ರಚಾರ ಮಾಡುವ ಯೂಟ್ಯೂಬ್‌ವೀಡಿಯೊಗಳನ್ನು ಹೇಗೆ ನಿರ್ಮಿಸಿವೆ ಎನ್ನುವುದನ್ನೂ ವರದಿಯಲ್ಲಿ ತಿಳಿಸಿಲಾಗಿದೆ. ಇದು ಆನ್‌ಲೈನ್‌ನಲ್ಲಿ ಮಾತ್ರವಲ್ಲದೆ ನೈಜ-ಪ್ರಪಂಚದ ರಾಜಕೀಯದ ಮೇಲೂ ಪ್ರಭಾವ ಬೀರುತ್ತದೆ. ಈ ಗುಂಪುಗಳು ರಾಜಕಾರಣಿಗಳೊಂದಿಗೆ ತೊಡಗಿಸಿಕೊಂಡಿವೆ, ಸಂಘಟಿತ ಪ್ರತಿಭಟನೆಗಳು ಮತ್ತು ವಿವಿಧ ದೇಶಗಳಲ್ಲಿ ಚುನಾವಣೆಗಳ ಮೇಲೆ ಪ್ರಭಾವ ಬೀರಿವೆ. ಈ ಚಟುವಟಿಕೆಗಳ ಹೊರತಾಗಿಯೂ, ಸಿಂಘಮ್‌ನ ಲಾಭರಹಿತ ಸಂಸ್ಥೆಗಳು ಅಮೆರಿಕದ ವಿದೇಶಿ ಏಜೆಂಟ್‌ಗಳ ನೋಂದಣಿ ಕಾಯಿದೆಯಡಿಯಲ್ಲಿ ನೋಂದಾಯಿಸಲ್ಪಟ್ಟಿಲ್ಲ, ವಿದೇಶಿ ಶಕ್ತಿಗಳೊಂದಿಗೆ ಅವರ ಸಂಪರ್ಕಗಳ ಬಗ್ಗೆ ಪ್ರಶ್ನೆಗಳನ್ನು ಎತ್ತವೆ. ಈ ಸಂಸ್ಥೆಗಳ ಮೂಲಕ ಗಣನೀಯ ಪ್ರಮಾಣದ ಹಣ ಹರಿದುಬರುತ್ತಿದ್ದರೂ ಸಹ, ಈ ಸಂಸ್ಥೆಗಳೊಂದಿಗೆ ತನ್ನ ಸಂಬಂಧಗಳನ್ನು ಮರೆಮಾಚಲು ಸಿಂಘಮ್ ಅವರ ಪ್ರಯತ್ನಗಳನ್ನು ವರದಿಯು ಎತ್ತಿ ತೋರಿಸುತ್ತದೆ.
ಚೀನಾದಲ್ಲಿ ಮಕ್ಕಳಿಗೆ ದಿನಕ್ಕೆ 2 ಗಂಟೆ ಮಾತ್ರ ಮೊಬೈಲ್ ನೋಡಲು ಅವಕಾಶ
ಚೀನೀ ಸರ್ಕಾರಕ್ಕಾಗಿ ಕೆಲಸ ಮಾಡುವುದನ್ನು ಸಿಂಘಮ್ ನಿರಾಕರಿಸಿದರೆ, ಚೀನಾದ ಪ್ರಚಾರಕ್ಕೆ ಅವರ ಸಂಪರ್ಕಗಳು ನಿಗೂಢವಾಗಿಯೇ ಉಳಿದಿವೆ. ಅವರ ನೆಟ್‌ವರ್ಕ್ ಶಾಂಘೈನ ಪ್ರಚಾರ ವಿಭಾಗದಿಂದ ಹಣ ಪಡೆದಿದ್ದನ್ನು ತೋರಿಸಿದೆ. ಇಲ್ಲಿನ ಸದಸ್ಯರು "ಚೀನಾದ ಧ್ವನಿಯನ್ನು ಜಗತ್ತಿಗೆ ಹರಡಲು" ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾರೆ, ಕಮ್ಯುನಿಸ್ಟ್ ಪಕ್ಷದ ಕಾರ್ಯಾಗಾರದಲ್ಲಿ ಸಿಂಘಮ್ ಅವರ ಸಂಪರ್ಕಗಳನ್ನು ವರದಿ ಬಹಿರಂಗ ಮಾಡಿದೆ.
ಮಣಿಪುರ ಹಿಂಸಾಚಾರದಲ್ಲಿ ವಿದೇಶಿ ಏಜೆನ್ಸಿಗಳ ಕೈವಾಡ ತಳ್ಳಿ ಹಾಕುವಂತಿಲ್ಲ: ಮಾಜಿ ಆರ್ಮಿ ಚೀಫ್ ನರವಾಣೆ
ಪ್ರಮುಖವಾಗಿ ನ್ಯೂಯಾರ್ಕ್ ಟೈಮ್ಸ್ ತನಿಖೆಯು ಈ ಜಾಲದ ಪ್ರಭಾವದ ಆಳವಾದ ವ್ಯಾಪ್ತಿಯನ್ನು ಪ್ರದರ್ಶಿಸುವ, ಸಾರ್ವಜನಿಕ ಭಾಷಣ ಮತ್ತು ನೀತಿ ನಿರ್ಧಾರಗಳ ಮೇಲೆ ತಪ್ಪು ಮಾಹಿತಿಯ ಪ್ರಭಾವ ಬೀರುವ ಸಂಕೀರ್ಣ ಕಾರ್ಯವಿಧಾನಗಳನ್ನು ಬಹಿರಂಗಪಡಿಸುತ್ತದೆ.