Asianet Suvarna News Asianet Suvarna News

ಲಿಪ್‌ಸ್ಟಿಕ್ ಯಾಕೆ? 18ರಲ್ಲೇ ಆಗಬೇಕು ಮದುವೆ; ಮುಸ್ಲಿಮ್ ಯುವತಿಯರಿಗೆ AIUDF ಮುಖ್ಯಸ್ಥರ ಸೂಚನೆ!

ಹುಡುಗಿಯರು ಲಿಪ್‌ಸ್ಟಿಕ್, ಮೇಕ್ಅಪ್ ಮಾಡುತ್ತಿದ್ದಾರೆ. ಕೆಲವರು ಹಿಜಾಬ್ ಧರಿಸಿಲ್ಲ. ಇದು ಶೈಕ್ಷಣಿಕ ಕಾರ್ಯಕ್ರಮ, ಯಾವುದೇ ಸಿನಿಮಾ ಕಾರ್ಯಕ್ರಮ ಅಲ್ಲ ಎಂದು AIUDF ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್, ಮುಸ್ಲಿಮ್ ಯುವತಿಯರ ವಿರುದ್ದ ಗರಂ ಆಗಿದ್ದಾರೆ. ಇದೇ ವೇಳೆ ಪೋಷಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

AIUDF chief badruddin Ajmal question Muslims girls wearing lipstick and makeup ckm
Author
First Published Jan 7, 2024, 9:19 PM IST | Last Updated Jan 7, 2024, 9:19 PM IST

ಅಸ್ಸಾಂ(ಜ.07)  ಅಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್( AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಪ್ರಚೋದನಕಾರಿ ಹಾಗೂ ಪ್ರಖರ ಹೇಳಿಕೆಗಳ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಮುಸ್ಲಿಮ್ ಹುಡುಗಿಯರು, ಯುವತಿಯರಿಕೆ ಖಡಕ್ ಸಂದೇಶ ರವಾನಿಸಿ ಸುದ್ದಿಯಾಗಿದ್ದಾರೆ. ಅಸ್ಸಾಂನ ಬಾರ್ಪೇಟ್‌ನಲ್ಲಿ ಅಜ್ಮಲ್ ಸೂಪರ್ 40 ಫೌಂಡೇಶನ್ ಮುಸ್ಲಿಮ್ ಸಮುದಾಯಕ್ಕೆ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಅಜ್ಮಲ್ ಗರಂ ಆಗಿದ್ದಾರೆ. ಮುಸ್ಲಿಮ್ ಹುಡುಗಿಯರು ಲಿಪ್‌ಸ್ಟಿಕ್, ಮೇಕ್‌ಅಪ್ ಮಾಡಿಕೊಂಡು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇಲ್ಲಿ ಯಾವುದೇ ಹೀರೋ ಬರುತ್ತಿಲ್ಲ. ಇದು ಶೈಕ್ಷಣಿಕೆ ಕಾರ್ಯಕ್ರಮ ಎಂದು ಎಚ್ಚರಿಸಿದ್ದಾರೆ.

ಧುರ್ಬಿ ಕ್ಷೇತ್ರದ ಸಂಸದರಾಗಿರುವ ಬದ್ರುದ್ದೀನ್ ಅಜ್ಮಲ್, ಮುಸ್ಲಿಂ ಹುಡುಗಿಯರು ಇತರ ವಿಷಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದು ತಪ್ಪು, ಲಿಪ್‌ಸ್ಟಿಕ್, ಮೇಕ್‌ಅಪ್‌ನಲ್ಲಿ ಕಾಲಕಳೆಯುವುದಲ್ಲ. ಇಲ್ಲಿಗೆ ಯಾರೆಲ್ಲಾ ಲಿಪ್‌ಸ್ಟಿಕ್, ಮೇಕ್‌ಅಪ್ ಮಾಡಿಕೊಂಡು ಬಂದಿದ್ದಾರೋ ಅವರಿಗೆಲ್ಲಾ ಮದುವೆ ಪ್ರಸ್ತಾಪ ಕಳುಹಿಸುತ್ತೇನೆ. ಪೋಷಕರೇ ನೀವು ಈ ಕುರಿತು ಎಚ್ಚರವಹಿಸಬೇಕು ಎಂದು ಅಜ್ಮಲ್ ಹೇಳಿದ್ದಾರೆ. ಇದೇ ವೇಳೆ ಹಿಜಾಬ್ ಧರಿಸಿದ ಆಗಮಿಸಿದ ಹಲವು ಮುಸ್ಲಿಮ್ ಯುವತಿಯರಿಗೆ ಹಾಗೂ ಅವರ ಪೋಷಕರಿಗೆ ಬದ್ರುದ್ದೀನ್ ಅಜ್ಮಲ್ ನೋಟಿಸ್ ನೀಡಿದ್ದಾರೆ.   

 

ರಾಹುಲ್ ಯಾತ್ರೆಗೆ ಜನ ಸೇರುತ್ತಾರೆ, ಮತ ಹಾಕಲ್ಲ; ಕಾರಣ ಬಿಚ್ಚಿಟ್ಟ AIUDF ಮುಖ್ಯಸ್ಥ ಬದ್ರುದ್ದೀನ್!

ಇತ್ತೀಚೆಗೆ ಬದ್ರುದ್ದೀನ್ ಅಜ್ಮಲ್ ಮದುವೆ ಕುರಿತು ನೀಡಿದ ಹೇಳಿಕೆ ವೈರಲ್ ಆಗಿತ್ತು. ಮುಸ್ಲಿಮ್ ಯುವಕರು 20 ರಿಂದ 22ನೇ ವಯಸ್ಸಿನೊಳಗೆ ಮದುವೆಯಾಗುತ್ತಾರೆ. ಮುಸ್ಲಿಮ್ ಯುವತಿಯರು 18 ವರ್ಷಕ್ಕೆ ಮದುವೆಯಾಗುತ್ತಾರೆ. ಆದರೆ ಹಿಂದೂಗಳು ಮದುವೆ 40 ವರ್ಷಕ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕೂ ಮುನ್ನ ಅಕ್ರಮವಾಗಿ 3 ಪತ್ನಿಯರನ್ನು ಇಟ್ಟುಕೊಂಡಿರುತ್ತಾರೆ ಎಂದಿದ್ದರು.

ಇತ್ತೀಚೆಗೆ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿದ್ದರು. ರಾಹುಲ್ ಗಾಂಧಿ ಯಾತ್ರೆ ಮಾಡುವಾಗ ಅಪಾರ ಜನ ಸೇರುತ್ತಾರೆ. ನೆಹರೂ ಕುಟುಂಬ ಕುಡಿ ಅನ್ನೋ ಕಾರಣಕ್ಕೆ ಜನ ಸೇರುತ್ತಾರೆ. ಆದರೆ ಹೀಗೆ ಸೇರಿದ ಜನ ರಾಹುಲ್ ಗಾಂಧಿಗೆ ಅಥವಾ ಕಾಂಗ್ರೆಸ್‌ಗೆ ಮತ ಹಾಕಲ್ಲ. ಈ ಹಿಂದೆ ಮಾಡಿದ ಯಾತ್ರೆಯಿಂದ ಕಾಂಗ್ರೆಸ್‌ಗೆ ಯಾವ ಲಾಭವಾಗಿದೆ ಎಂದು ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.

 

ಅತ್ಯಾಚಾರ, ಲೂಟಿ, ಡಕಾಯಿತಿಯಲ್ಲಿ ಮುಸ್ಲಿಮರೇ ನಂ.1: ವಿವಾದಿತ ಹೇಳಿಕೆ ನೀಡಿದ ಮುಸ್ಲಿಂ ಮುಖಂಡ
 

Latest Videos
Follow Us:
Download App:
  • android
  • ios