Asianet Suvarna News Asianet Suvarna News

ಭಾರತಕ್ಕೆ ಬಂದಿಳಿಯಿತು ಮೊದಲ ವೈಡ್‌ ಬಾಡಿ ಎ 350 ವಿಮಾನ

ಟಾಟಾ ಸಮೂಹದ ಏರ್‌ ಇಂಡಿಯಾವು, ಫ್ರಾನ್ಸ್‌ನ ಏರ್‌ಬಸ್‌ ಕಂಪನಿಯಿಂದ ಖರೀದಿಸಿರುವ 20 ವೈಡ್‌ ಬಾಡಿ (ಅಗಲವಾದ ರಚನೆ) ಎ350 -900 ವಿಮಾನಗಳ ಪೈಕಿ ಮೊದಲ ವಿಮಾನ ಶನಿವಾರ ನವದೆಹಲಿಗೆ ಬಂದಿಳಿದಿದೆ.

The first wide body A350 aircraft landed in India which was Aircraft of Airbus company purchased by Air India akb
Author
First Published Dec 24, 2023, 8:05 AM IST

ನವದೆಹಲಿ: ಟಾಟಾ ಸಮೂಹದ ಏರ್‌ ಇಂಡಿಯಾವು, ಫ್ರಾನ್ಸ್‌ನ ಏರ್‌ಬಸ್‌ ಕಂಪನಿಯಿಂದ ಖರೀದಿಸಿರುವ 20 ವೈಡ್‌ ಬಾಡಿ (ಅಗಲವಾದ ರಚನೆ) ಎ350 -900 ವಿಮಾನಗಳ ಪೈಕಿ ಮೊದಲ ವಿಮಾನ ಶನಿವಾರ ನವದೆಹಲಿಗೆ ಬಂದಿಳಿದಿದೆ. ಇದು ಏರ್‌ ಇಂಡಿಯಾ ಮಾತ್ರವಲ್ಲದೇ ಭಾರತದ ಯಾವುದೇ ವಿಮಾನಯಾನ ಕಂಪನಿಯೊಂದು ಖರೀದಿಸಿರುವ ಮೊದಲ ವೈಡ್‌ ಬಾಡಿ ಎ350 ವಿಮಾನವಾಗಿದೆ.

ಇತರೆ ವಿಮಾನಗಳಿಗೆ ಹೋಲಿಸಿದರೆ ಇದರಲ್ಲಿ ಹೆಚ್ಚು ಜನ ಪ್ರಯಾಣಿಸಬಹುದಾಗಿದ್ದು, ಇಂಧನ ವೆಚ್ಚವೂ ಇತರೆ ಸಾಂಪ್ರದಾಯಿಕ ವಿಮಾನಗಳಗಿಂತ ಶೇ.25ರಷ್ಟು ಕಡಿಮೆ. ಜೊತೆಗೆ ಹಲವು ಆಧುನಿಕ ಸೌಕರ್ಯ, ಹೆಚ್ಚಿನ ರಕ್ಷಣೆಯ ಸೌಲಭ್ಯಗಳನ್ನು ಅಂದಾಜು 2500 ಕೋಟಿ ರು. ವೆಚ್ಚದ ವಿಮಾನ ಹೊಂದಿದೆ.

ಏರ್ ಇಂಡಿಯಾ ಗಗನಸಖಿ, ಪೈಲೆಟ್‌ಗೆ ಮನೀಶ್ ಮಲ್ಹೋತ್ರಾ ಕೈಚಳದ ಹೊಸ ಸಮವಸ್ತ್ರ!

ಈ ವಿಮಾನಗಳನ್ನು ಕೆಲವು ದಿನಗಳ ಕಾಲ ಕಡಿಮೆ ಅಂತರದ ಪ್ರಯಾಣಕ್ಕೆ ಬಳಸಿ, ಅದರ ಸೌಲಭ್ಯಗಳ ಕುರಿತು ಪೈಲಟ್‌ಗಳಿಗೆ ಹೆಚ್ಚಿನ ಅರಿವು ಮೂಡಿಸಿದ ಬಳಿಕ ಅದನ್ನು ದೂರ ಪ್ರಯಾಣದ ಸಂಚಾರಕ್ಕೆ ಬಳಸಲು ಏರ್‌ ಇಂಡಿಯಾ ನಿರ್ಧರಿಸಿದೆ. ಸದ್ಯ ಒಂದು ವಿಮಾನ ಆಗಮಿಸಿದ್ದು, ಇನ್ನು 5 ವಿಮಾನಗಳು 2024ರ ಮಧ್ಯಭಾಗದಲ್ಲಿ ಹಸ್ತಾಂತರವಾಗಲಿದೆ. ಬಳಿಕ ಹಂತಹಂತವಾಗಿ ಉಳಿದ 14 ವಿಮಾನಗಳು ಏರ್‌ ಇಂಡಿಯಾಕ್ಕೆ ಪೂರೈಕೆಯಾಗಲಿದೆ.

ಸರ್ಕಾರದಿಂದ ಏರ್‌ ಇಂಡಿಯಾವನ್ನು ಖರೀದಿಸಿರುವ ಟಾಟಾ ಸಮೂಹ, ಕಂಪನಿಗೆ ಹೊಸ ಸ್ಪಷ್ಟ ನೀಡುವ ನಿಟ್ಟಿನಲ್ಲಿ ಏರ್‌ಬಸ್‌ ಕಂಪನಿಯ 250 ವಿಮಾನ ಮತ್ತು ಬೋಯಿಂಗ್‌ ಕಂಪನಿಯ 220 ವಿಮಾನಗಳನ್ನು ಖರೀದಿ ಮಾಡಲು 5.81 ಲಕ್ಷ ಕೋಟಿ ರು. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಮೂಲಕ ಏಕಕಾಲಕ್ಕೆ ಇಷ್ಟು ದೊಡ್ಡ ಪ್ರಮಾಣದ ವಿಮಾಣ ಖರೀದಿ ಒಪ್ಪಂದ ಮಾಡಿಕೊಂಡ ವಿಶ್ವದ ಮೊದಲ ಕಂಪನಿ ಎಂಬ ದಾಖಲೆಗೆ ಪಾತ್ರವಾಗಿತ್ತು.

ಪ್ರಯಾಣಿಕರಿಗೆ ಸೌಲಭ್ಯ ನೀಡದ ಹಿನ್ನೆಲೆ: ಡಿಜಿಸಿಎನಿಂದ ಏರ್‌ ಇಂಡಿಯಾಗೆ 10 ಲಕ್ಷ ರು. ದಂಡ

Follow Us:
Download App:
  • android
  • ios