ರಾಹುಲ್ ಯಾತ್ರೆಗೆ ಜನ ಸೇರುತ್ತಾರೆ, ಮತ ಹಾಕಲ್ಲ; ಕಾರಣ ಬಿಚ್ಚಿಟ್ಟ AIUDF ಮುಖ್ಯಸ್ಥ ಬದ್ರುದ್ದೀನ್!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಗೊಳ್ಳುತ್ತಿದೆ. ಆದರೆ ಯಾತ್ರೆಗೂ ಮೊದಲೇ AIUDF ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ನೀಡಿದ ಹೇಳಿಕೆ ಕಾಂಗ್ರೆಸ್‌ಗೆ ಹಿನ್ನಡೆ ತಂದಿದೆ.
ಬಾರ್ಪೆಟಾ(ಜ.05) ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2ನೇ ಹಂತದ ಭಾರತ್ ಜೋಡೋ ಯಾತ್ರೆಗೆ ಸಜ್ಜಾಗಿದ್ದಾರೆ. ಈ ಭಾರಿ ಭಾರತ್ ಜೋಡೋ ನ್ಯಾಯ ಯಾತ್ರೆ ಅನ್ನೋ ಹೆಸರಿನಲ್ಲಿ ಯಾತ್ರೆ ಆರಂಭಗೊಳ್ಳುತ್ತಿದೆ. ಆದರೆ ಈ ಯಾತ್ರೆಗೂ ಮೊದಲೇ AIUDF ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಮಹತ್ವದ ಹೇಳಿಕೆ ನೀಡಿದ್ದು, ಕಾಂಗ್ರೆಸ್‌ಗೆ ಹಿನ್ನಡೆ ತಂದಿದೆ. ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಯಲ್ಲಿ ಜನ ಸೇರುತ್ತಾರೆ. ಆದರೆ ಆ ಜನ ರಾಹುಲ್ ಗಾಂಧಿಗೆ ಮತ ಹಾಕಲ್ಲ ಎಂದು ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.
ಆಲ್ ಇಂಡಿಯಾ ಡೆಮಾಕ್ರಟಿಕ್ ಫ್ರಂಟ್(AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಪ್ರಕಾರ, ರಾಹುಲ್ ಗಾಂಧಿ ನೆಹರು ಕುಟುಂಬದ ಕುಡಿ. ರಾಹುಲ್ ಗಾಂಧಿ ಎಲ್ಲೆ ಹೋದರೂ ಜನ ಸೇರುತ್ತಾರೆ. ರಾಹುಲ್ ಗಾಂಧಿಯನ್ನು ಹೀರೋ ರೀತಿ ನೋಡುತ್ತಾರೆ. ರಾಹುಲ್ ಗಾಂಧಿ ಜೊತೆ ಮಾತನಾಡುತ್ತಾರೆ. ಆದರೆ ಇದೇ ಜನ ರಾಹುಲ್ ಗಾಂಧಿಗೆ ಮತ ಹಾಕಲ್ಲ ಎಂದು ಬದ್ರುದ್ದೀನ್ ಹೇಳಿದ್ದಾರೆ.
ರಾಹುಲ್ ಗಾಂಧಿ ಪ್ರಧಾನಿ ರೇಸ್‌ನಲ್ಲಿಡುವ ಕಾಂಗ್ರೆಸ್ ಹಾದಿ ಮತ್ತಷ್ಟು ಸುಗಮ..? I.N.D.I.A ಕೂಟಕ್ಕೆ ನಿತೀಶ್ ಸಂಚಾಲಕ?
ಭಾರತ್ ಜೋಡೋ ಯಾತ್ರೆ ಮೊದಲ ಹಂತದಲ್ಲಿ ರಾಹುಲ್ ಗಾಂಧಿ ದೇಶದ ಶೇಕಡಾ 50 ರಷ್ಟು ಭೂಭಾಗ ಕ್ರಮಿಸಿದ್ದಾರೆ. ರಾಹುಲ್ ಗಾಂಧಿಯ ಯಾತ್ರೆಗೆ ಬಾರಿ ಸ್ಪಂದನೆ ಸಿಕ್ಕಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿನ ಫಲಿತಾಂಶ ಏನಾಯಿತು. ಕಾಂಗ್ರೆಸ್‌ಗೆ ಮತಗಳು ಸಿಕ್ಕಿತೆ? ಎಂದು ಬದ್ರುದ್ದೀನ್ ಪ್ರಶ್ನಿಸಿದ್ದಾರೆ.
ಜ.14ರಿಂದ 66 ದಿನಗಳ ಕಾಲ ನಡೆಯುವ ಈ ಯಾತ್ರೆಯ ಹೆಸರನ್ನು ಈ ಮುಂಚಿನ ‘ಭಾರತ್ ನ್ಯಾಯ ಯಾತ್ರೆ’ಯಿಂದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಎಂದು ಬದಲಿಸಲಾಗಿದೆ. ಜ.14ರಂದು ಮಧ್ಯಾಹ್ನ 12 ಗಂಟೆಗೆ ಇಂಫಾಲ್‌ನಲ್ಲಿ ಚಾಲನೆ ನೀಡಲಾಗುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ 66 ದಿನಗಳ ಕಾಲ ನಡೆಯುವ ಈ ಯಾತ್ರೆ, 15 ರಾಜ್ಯಗಳ 110 ಜಿಲ್ಲೆಗಳಲ್ಲಿ ಸುಮಾರು 6700 ಕಿ.ಮೀ. ಸಾಗಿದ ಬಳಿಕ ಮಹಾರಾಷ್ಟ್ರದ ಮುಂಬೈನಲ್ಲಿ ಅಂತ್ಯಗೊಳ್ಳಲಿದೆ. ಈ ಅವಧಿಯಲ್ಲಿ 100 ಲೋಕಸಭಾ ಕ್ಷೇತ್ರಗಳು ಮತ್ತು 337 ವಿಧಾನ ಸಭಾ ಕ್ಷೇತ್ರದಲ್ಲಿ ಯಾತ್ರೆ ಸಾಗಲಿದೆ. ಈ ಬಾರಿಯ ಯಾತ್ರೆ ಕಾಲ್ನಡಿಗೆ ಹಾಗೂ ಬಸ್ ಯಾತ್ರೆ ಎರಡನ್ನೂ ಒಳಗೊಂಡಿದೆ.
ಕಾಂಗ್ರೆಸ್‌ನಿಂದ ಉದ್ದುದ್ದ ಭಾರತ ಜೋಡೋ ಯಾತ್ರೆ ಆಯ್ತು, ಜ.14ರಿಂದ ಅಡ್ಡಡ್ಡ ಯಾತ್ರೆ ಆರಂಭ: ಇದು ಪಕ್ಕಾ ಬಸ್ ಯಾತ್ರೆ!
ಕಾಂಗ್ರೆಸ್‌ನ ಒಬ್ಬರೇ ಸಂಸದರಿರುವ ಉತ್ತರ ಪ್ರದೇಶದಲ್ಲಿ ಸುಮಾರು 1 ಸಾವಿರ ಕಿ.ಮೀ. ಪಾದಯಾತ್ರೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ 523 ಕಿ.ಮೀ. ದೂರ ಯಾತ್ರೆ ನಡೆಯಲಿದೆ. ಈ ಯಾತ್ರೆಗೆ ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳು ಮತ್ತು ಇತರ ಸಂಘಟನೆಗಳಿಗೆ ಆಹ್ವಾನ ನೀಡಲಾಗಿದೆ ಎಂದು ಜೈರಾಂ ರಮೇಶ್ ತಿಳಿಸಿದ್ದಾರೆ.