ಹಾಸ್ಟೆಲ್‌ ಕೊಠಡಿಯೊಳಗೆ ಕುಳಿತುಕೊಂಡು ವಿದ್ಯಾರ್ಥಿಯೋರ್ವ ಬಾಂಬ್ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದು, ಈ ವೇಳೆ ಬಾಂಬ್ ಸ್ಫೋಟಗೊಂಡು ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಆಘಾತಾಕಾರಿ ಘಟನೆ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ನಡೆದಿದೆ. 

ಅಲಹಾಬಾದ್‌: ಹಾಸ್ಟೆಲ್‌ ಕೊಠಡಿಯೊಳಗೆ ಕುಳಿತುಕೊಂಡು ವಿದ್ಯಾರ್ಥಿಯೋರ್ವ ಬಾಂಬ್ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದು, ಈ ವೇಳೆ ಬಾಂಬ್ ಸ್ಫೋಟಗೊಂಡು ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಆಘಾತಾಕಾರಿ ಘಟನೆ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ನಡೆದಿದೆ. ಹಾಸ್ಟೆಲ್‌ನಲ್ಲಿ ಬಾಂಬ್ ತಯಾರಿಸುತ್ತಿದ್ದ ವಿದ್ಯಾರ್ಥಿಯನ್ನು ಪ್ರಭಾತ್ ಯಾದವ್ ಎಂದು ಗುರುತಿಸಲಾಗಿದೆ. ಈತ ಅಲಾಹಾಬಾದ್‌ ವಿಶ್ವವಿದ್ಯಾಲಯದ ಎಂಎ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. 

ಈತ ಪಿಸಿ ಬ್ಯಾನರ್ಜಿ ಹಾಸ್ಟೆಲ್‌ನಲ್ಲಿ ವಾಸವಿದ್ದು, ಹಾಸ್ಟೆಲ್‌ನ ಕೊಠಡಿಯಲ್ಲಿ ಬಾಂಬ್ ಸಿದ್ಧಪಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಆದರೆ ಆತನ ದುರಾದೃಷ್ಟಕ್ಕೆ ಅದು ನಿರ್ಮಿಸುತ್ತಿದ್ದ ವೇಳೆಯೇ ಸ್ಫೋಟಗೊಂಡಿದೆ. ಬುಧವಾರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಎಂಎ ವಿದ್ಯಾರ್ಥಿಯೋರ್ವ ಈ ರೀತಿ ಬಾಂಬ್ ಏಕೆ ಸಿದ್ಧಪಡಿಸುತ್ತಿದ್ದ ಎಂಬ ಬಗ್ಗೆ ಸದ್ಯಕ್ಕೆ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 

ಪ್ರಿಯಕರನ ಜೊತೆ ಸೇರಿ ಪತ್ನಿಯ ಜೂಟಾಟ, 'ಬಾಂಬ್‌' ಮೆಸೇಜ್‌ ಕಳಿಸಿ ಗಂಡನಿಗೆ ಕೊಟ್ಲು ಜೈಲೂಟ!

ಬಾಂಬ್ ಆತನ ಕೈಯಲ್ಲೇ ಸ್ಫೋಟಗೊಂಡ ಪರಿಣಾಮ ಆತನ ಬಲಗೈ ಸಂಪೂರ್ಣ ಛಿದ್ರಗೊಂಡಿದೆ ಎಂದು ಅಲಹಾಬಾದ್ ಸಹಾಯಕು ಪೊಲೀಸ್ ಕಮೀಷನರ್ ರಾಜೇಶ್ ಕುಮಾರ್ ಯಾದವ್ ಹೇಳಿದ್ದಾರೆ. ಪ್ರಭಾತ್ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಹೇಳಿದ್ದಾರೆ. 

ರಾಮನಗರ: ಕನಕಪುರದಲ್ಲಿ ನಾಡಬಾಂಬ್ ಸ್ಫೋಟ, ವ್ಯಕ್ತಿಯ ಕೈ ಛಿದ್ರ ಛಿದ್ರ..!