ಯಾರ್‍ಯಾರು ದೇಶದ ಶ್ರೀಮಂತರ ಪಟ್ಟಿಯಲ್ಲಿದ್ದಾರೋ ಅವರೆಲ್ಲರೂ ಸಣ್ಣ ಪ್ರಯತ್ನದಿಂದಲೇ ಆರಂಭಿಸಿ ಇಂದು ದೊಡ್ಡ ಮಟ್ಟಕ್ಕೆ ತಲುಪಿದ್ದಾರೆ. ಆದ್ದರಿಂದ ಜೀವನದಲ್ಲಿ ‘ಪ್ರಯತ್ನ’ ಮಾಡುವುದನ್ನು ಎಂದಿಗೂ ನಿಲ್ಲಿಸಬಾರದು.

‘ಪ್ರಯತ್ನಂ ಸರ್ವ ಸಿದ್ಧಿ ಸಾಧನಂ’ ಅಂದ್ರೆ ನಿರಂತರವಾದ ಪ್ರಯತ್ನವೇ ಎಲ್ಲಾ ಯಶಸ್ಸು ಮತ್ತು ಸಾಧನೆಗಳಿಗೆ ಮೂಲ ಮಂತ್ರ. ಯಾವುದೇ ಗುರಿಯನ್ನು ತಲುಪಲು ಕೇವಲ ಅದೃಷ್ಟ ಅಥವಾ ಹಣೆಬರಹವನ್ನು ನಂಬಿ ಕೂರದೆ, ಪ್ರಾಮಾಣಿಕವಾಗಿ ಪ್ರಯತ್ನಪಡುವುದು ಅತ್ಯಂತ ಅವಶ್ಯಕ. ಯಾರ್‍ಯಾರು ದೇಶದ ಶ್ರೀಮಂತರ ಪಟ್ಟಿಯಲ್ಲಿದ್ದಾರೋ ಅವರೆಲ್ಲರೂ ಸಣ್ಣ ಪ್ರಯತ್ನದಿಂದಲೇ ಆರಂಭಿಸಿ ಇಂದು ದೊಡ್ಡ ಮಟ್ಟಕ್ಕೆ ತಲುಪಿದ್ದಾರೆ. ಹೀಮಾಲಯ ಪರ್ವತವನ್ನು ಒಂದೇ ಬಾರಿಗೆ ಏರಿ ಇಳಿಯುತ್ತೇನೆ ಅಂದ್ರೆ ಅದು ಅಸಾಧ್ಯವಾದುದು.

ಏಕೆಂದರೆ ಅದಕ್ಕೆ ಬಹಳ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಏನಾದರೂ ಕನಸು ಕಂಡಿದ್ದರೆ, ಸಾಧನೆ ಮಾಡಬೇಕೆಂದುಕೊಂಡಿದ್ದರೆ ಇಂದಿನಿಂದಲೇ ಸಣ್ಣ ಹೆಜ್ಜೆ ಇಡಲು ಪ್ರಯತ್ನಿಸಿ, ಅಲಖ್ ಪಾಂಡೆ ಎಂಬುವರು ನಿಮಗೆ ಗೊತ್ತಿರಬಹುದು, ಇವರು ಭಾರತದ ಪ್ರಸಿದ್ಧ ಶಿಕ್ಷಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು 1991ರಲ್ಲಿ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನಿಸಿದರು. ಅಲಖ್ ಪಾಂಡೆ ಅವರ ಬಾಲ್ಯವು ತೀವ್ರ ಆರ್ಥಿಕ ಸಂಕಷ್ಟಗಳಿಂದ ಕೂಡಿತ್ತು. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಎಷ್ಟು ಕಷ್ಟಕರವಾಗಿತ್ತೆಂದರೆ ಸಾಲ ತೀರಿಸಲು ಅವರ ಮನೆಯನ್ನೇ ಮಾರಾಟ ಮಾಡಬೇಕಾಗಿ ಬಂತು.

Physics Wallah ಯೂಟ್ಯೂಬ್ ಚಾನೆಲ್

ಈ ಕಾರಣದಿಂದಾಗಿ, ಅವರು ಸಣ್ಣ ಮಕ್ಕಳಿಗೆ ಟ್ಯೂಷನ್ ಹೇಳಿಕೊಡಲು ಪ್ರಾರಂಭಿಸಿದರು. ಬೋಧನೆ ಮೇಲಿನ ಆಸಕ್ತಿ ಮತ್ತು ಆರ್ಥಿಕ ಕಾರಣಗಳಿಂದಾಗಿ ಅವರು ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟು ಸ್ಥಳೀಯ ಕೋಚಿಂಗ್‌ ಸೆಂಟರ್‌ಗಳಲ್ಲಿ ಪಾಠ ಮಾಡಲು ಶುರು ಮಾಡಿದರು. ಆರಂಭದಲ್ಲಿ ಅವರಿಗೆ ಸಿಗುತ್ತಿದ್ದ ಸಂಭಳ ಐದು ಸಾವಿರ ಮಾತ್ರ. ಭೋಧನ ಆಸಕ್ತಿಯಿಂದಾಗಿ 2016ರಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳನ್ನು ಸರಳವಾಗಿ ಕಲಿಸಲು Physics Wallah ಎಂಬ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಭೋದನೆ ಮಾಡಿದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಅಲಖ್‌ ಅವರು ಸಂಕೀರ್ಣವಾದ ವಿಜ್ಞಾನದ ಸೂತ್ರಗಳನ್ನು ಸರಳ ಭಾಷೆಯಲ್ಲಿ, ಹಾಸ್ಯ ಮತ್ತು ಉದಾಹರಣೆಗಳ ಮೂಲಕ ಹೇಳಿಕೊಡುವುದರಿಂದ ವಿದ್ಯಾರ್ಥಿಗಳಿಗೆ ಅವರ ಬೋಧನೆ ಇಷ್ಟವಾದ ಬೇಗನೇ ಹೆಚ್ಚು ಜನಪ್ರಿಯರಾದರು.

ಅತ್ಯುತ್ತಮ ಸಂಸ್ಥೆ

ಮುಂದೇ ಅದೇ ಗುರಿಯೊಂದಿಗೆ ಮತ್ತೊಂದು ಹೆಜ್ಜೆ ಮುಂದಿಟ್ಟು 2020ರಲ್ಲಿ ಪ್ರತೀಕ್ ಮಹೇಶ್ವರಿ ಅವರೋಡನೆ ಸೇರಿ ಫಿಸಿಕ್ಸ್ ವಾಲಾ 'Physics Wallah' (PW) ಅನ್ನು ಸಂಸ್ಥೆಯನ್ನು ಸ್ಥಾಪಿಸಿದರು. ಆ ಸಂಸ್ಥೆ ಇಂದು ಭಾರತದಾದ್ಯಂತ ಜೆಇಇ, ನೀಟ್ ಕೋಚಿಂಗ್‌ ನೀಡುವ ಅತ್ಯುತ್ತಮ ಸಂಸ್ಥೆಯಾಗಿ ಬೆಳೆದು ನಿಂತಿದೆ. ಒಂದು ಕಾಲದಲ್ಲಿ ₹5000ಕ್ಕೆ ಪಾಠ ಮಾಡುತ್ತಿದ್ದ ಅಲಖ್ ಪಾಂಡೆ ಅವರ ಪ್ರಸ್ತುತ ಅಂದಾಜು ನಿವ್ವಳ ಮೌಲ್ಯವು ಸುಮಾರು ₹14,510 ಕೋಟಿಯಿಂದ ₹14,520 ಕೋಟಿಯಷ್ಟಿದೆ. ಇವರ ಜೀವನ ಆಧರಿಸಿ ಅಮೆಜಾನ್ ಮಿನಿ ಟಿವಿಯಲ್ಲಿ ''Physics Wallah'' ವೆಬ್ ಸೀರೀಸ್ ಕೂಡ ಬಿಡುಗಡೆಯಾಗಿದೆ.

ಅಲಖ್‌ ಪಾಂಡೆಯವರು ಈ ಹಂತಕ್ಕೆ ತಲುಪುವುದಕ್ಕೆ ಮುಖ್ಯ ಕಾರಣ ಅವರು ಮಾಡಿದ ಇಂದು ಸಣ್ಣ ಪ್ರಯತ್ನ ಇಂದು ದೊಡ್ಡ ಸಾಮ್ರಾಜ್ಯವಾಗಿ ಬೆಳದು ನಿಂತಿದೆ. ಅಲಖ್‌ ಪಾಂಡೆಯವರಿಂದ ಕಲಿಯಬೇಕಾಗಿರುವುದೇನೆಂದರೆ ಜೀವನದಲ್ಲಿ ‘ಪ್ರಯತ್ನ’ ಮಾಡುವುದನ್ನು ನಿಲ್ಲಿಸಬಾರದು. ಒಂದು ವೇಳೆ ಪ್ರಯತ್ನಪಟ್ಟೂ ಸೋತರೆ ಅನುಭವ ಆಗುತ್ತದೆ, ಒಂದು ವೇಳೆ ಗೆದ್ದರೆ ಸಾಮ್ರಾಜ್ಯವೇ ನಿರ್ಮಾಣವಾಗುತ್ತದೆ. ಆದ್ದರಿಂದ ನಮ್ಮ ಪ್ರಯತ್ನವನ್ನು ಮುಂದುವರಿಸೋಣ.