Asianet Suvarna News Asianet Suvarna News

ದೆಹಲಿ ಏರ್‌ಪೋರ್ಟ್‌, ಹೊಸ ಸಂಸತ್ತು ಎಲ್ಲವೂ ವಕ್ಫ್‌ ಆಸ್ತಿ: ಬದ್ರುದ್ದೀನ್‌ ಅಜ್ಮಲ್‌ ವಿವಾದಿತ ಹೇಳಿಕೆ

ಎಐಯುಡಿಎಫ್ ಮುಖ್ಯಸ್ಥ ಹಾಗೂ ಮಾಜಿ ಸಂಸದ ಬದ್ರುದ್ದೀನ್ ಅಜ್ಮಲ್, ವಸಂತ ವಿಹಾರ್‌ನಿಂದ ರಾಷ್ಟ್ರ ರಾಜಧಾನಿ ದೆಹಲಿಯ ವಿಮಾನ ನಿಲ್ದಾಣದವರೆಗಿನ ಪ್ರದೇಶವನ್ನು ವಕ್ಫ್ ಮಂಡಳಿಯ ಆಸ್ತಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ ಹೊಸ ಸಂಸತ್ ಕಟ್ಟಡವೂ ಸೇರಿದೆ.
 

 

AIUDF Chief Badruddin ajmal claims Parliament building to Airport made on Waqf Board land san
Author
First Published Oct 17, 2024, 4:58 PM IST | Last Updated Oct 17, 2024, 4:58 PM IST

ನವದೆಹಲಿ (ಅ.17): ಎಐಯುಡಿಎಫ್ ಅಧ್ಯಕ್ಷ  ಹಾಗೂ ಮಾಜಿ ಸಂಸದ ಬದ್ರುದ್ದೀನ್ ಅಜ್ಮಲ್ ಹೊಸ ಸಂಸತ್ ಭವನವನ್ನು ವಕ್ಫ್ ಭೂಮಿಯಲ್ಲಿ ನಿರ್ಮಿಸಲಾಗಿದೆ ಮತ್ತು ಸರ್ಕಾರವು ವಕ್ಫ್ ಭೂಮಿಯನ್ನು ಕಬಳಿಸಲು ಬಯಸಿದೆ ಎಂದು ಹೇಳಿದ್ದಾರೆ.ಸಂಸತ್ತು ಮಾತ್ರವಲ್ಲದೆ, ದೆಹಲಿಯ ರಾಷ್ಟ್ರ ರಾಜಧಾನಿಯ ಸಮೀಪ ಇರುವ ಎಲ್ಲಾ ಪ್ರದೇಶಗಳು ಮೂಲತಃ ವಕ್ಫ್‌ ಆಸ್ತಿ.ದೆಹಲಿ ವಸಂತ ವಿಹಾರದಿಂದ ಏರ್‌ಪೋರ್ಟ್‌ವರೆಗೆ ಹೋಗುವವರೆಗೆ ಸಿಗುವ ಎಲ್ಲಾ ಆಸ್ತಿಯೂ ಮೂಲತಃ ವಕ್ಫ್‌ ಆಸ್ತಿಯಾಗಿತ್ತು. ಇಲ್ಲಿ ಸರ್ಕಾರ ಕಟ್ಟಡಗಳನ್ನು ನಿರ್ಮಾಣ ಮಾಡಿದೆ ಎಂದಿದ್ದಾರೆ. ಈ ಪ್ರದೇಶದಲ್ಲಿ ಹೊಸ ಸಂಸತ್‌ ಭವನ ಕಟ್ಟಡ ಕೂಡ ನಿರ್ಮಾಣವಾಗಿದೆ. ವಕ್ಫ್‌ ಬೋರ್ಡ್‌ಗೆ ಸೇರಬೇಕಾಗಿರುವ 9.7 ಲಕ್ಷ ಭಿಗಾ ಜಾಗವನ್ನು ಕಬಳಿಸಲು ಸರ್ಕಾರ ಹುನ್ನಾರ ನಡೆಸುತ್ತಿದೆ. ಈ ವಕ್ಫ್‌ ಆಸ್ತಿಯನ್ನು ಸರ್ಕಾರವೇ ಮುಸ್ಲಿಂ ಸಮುದಾಯಕ್ಕೆ ಬೀಡಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರ ತರಲು ಇಚ್ಛಿಸಿರುವ ಹೊಸ ವಕ್ಫ್‌ ಕಾಯಿದೆಗೆ ವಿರೋಧ ವ್ಯಕ್ತಪಡಿಸಿರುವ ಅಜ್ಮಲ್‌, 'ಈ ಬಗ್ಗೆ ಈಗಾಗಲೇ ಧ್ವನಿ ಎತ್ತಲಾಗಿದೆ.ವಿಶ್ವದಲ್ಲಿರುವ ವಕ್ಫ್‌ ಆಸ್ತಿಗಳ ಬಗ್ಗೆ ಲಿಸ್ಟ್‌ಗಳು ಕೂಡ ಹೊರಬರುತ್ತಿವೆ.ಹೊಸ ಸಂಸತ್‌ ಭವನ, ಇದರ ಸುತ್ತಮುತ್ತಲ ಪ್ರದೇಶಗಳು. ವಸಂತ ವಿಹಾರದಿಂದ ದೆಹಲಿ ಏರ್‌ಪೋರ್ಟ್‌ಗೆ ಹೋಗುವ ಎಲ್ಲಾ ಪ್ರದೇಶಗಳಲ್ಲಿ ವಕ್ಫ್‌ ಆಸ್ತಿಯಲ್ಲಿ ಕಟ್ಟಡಗಳನ್ನು ಕಟ್ಟಲಾಗಿದೆ.ಅಲ್ಲದೆ, ದೆಹಲಿ ಏರ್‌ಪೋರ್ಟ್‌ಅನ್ನೂ ಕೂಡ ವಕ್ಫ್‌ ಆಸ್ತಿಯಲ್ಲಿಯೇ ಕಟ್ಟಲಾಗಿದೆ ಎಂದು ಜನರು ಹೇಳುತ್ತಿದ್ದಾರೆ' ಎಂದಿದ್ದಾರೆ.

ನಮ್ಮ ಅನುಮತಿಯೇ ಇಲ್ಲದೆ ವಕ್ಫ್‌ ಆಸ್ತಿಯನ್ನು ಬಳಕೆ ಮಾಡಿದ್ದು ತಪ್ಪು. ವಕ್ಫ್‌ ಬೋರ್ಡ್‌ ವಿಚಾರಕ್ಕೆ ಕೈ ಹಾಕಿದರೆ, ನರೇಂದ್ರ ಮೋದಿ ಸರ್ಕಾರ ತನ್ನ ಅಧಿಕಾರವನ್ನು ಕಳೆದುಕೊಳ್ಳಲಿದೆ ಎಂದು ಅಜ್ಮಲ್‌ ಹೇಳಿದ್ದಾರೆ.
ಇನ್ನೊಂದೆಡೆ ವಿರೋಧ ಪಕ್ಷಗಳು ನಾಯಕರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾಗೆ ಪತ್ರ ಬರೆದಿದ್ದು, ವಕ್ಫ್‌ (ತಿದ್ದುಪಡಿ) ಕಾಯಿದೆ 2024ನ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿಸಂಸದೀಯ ಸಮಿತಿಯ ನೀತಿ ನಿಯಮಗಳ ದೊಡ್ಡ ಉಲ್ಲಂಘೆಯಾಗಿದೆ ಎಂದು ಹೇಳಿದೆ.

ಅತ್ಯಾಚಾರ, ಲೂಟಿ, ಡಕಾಯಿತಿಯಲ್ಲಿ ಮುಸ್ಲಿಮರೇ ನಂ.1: ವಿವಾದಿತ ಹೇಳಿಕೆ ನೀಡಿದ ಮುಸ್ಲಿಂ ಮುಖಂಡ

ಅಕ್ಟೋಬರ್ 14 ರಂದು ಜಗದಂಬಿಕಾ ಪಾಲ್‌ ನೇತೃತ್ವದಲ್ಲಿ ನವದೆಹಲಿಯಲ್ಲಿ ಜೆಪಿಸಿ ಸಭೆ ನಡೆದಿದೆ. ಆದರೆ, ಈ ಸಭೆಯಲ್ಲಿ ಸಂಸದೀಯ ನೀತಿ ನಿಯಮಗಳ ದೊಡ್ಡ ಉಲ್ಲಂಘನೆಯಾಗಿದೆ. ಚೇರ್ಮನ್‌ ಜಗದಂಬಿಕಾ ಪಾಲ್‌, ಇದರಲ್ಲಿ ಅವರು ತಾರತಮ್ಯ ಎಸಗಿದ್ದಾರೆ. ಸಮಿತಿಯ ಮಿತಿಯ ಹೊರತಾಗಿ ಚೇರ್ಮನ್‌ ಜಗದಂಬಿಕಾ ಪಾಲ್‌ ಅವರು ಅನ್ವರ್‌ ಮಾಣಿಪ್ಪಾಡಿಗೆ ಆಹ್ವಾನ ನೀಡಿ ಸಾಕ್ಷ್ಯ ನೀಡುವಂತೆ ತಿಳಿಸಿದ್ದಾರೆ. ಕರ್ನಾಟಕ ವಕ್ಫ್‌ ಹಗಣರಣ ವರದಿ 2012 ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಇದರಲ್ಲಿ ವಕ್ಫ್‌ ಬಿಲ್‌ ಬಗ್ಗೆ ಯಾವುದೇ ಹೇಳಿಕೆಗಳಿಲ್ಲ. ಆದರೆ, ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕರ್ನಾಟಕ ಕಾಂಗ್ರೆಸ್‌ ನಾಯಕರ ಬಗ್ಗೆ ರಾಜಕೀಯ ಪ್ರೇರಿತ ಆರೋಪಗಳು ಮಾತ್ರವೇ ಇವೆ ಎಂದು ವಿರೋಧ ಪಕ್ಷಗಳ ನಾಯಕರು ತಿಳಿಸಿದ್ದಾರೆ.

ಹಿಂದೂ ಭಾವನೆ ಗೌರವಿಸಿ ಬಕ್ರೀದ್ ದಿನ ಗೋ ಮಾತೆ ಬಲಿ ಬೇಡ, ಬದ್ರುದ್ದೀನ್ ಅಜ್ಮಲ್ ಮನವಿ!

 

Latest Videos
Follow Us:
Download App:
  • android
  • ios