ಏರ್ ಇಂಡಿಯಾ ಕ್ಯಾಟರಿಂಗ್ ಟೀಮ್ ಅವಾಂತರ: ವೆಜ್ ಆರ್ಡರ್ ಮಾಡಿದವಳಿಗೆ ಊಟದ ಮಧ್ಯೆ ಸಿಕ್ತು ಚಿಕನ್ ಫೀಸ್
ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಆರ್ಡರ್ ಮಾಡಿದ ಸಸ್ಯಾಹಾರಿ ಆಹಾರದಲ್ಲಿ ಚಿಕನ್ ಫೀಸ್ ಪತ್ತೆಯಾದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ.
ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಆರ್ಡರ್ ಮಾಡಿದ ಸಸ್ಯಾಹಾರಿ ಆಹಾರದಲ್ಲಿ ಚಿಕನ್ ಫೀಸ್ ಪತ್ತೆಯಾದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ. ವೀರ್ ಜೈನ್ ಎಂಬುವವರು ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇವರು ಕ್ಯಾಲಿಕಟ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ.
ನಾನು ಏರ್ ಇಂಡಿಯಾ ವಿಮಾನ ಎಐ582 ದಲ್ಲಿ ಪ್ರಯಾಣಿಸುತ್ತಿದ್ದೆ. ಅಲ್ಲಿ ನನಗೆ ಸಸ್ಯಾಹಾರಿ ಆಹಾರದ ಜೊತೆ ಚಿಕನ್ ಫೀಸ್ ನೀಡಿದರು. ನಾನು ಕ್ಯಾಲಿಕಟ್‌ನ ವಿಮಾನ ನಿಲ್ದಾಣದಿಂದ ವಿಮಾನವೇರಿದ್ದು, 6.40ಕ್ಕೆ ಹೊರಡಬೇಕಾದ ವಿಮಾನ ರಾತ್ರಿ 7. 40ಕ್ಕೆ ಹೊರಟಿತ್ತು ಎಂದು ಬರೆದುಕೊಂಡಿರುವ ಅವರು ವಿಮಾನದಲ್ಲಿ ತಮಗೆ ಸರ್ವ್ ಮಾಡಿದ ಆಹಾರದ ಫೋಟೋವನ್ನು ಶೇರ್ ಮಾಡಿದ್ದಾರೆ. ಶೇರ್ ಆದ ಸ್ವಲ್ಪ ಹೊತ್ತಿನಲ್ಲೇ ಈ ಪೋಸ್ಟ್ ವೈರಲ್ ಆಗಿದ್ದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರ ವೈರಲ್ ಆಗುತ್ತಿದ್ದಂತೆ ಏರ್ ಇಂಡಿಯಾವೂ ಕೂಡ ಮಹಿಳೆಯನ್ನು ಸಂಪರ್ಕಿಸಿದ್ದು, ತಮಗೆ ನೇರವಾಗಿ ಸಂದೇಶ ಕಳುಹಿಸುವ ಮೂಲಕ ನಮ್ಮನ್ನು ಸಂಪರ್ಕಿಸುವಂತೆ ಕೇಳಿದ್ದಾರೆ.
ಭಾರತಕ್ಕೆ ಬಂದಿಳಿಯಿತು ಮೊದಲ ವೈಡ್ ಬಾಡಿ ಎ 350 ವಿಮಾನ
ಶೇರ್ ಆಗಿರುವ ಫೋಟೋದಲ್ಲಿ ಅದು ಸಸ್ಯಾಹಾರಿ ಆಹಾರವೆಂದು ಉಲ್ಲೇಖವಿರುವ ಸ್ಲಿಪ್ ಕಾಣಿಸುತ್ತಿದೆ. ಆದರೂ ಆಹಾರ ಪೊಟ್ಟಣದೊಳಗೆ ನಾನ್ವೆಜ್ ತುಂಡೊಂದು ಸಿಕ್ಕಿದೆ. ಅಲ್ಲದೇ ಮತ್ತೊಂದು ಪೋಸ್ಟ್ ಮೂಲಕ ವೀರಾ ಜೈನ್ ಎಂಬುವವರು ಮತ್ತಷ್ಟು ಮಾಹಿತಿ ನೀಡಿದ್ದು, ನಾನು ಆಹಾರದಲ್ಲಿ ಚಿಕನ್ ಕಾಣಿಸಿಕೊಂಡಿದ್ದರ ಬಗ್ಗೆ ಕ್ಯಾಬಿನ್ ಸಿಬ್ಬಂದಿ ಸೋನಾ ಎಂಬುವವರಿಗೆ ತಿಳಿಸಿದಾಗ ಅವರು ಕ್ಷಮೆ ಕೇಳಿದರು. ಅಲ್ಲದೇ ಈ ವಿಚಾರವಾಗಿ ಇನ್ನು ಕೆಲವರು ದೂರು ನೀಡಿದ್ದಾರೆ ಎಂದು ಹೇಳಿದರು. ಆದರೆ ನಾವು ದೂರು ನೀಡಿದ ನಂತರವೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಸಸ್ಯಾಹಾರ ಸೇವಿಸುತ್ತಿದ್ದ ಇತರರಿಗೂ ಅದರ ಬಗ್ಗೆ ಮಾಹಿತಿ ನೀಡದೇ ಸುಮ್ಮನಾಗಿದ್ದಾರೆ ಎಂದು ದೂರಿದ್ದಾರೆ.
ಸೋರುತ್ತಿದೆ ಏರ್ ಇಂಡಿಯಾ ಮಾಳಿಗೆ, ವೈರಲ್ ವೀಡಿಯೋಗೆ ಸಂಸ್ಥೆ ಸ್ಪಷ್ಟನೆ!
ಈ ಅನಾಹುತದ ಜೊತೆ ವಿಮಾನವೂ ಕೂಡ ಒಂದು ಗಂಟೆ ವಿಳಂಬವಾಗಿತ್ತು ಹೀಗಾಗಿ ಅಹ್ಮದಾಬಾದ್‌ಗೆ ಹೋಗಬೇಕಾದ ತಮ್ಮ ಜೊತೆಗಿದ್ದ ಸ್ನೇಹಿತೆಯ ರೈಲು ತಪ್ಪುವ ಸಾಧ್ಯತೆ ಇತ್ತು. ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಅವರು ಡಿಜಿಸಿಎ ಹಾಗೂ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಟ್ಯಾಗ್ ಮಾಡಿದ್ದರು.