ಕೊರೋನಾದಿಂದ ಪಾರಾಗಲು ವಿದೇಶಕ್ಕೆ ಪಲಾಯನ; ಗಗನಕ್ಕೇರಿದ ವಿಮಾನ ದರ!

ಭಾರತದಲ್ಲಿ ಕೊರೋನಾ ವೈರಸ್ ಅತೀಯಾಗಿ ಭಾರತವನ್ನು ಕಾಡುತ್ತಿದೆ. 2ನೇ ಅಲೆಗೆ ಇಡೀ ದೇಶವೇ ತತ್ತರಿಸಿದೆ. ಸೋಂಕಿತರ ಚಿಕಿತ್ಸೆ ಸವಾಲಾಗಿ ಪರಿಣಮಿಸಿದೆ. ಇದರ ನಡುವೆ ಸೆಲೆಬ್ರೆಟಿಗಳು, ಶ್ರೀಮಂತರು ಕೊರೋನಾ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಹಾರುತ್ತಿದ್ದಾರೆ. ಇದರ ಪರಿಣಾಮ ಪ್ರೈವೇಟ್ ಜೆಟ್ ಬೆಲೆ ಗಗನಕ್ಕೇರಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Airfare increase after Indians escape a Covid surge before flight shut down ckm

ನವದೆಹಲಿ(ಏ.24): ಕೊರೋನಾ ವೈರಸ್ ಭಾರತದಲ್ಲಿ ಸೃಷ್ಟಿಸಿರುವ ಆತಂಕದ ವಾತಾವರಣ ಬಿಡಿಸಿ ಹೇಳಬೇಕಿಲ್ಲ. ಪ್ರತಿ ದಿನ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ, ಆಕ್ಸಿಜನ್ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಭಾರತವನ್ನು ಕಾಡುತ್ತಿದೆ. 2ನೇ ಕೊರೋನಾ ಅಲೆಗೆ ಬೆಚ್ಚಿ ಬಿದ್ದಿರುವ ಸೆಲೆಬ್ರೆಟಿಗಳು, ಶ್ರೀಮಂತರು ಇದೀಗ ಭಾರತದಿಂದ ವಿದೇಶಕ್ಕೆ ಹಾರುತ್ತಿದ್ದಾರೆ. ಪರಿಣಾಮ ವಿಮಾನ ದರ 10 ಪಟ್ಟು ಹೆಚ್ಚಾಗಿದೆ.

 ಕೊರೋನಾ 2ನೇ ಅಲೆ; ಕನೆಡಾ ವಿಮಾನ ಪ್ರಯಾಣ ರದ್ದುಗೊಳಿಸಿದ ಏರ್ ಇಂಡಿಯಾ

ಭಾರತದಿಂದ ಪಲಾಯನ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಯುನೈಟೆ ಅರಬ್ ಎಮಿರೈಟ್ಸ್ ಭಾರತದಿಂದ ಆಗಮಿಸುವವಿರೆಗೆ ನಿಷೇಧ ಹೇರಿದೆ. ನಿಷೇಧ ಘೋಷಣೆಗೂ ಮೊದಲು ಹಲವು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಹಲವರು ದುಬೈ, ಸೇರಿದಂತೆ ಕೆಲ ರಾಷ್ಟ್ರಗಳಿಗೆ ಪಲಾಯನ ಮಾಡುತ್ತಿದ್ದಾರೆ. ಇದೀಗ ದೆಹಲಿಯಿಂದ ದುಬೈ ವಿಮಾನ ದರ 80,000 ರೂಪಾಯಿ ಆಗಿದೆ. ಇದು ಸಾಮಾನ್ಯ ದರಕ್ಕಿಂತ 10 ಪಟ್ಟು ಹೆಚ್ಚಾಗಿದೆ.

ಪ್ರೈವೇಟ್ ಜೆಟ್ ಇದೀಗ 10 ರಿಂದ 12 ಪಟ್ಟು ಹೆಚ್ಚು ವಸೂಲಿ ಮಾಡುತ್ತಿದೆ. ಯುಎಇ ಹಾಗೂ ಭಾರತ ನಡುವೆ ಪ್ರತಿ ದಿನ 300ಕ್ಕೂ ಹೆಚ್ಚು ವಾಣಿಜ್ಯ ವಿಮಾನಗಳು ಸೇವೆ ನೀಡುತ್ತಿದೆ ಮುಂಬೈನಿಂದ ಲಂಡನ್ ವಿಮಾನ ದರ 1 ರಿಂದ 1.5 ಲಕ್ಷ ರೂಪಾಯಿ ಆಗಿದೆ. ಇದು ಕೂಡ ದುಪ್ಪಟ್ಟಾಗಿದೆ.

ಭಾರತದಿಂದ ದುಬೈಗೆ ಬರುವ ವಿಮಾನಗಳ ರದ್ದು

ಅಮೆರಿಕಾ ಪ್ರಯಾಣ ದರ ಕೂಡ ಇದೇ ರೀತಿ ದುಪ್ಪಟ್ಟಾಗಿದೆ.  ಕೆನಾಡ ಸೇರಿದಂತೆ ಹಲವು ದೇಶಗಳು ಭಾರತದಿಂದ ತಮ್ಮ ತಮ್ಮ ದೇಶ ಪ್ರವೇಶಿಸದಂತೆ ನಿರ್ಬಂಧ ಹೇರಿದೆ. 

ಭಾರತದಲ್ಲಿ ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ವೀಕೆಂಡ್ ಕರ್ಫ್ಯೂ, ಲಾಕ್‌ಡೌನ್ ಘೋಷಿಸಿದೆ. ಆದರೆ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿಲ್ಲ.

Latest Videos
Follow Us:
Download App:
  • android
  • ios