ಕೊರೋನಾ 2ನೇ ಅಲೆ; ಕನೆಡಾ ವಿಮಾನ ಪ್ರಯಾಣ ರದ್ದುಗೊಳಿಸಿದ ಏರ್ ಇಂಡಿಯಾ
ಭಾರತದಲ್ಲಿ ಕೊರೋನಾ ವೈರಸ್ 2ನೇ ಅಲೆ ಅತ್ಯಂತ ಸವಾಲಾಗಿ ಪರಿಣಮಿಸಿದೆ. ಸೋಕಿಂತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಪ್ರತಿ ದಿನ ದಾಖಲೆ ಮಟ್ಟದಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಿದೆ. ಭಾರತದಲ್ಲಿ ಕೊರೋನಾ ಮಿತಿ ಮೀರುತ್ತಿರುವ ಕಾರಣ ಏರ್ ಇಂಡಿಯಾ ಕೆನಾಡ ವಿಮಾನ ಪ್ರಯಾಣ ಸ್ಥಗಿತಗೊಳಿಸಿದೆ.
ನವದೆಹಲಿ(ಏ.23): ಕೊರೋನಾ ವೈರಸ್‌ಗೆ ದೇಶ ತತ್ತರಿಸಿದೆ. ಹಲವು ಸೇವೆಗಳು ಸ್ಥಗಿತಗೊಂಡಿದೆ. ಕೆಲ ರಾಜ್ಯಗಳಲ್ಲಿ ಅಗತ್ಯ ಸೇವೆ ಹಾಗೂ ತುರ್ತು ಸೇವೆ ಹೊರತು ಪಡಿಸಿ ಇನ್ನಲ್ಲಾ ಬಂದ್ ಆಗಿದೆ. ಇದರ ನಡುವೆ ಭಾರದಲ್ಲಿ ಕೊರೋನಾ ಪ್ರಕರಣ ನಿಯಂತ್ರಣ ಮೀರಿ ಸಾಗುತ್ತಿರುವ ಕಾರಣ ಕೆನಡಾ ಇದೀಗ ಭಾರತದ ವಿಮಾನಗಳಿಗೆ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ಏರ್ ಇಂಡಿಯಾ ಕೆನಾಡ ಪ್ರಯಾಣದ ವಿಮಾನಗಳನ್ನು ರದ್ದುಗೊಳಿಸಿದೆ.
ಕೊರೋನಾ ಅಟ್ಟಹಾಸ; ಭಾರತಕ್ಕೆ ನೆರವು ನೀಡಲು ಸಿದ್ಧ ಎಂದ ಚೀನಾ!
ಭಾರತ, ಪಾಕಿಸ್ತಾನ ಸೇರಿದಂತೆ ಕೆಲ ರಾಷ್ಟ್ರಗಳ ವಿಮಾನಗಳನ್ನು ಕೆನಾಡ ನಿಷೇಧಿಸಿದೆ. ವ್ಯಾನ್‌ಕವರ್ ಹಾಗೂ ಟೊರೆಂಟೋ ನಗರಕ್ಕೆ ವಿಮಾನ ಪ್ರಯಾಣವನ್ನು ರದ್ದುಗೊಳಿಸಿದೆ. ಈ ಕುರಿತು ಏರ್ ಇಂಡಿಯಾ ಸ್ಪಷ್ಟನೆ ನೀಡಿದೆ. ಇಷ್ಟೇ ಅಲ್ಲ ಟ್ವಿಟರ್ ಮೂಲಕವೂ ಮಾಹಿತಿ ಹಂಚಿಕೊಂಡಿದೆ.
ಆಕ್ಸಿಜನ್ ತುಂಬಿಸಲು ಟ್ಯಾಂಕರ್‌ಗಳನ್ನು ಏರ್‌ಲಿಫ್ಟ್ ಮಾಡಿಸಿದ IAF
ಮೇ.22ರವರೆಗೆ ಏರ್ ಇಂಡಿಯಾ ವಿಮಾನ ರದ್ದುಗೊಳಿಸಿದೆ. ಆದರೆ ಕಾರ್ಗೋ ವಿಮಾನ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇಲ್ಲ. ಕೊರೋನಾ ಕಾರಣ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಕೆಡನಾ ಸರ್ಕಾರ ಹೇಳಿದೆ. ಸದ್ಯ ಕೊರೋನಾ ಭೀಕರತೆಗೆ ಭಾರತ ನಲುಗಿದೆ. ಭಾರತದಲ್ಲಿ ಒಂದೇ ದಿನ 314,835 ಪ್ರಕರ ದಾಖಲಾಗಿದೆ.