ದೇಶದೇಶದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಜೋರಾಗಿದೆ. ದಿನದಿಂದ ದಿನಕ್ಕೆ ಪ್ರಕರಣಗಳು ಅತ್ಯಧಿಕ ಸಂಖ್ಯೆಯಲ್ಲಿ ದಾಖಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಫ್ಲೈಟ್‌ಗಳಿಗೆ  ನಿಷೇಧ ಹೇರಲಾಗಿದೆ.

ದುಬೈ/ ಮೆಲ್ಬರ್ನ್‌(ಏ.23): ಭಾರತದಲ್ಲಿ ಕೊರೋನಾ ಪ್ರಕರಣಗಳು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ದ ವಿಮಾನಯಾನ ಸಂಸ್ಥೆಗಳು ಭಾರತದಿಂದ ದುಬೈಗೆ ಆಗಮಿಸುವ ವಿಮಾನಗಳನ್ನು ಏ.25ರಿಂದ 10 ದಿನಗಳ ಮಟ್ಟಿಗೆ ಅಮಾನತುಗೊಳಿಸಿವೆ.

Add Asianetnews Kannada as a Preferred SourcegooglePreferred

ಭಾರತದಿಂದ ದುಬೈಗೆ ಪ್ರಯಾಣಿಸಬೇಕಿದ್ದ ಎಮಿರೇಟ್ಸ್‌, ಫ್ಲೈ ದುಬೈ, ಏರ್‌ ಅರೇಬಿಯಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಆದರೆ, ಒಂದು ವೇಳೆ ಭಾರತೀಯರು ಬೇರೆ ದೇಶದಲ್ಲಿ 14 ದಿನಗಳ ಕಾಲ ತಂಗಿದ್ದರೆ ಅಲ್ಲಿಂದ ಯುಎಇಗೆ ಆಗಮಿಸಲು ಅವಕಾಶ ನೀಡಲಾಗಿದೆ.

ಭಾರತದ ವಿಮಾನಗಳಿಗೆ 2 ವಾರಗಳ ಕಾಲ ಹಾಂಗ್‌ಕಾಂಗ್‌ ನಿಷೇಧ! ..

ಇದೇ ವೇಳೆ ಭಾರತದಿಂದ ಆಗಮಿಸುವ ವಿಮಾನಗಳನ್ನು ಶೇ.30ರಷ್ಟುತಗ್ಗಿಸುವುದಾಗಿ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸ್ಸನ್‌ ಗುರುವಾರ ಘೋಷಿಸಿದ್ದಾರೆ. ಈ ನಡುವೆ ಬ್ರಿಟನ್ನಿನ ಅತಿ ದೊಡ್ಡ ವಿಮಾನ ನಿಲ್ದಾಣ ಹೀಥ್ರೂ ಏರ್‌ಪೋರ್ಟ್‌ ಭಾರತದಿಂದ ಹೊರಟಿದ್ದ 4 ಅಂತಾರಾಷ್ಟ್ರೀಯ ವಿಮಾನಗಳ ನಿಲುಗಡೆಗೆ ನಿರಾಕರಿಸಿದೆ. ಕೆಂಪು ಪಟ್ಟಿಯಲ್ಲಿರುವ ದೇಶಗಳ ವಿಮಾನಗಳಿಗೆ ನಿಷೇಧ ಹೇರಲಾಗಿದೆ. ಭಾರತವನ್ನೂ ಈ ಪಟ್ಟಿಗೆ ಸೇರಿಸಲಾಗಿದೆ ಎಂದು ಏರ್‌ಪೋರ್ಟ್‌ ತಿಳಿಸಿದೆ.