ಪ್ರಿಯಕರನ ಜೊತೆ ಸೇರಿ ಪತ್ನಿಯ ಜೂಟಾಟ, 'ಬಾಂಬ್‌' ಮೆಸೇಜ್‌ ಕಳಿಸಿ ಗಂಡನಿಗೆ ಕೊಟ್ಲು ಜೈಲೂಟ!

ಪ್ರಿಯಕರನೊಂದಿಗೆ ಸೇರಿ ಬೆಂಗಳೂರಿನಲ್ಲಿ ಆರ್‌ಡಿಎಕ್ಸ್ ಬಾಂಬ್ ಸ್ಫೋಟಿಸುವುದಾಗಿ ಗಂಡನ ಮೊಬೈಲ್‌ನಿಂದ ಪೊಲೀಸರಿಗೆ ಮೆಸೇಜ್ ಕಳಿಸಿದ ಪತ್ನಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

Anekal Couple threaten RDX Bomb blast in Bengaluru sat

ಬೆಂಗಳೂರು (ಡಿ.05): ಪ್ರತಿನಿತ್ಯ ಗಂಡ ಕಚೇರಿಗೆ ಹೋದಾಕ್ಷಣ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಪ್ರಿಯಕರನೊಂದಿಗೆ ಜೂಟಾಟ ಆಡುತ್ತಿದ್ದ ಹೆಂಡತಿಯ ಮೊಬೈಲ್ ಅನ್ನು ಆಕೆಯ ಪತಿಯೇ ಒಡೆದು ಹಾಕಿದ್ದನು. ಇದರಿಂದ ಕೋಪಗೊಂಡ ಪತ್ನಿ ಪ್ರಿಯಕರನೊಂದಿಗೆ ಸೇರಿಕೊಂಡು ಆರ್‌ಡಿಎಕ್ಸ್ ಬಾಂಬ್ (RDX Bomb blast) ಸ್ಫೋಟಿಸುವುದಾಗಿ ಪೊಲೀಸರಿಗೆ ಸಂದೇಶ ಕಳಿಸಿದ್ದರು. ಇದನ್ನು ಪತ್ತೆಹಚ್ಚಿ ಬಂದ ಪೊಲೀಸರು ಗಂಡ- ಹೆಂಡತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಉಪಯೋಗಿಸುವ ಬಹುತೇಕರು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕಂಡುಬರುವ ಪೋಲಿ ಜೋಕ್ಸ್‌ಗಳ ಸಾಲಿನಲ್ಲಿ ಅಂಕಲ್‌ ಆಫೀಸ್‌ಗೆ ಆಂಟಿ ಟಾಕೀಸ್‌ಗೆ ಎಂಬ ಜೋಕ್‌ ಕೇಳಿರುತ್ತೀರಿ. ಅದೇ ರೀತಿ ಬೆಂಗಳೂರಿನಲ್ಲಿ ಗಂಡ ಬೆಳಗ್ಗೆ ಕಚೇರಿ ಕೆಲಸಕ್ಕೆ ತೆರಳುತ್ತಿದ್ದ ತಕ್ಷಣವೇ ಆತನ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಂದಿಗೆ ಚಾಟಿಂಗ್ ಮಾಡುತ್ತಾ ಅಕ್ರಮ ಸಂಬಂಧ ಬೆಳೆಸಲು ಮುಂದಾಗಿದ್ದಳು. ಇದರಿಂದ ಕೋಪಗೊಂಡ ಗಂಡ ಆಕೆಯ ಮೊಬೈಲ್ ಒಡೆದು ಹಾಕಿದ್ದನು. ಇದರಿಂದ ಗಂಡನಿಗೆ ಬುದ್ಧಿ ಕಲಿಸಬೇಕೆಂದುಕೊಂಡ ಪತ್ನಿ ಬೆಂಗಳೂರಿನಲ್ಲಿ ಆರ್‌ಡಿಎಕ್ಸ್ ಬಾಂಬ್ ಸ್ಫೋಟಿಸುವುದಾಗಿ ಪೊಲೀಸ್ ಠಾಣೆಗೆ ಹಾಗೂ ಕೇಂದ್ರ ತನಿಖಾ ಸಂಸ್ಥೆಗೆ ಗಂಡನ ಮೊಬೈಲ್‌ನಿಂದ ಸಂದೇಶ ಕಳಿಸಿದ ಘಟನೆ ಆನೇಕಲ್‌ನ ಮಾರುತಿ ಬಡಾವಣೆಯಲ್ಲಿ ನಡೆದಿದೆ.

ಬೆಂಗಳೂರು ಗಿರಿನಗರ ಬಾಬು ಕೊಲೆ: ಆಂಟಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಬೀದಿ ಹೆಣವಾದ

ಪೊಲೀಸರಿಗೆ ಬಾಂಬ್‌ ಹಾಕುವುದಾಗಿ ಸಂದೇಶ ಕಳುಹಿಸಿದ ಗೃಹಿಣಿ ಹೆಸರು ವಿದ್ಯಾರಾಣಿ. ಇನ್ನು ಈಕೆಯ ಗಂಡ ಕಿರಣ್ ಹೆಂಡತಿ ಮೇಲೆ ಕೋಪ ತೋರಿಸಿದ್ದಕ್ಕೆ ತಾನು ಮಾಡದ ತಪ್ಪಿಗಾಗಿ ಪೊಲೀಸರ ಅತಿಥಿಯಾಗಿದ್ದಾನೆ. ಇನ್ನು ವಿದ್ಯಾರಾಣಿಯೊಂದಿಗೆ ಪೊಲೀಸರಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲು ನೆರವಾಗಿದ್ದ ಪ್ರಿಯಕರ ರಾಮ್ ಪ್ರಸಾದ್‌ ಎಂಬಾತನಾಗಿದ್ದಾನೆ. ಸುಂದರ ಕುಟುಂಬದಲ್ಲಿ ಸಾಮಾಜಿಕ ಜಾಲತಾಣ ಚಾಟಿಂಗ್‌ನಿಂದಾದ ಎಡವಟ್ಟಿನಿಂದಾಗಿ ಈಗ ಮೂವರೂ ಜೈಲೂಟ ಮಾಡುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ: ಉತ್ತರ ಕರ್ನಾಟಕ ಮೂಲದ ಕಿರಣ್ ಮತ್ತು ವಿದ್ಯಾರಾಣಿ ದಂಪತಿ ಆನೇಕಲ್‌ನ ಮಾರುತಿ ಬಡಾವಣೆಯಲ್ಲಿ ವಾಸವಿದ್ದರು. ಮನೆಯಲ್ಲಿಯೇ ಇರುತ್ತಿದ್ದ ವಿದ್ಯಾರಾಣಿಗೆ ಸೋಷಿಯಲ್ ಮೀಡಿಯಾ ಆ್ಯಪ್‌ನಲ್ಲಿ ರಾಮ್‌ಪ್ರಸಾದ್ ಎನ್ನುವ ವ್ಯಕ್ತಿಯ ಪರಿಚಯವಾಗಿದೆ. ಗಂಡ ಕೆಲಸಕ್ಕೆ ಹೋದ ನಂತರ ವಿದ್ಯಾರಾಣಿ ಪರಿಚಿತ ವ್ಯಕ್ತಿ ರಾಮ್‌ಪ್ರಸಾದ್ ಜೊತೆ ನಿರಂತರ ಚ್ಯಾಟಿಂಗ್ ಮಾಡುತ್ತಿದ್ದಳು. ಇದು ಗಂಡ ಕಿರಣ್‌ಗೆ ಗೊತ್ತಾಗಿ ಮೊಬೈಲ್ ಹೊಡೆದು ಹಾಕಿದ್ದನು. ಈ ವಿಚಾರವನ್ನು ವಿದ್ಯಾರಾಣಿ ಬೇರೆ ನಂಬರ್ ಮೂಲಕ ರಾಮ್‌ಪ್ರಸಾದ್‌ಗೆ ತಿಳಿಸಿದ್ದಳು.

ಹೆಂಡ್ತಿ ಸರಿಯಾಗಿ ಆರೈಕೆ ಮಾಡ್ತಿಲ್ಲವೆಂದು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪಾಪಿ ಗಂಡ

ಪ್ರಿಯಕರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು:  ವಿದ್ಯಾರಾಣಿ ಗಂಡನಿಗೆ ಬುದ್ಧಿ ಕಲಿಸಬೇಕೆಂದು ಆಕೆಯ ಪ್ರಿಯಕರ ರಾಮ್ ಪ್ರಸಾದ್ ಪ್ಲಾನ್ ಮಾಡಿದ್ದನು. ನಾನು ಕಳುಹಿಸುವ ಮೆಸೇಜ್‌ನ ಗಂಡನ ಮೊಬೈಲ್ ನಂಬರ್‌ನಿಂದ ಫಾರ್ವಡ್ ಮಾಡು ಅಂತ ಸೂಚನೆ ನೀಡಿದ್ದನು. ಡಿಸೆಂಬರ್ 5ರಂದು RDX ಬಾಂಬ್ ಹಾಕುವುದಾಗಿ ಬೆದರಿಕೆ ಮೆಸೇಜ್ ಅನ್ನು ಕಿರಣ್ ನಂಬರ್‌ನಿಂದ ತನಿಖಾ ಸಂಸ್ಥೆಗಳಿಗೆ ರವಾನೆ ಮಾಡಿದ್ದಳು. ಬಳಿಕ ಗಂಡನ ಮೊಬೈಲ್‌ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು. ಮೆಸೇಜ್ ಬಂದಿದ್ದ ನಂಬರ್‌ನ ಮೂಲ ಹುಡುಕಿ ಹೊರಟಿದ್ದ ಪೊಲೀಸರು ಮತ್ತು ತನಿಖಾ ಸಂಸ್ಥೆಗಳು, ಕಿರಣ್ ಮನೆಗೆ ಬಂದಿದ್ದಾರೆ. ನಂತರ, ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಶೀಘ್ರದಲ್ಲೇ‌ ವಿದ್ಯಾರಣಿಯ ಪ್ರಿಯಕರ ರಾಮಪ್ರಸಾದನನ್ನು ಬಂದಿಸಲಾಗುವುದೆಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios