ಮತ್ತೆ ಪವಾರ್‌- ಪ್ರಶಾಂತ್‌ ಭೇಟಿ: 15 ದಿನದಲ್ಲಿ 3ನೇ ಸಲ ಸಮಾಲೋಚನೆ 2024ರಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಸಿದ್ಧತೆ

ನವದೆಹಲಿ(ಜೂ.24): 2024ರಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ದೃಷ್ಟಿಯಿಂದ 8 ವಿಪಕ್ಷಗಳ ನಾಯಕರು ಚರ್ಚೆ ನಡೆಸಿದ ಬೆನ್ನಲ್ಲೇ, ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಬುಧವಾರ ಮತ್ತೊಮ್ಮೆ ಎನ್‌ಸಿಪಿ ಪರಮೋಚ್ಚ ನಾಯಕ ಶರದ್‌ ಪವಾರ್‌ ಅವರನ್ನು ಭೇಟಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂಲಗಳ ಪ್ರಕಾರ ಪವಾರ್‌ ನಿವಾಸದಲ್ಲಿ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಪವಾರ್‌ 15 ದಿನದಲ್ಲಿ ನೇ ಪ್ರಶಾಂತ್‌ ಕಿಶೋರ್‌ ಜೊತೆ ಸಭೆ ನಡೆಸಿದಂತಾಗಿದೆ.

ಯೋಗಿ ನೇತೃತ್ವದಲ್ಲೇ ಎಲೆಕ್ಷನ್‌: ನಾಯಕತ್ವ ಗೊಂದಲಗಳಿಗೆ ತೆರೆ

ಪಶ್ಚಿಮ ಬಂಗಾಳ ಚುನಾವಣಾ ತಂತ್ರಜ್ಞರಾಗಿ ದೀದಿ ಗೆಲುವಿಗೆ ಕಾರಣಕರ್ತರಾದ ಕಿಶೋರ್‌ ಜೂ.11ರಂದು ಪವಾರ್‌ ಅವರನ್ನು ಭೇಟಿಯಾಗಿದ್ದರು. ಬಳಿಕ ಸೋಮವಾರ ಮತ್ತೊಮ್ಮೆ ಭೇಟಿಯಾಗಿ ಚರ್ಚೆ ನಡೆಸಿದ್ದರು.