Asianet Suvarna News Asianet Suvarna News

AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ದೆಹಲಿ ನಿವಾಸದ ಮೇಲೆ ಕಲ್ಲು ತೂರಾಟ

 ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ದೆಹಲಿಯಲ್ಲಿರುವ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದೆ.

AIMIM chief Asaduddin Owaisi residence  in Delhi attacked with stones by Unidentified miscreants akb
Author
First Published Feb 20, 2023, 10:45 AM IST

ದೆಹಲಿ:  ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ದೆಹಲಿಯಲ್ಲಿರುವ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದೆ. ಓವೈಸಿ ಮನೆ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ದಾಳಿಯ ವೇಳೆ ಅವರು ಊರಿನಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಎಐಎಂಐಎಂ ಮುಖ್ಯಸ್ಥ  ಅಸಾದುದ್ದೀನ್ ಒವೈಸಿ ತಮ್ಮ ಮನೆಯ ಮೇಲೆ ಕಲ್ಲು ತೂರಾಟ ನಡೆದ ನಂತರದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು,  2014 ರಿಂದ ಇಲ್ಲಿವರೆಗೆ ನಡೆದ ಇಂತಹ ನಾಲ್ಕನೇ ಪ್ರಕರಣ ಇದು ಎಂದು ಅವರು ಆರೋಪಿಸಿದ್ದಾರೆ.  ಜೈಪುರದಿಂದ ಹಿಂದಿರುಗುವ ವೇಳೆ ಅವರ ಮನೆ ಕೆಲಸದವರು ಅವರಿಗೆ ಈ ವಿಚಾರ ತಿಳಿಸಿದ್ದಾರೆ ಎಂದು ಅವರು ಹೇಳಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ದೆಹಲಿ ಪೊಲೀಸರಿಗೆ ಅವರು ಒತ್ತಾಯಿಸಿದ್ದಾರೆ. 

ಮನೆಯ ಮೇಲೆ ಕಲ್ಲು ತೂರಾಟ ನಡೆದಿದರುವುದರಿಂದ ಮನೆಯ ಕಿಟಕಿ ಗಾಜುಗಳು ಒಡೆದು ಹೋಗಿವೆ. ನವದೆಹಲಿಯ ಅಶೋಕ್ ರೋಡ್‌ನಲ್ಲಿರುವ (Ashoka Road) ನಿವಾಸದಲ್ಲಿ ಈ ಘಟನೆ ನಡೆದಿದೆ.  ಕಳೆದ ರಾತ್ರಿ ನಾನು ಜೈಪುರದಿಂದ ಬರುತ್ತಿದ್ದಾಗ ನಮ್ಮ ಮನೆ ಕೆಲಸದವರು, ಮನೆ ಮೇಲೆ ಕಲ್ಲು ತೂರಾಟ ನಡೆದಿದ್ದು, ಇದರಿಂದ ಮನೆ ಕಿಟಕಿ ಗಾಜು ಪುಡಿಯಾಗಿರುವುದಾಗಿ ವಿಚಾರ ತಿಳಿಸಿದರು ಎಂದು ಒವೈಸಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ವಿಧಾನಸಭಾ ಚುನಾವಣೆಗೆ ಕಣ ಸಿದ್ಧಗೊಳಿಸುತ್ತಿದೆ ಎಐಎಂಐಎಂ!

2021ರಲ್ಲಿ ಹಿಂದೂ ಸೇನಾ (Hindu Sena) ಎಂಬ ಸಂಘಟನೆಯೂ ಹಿಂದೂ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ಹೈದರಾಬಾದ್ (Hyderabad)ಮೂಲದ ಈ ಸಂಸದನ ಮನೆಯ ಮೇಲೆ ದಾಳಿ ನಡೆಸಿತ್ತು. ನನಗೆ ಈ ಎಲ್ಲಾ ವಿಷಯಗಳು ಅಭ್ಯಾಸವಾಗಿವೆ. ನಾನು ಇದನ್ನು ಬಹಳ ಸಮಯದಿಂದ ಇದನ್ನು ನೋಡುತ್ತಿದ್ದೇನೆ. ಹೆಚ್ಚು ಸುರಕ್ಷಿತ ಪ್ರದೇಶದಲ್ಲಿರುವ ಈ ಮನೆಯ ಮೇಲೆ  ದಾಳಿ ನಡೆಸುವುದಕ್ಕೆ ಜನ ಧೈರ್ಯ ಮಾಡುತ್ತಿರುವುದನ್ನು ನೋಡಿ ನನಗೆ ಅಚ್ಚರಿಯಾಗಿದೆ. ಈ ದಾಳಿಗಳು ನಾನು ಮಾಡುವುದನ್ನು ಮಾಡುತ್ತಿರುವುದನ್ನು ತಡೆಯಲಾಗದು ಎಂದು ಅವರು ಹೇಳಿಕೊಂಡಿದ್ದಾರೆ. ಭಾನುವಾರ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಒವೈಸಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ (Parliament Street Police Station) ಪ್ರಕರಣ ದಾಖಲಿಸಿದ್ದಾರೆ. ಹೆಚ್ಚುವರಿ ಡಿಸಿಪಿ ನೇತೃತ್ವದ ಪೊಲೀಸ್ ತಂಡವೊಂದು ಅವರ ನಿವಾಸಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದೆ. 

AIMIM ಸದಸ್ಯತ್ವ ಹೆಚ್ಚಿಸಿಕೊಳ್ಳಲು Owaisi ಪಕ್ಷದಿಂದ Biryani ಆಫರ್‌!

 

 

ನಮ್ ಮಕ್ಳು ಹಿಜಾಬ್ ಹಾಕ್ತಾರೆ ನೀವು ಬಿಕಿನಿ ಹಾಕ್ಕೊಳ್ಳಿ

ಈ ಹಿಂದೆ ಹಿಜಾಬ್ ವಿವಾದ ತಾರಕಕ್ಕೇರಿದಾಗ ಓವೈಸಿ ವಿವಾದಾತ್ಮಕ ಹೇಳಿಕೆ ನೀಡಿದ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿದ್ದರು. . ಮುಸ್ಲಿಮ್ ಹೆಣ್ಣು ಮಕ್ಕಳು ಅವರಿಷ್ಟದಂತೆ ಹಿಜಾಬ್ ಧರಿಸುತ್ತಿದ್ದಾರೆ. ಇದನ್ನು ತಡೆಯುವ ಪ್ರಯತ್ನ ಯಾಕೆ, ನಮ್ಮ ಮಕ್ಕಳು ಹಿಜಾಬ್ ಧರಿಸಲಿ, ನೀವು ಬೇಕಾದರೆ ಬಿಕಿನಿ ಹಾಕಿಕೊಳ್ಳಿ ಎಂದು ಓವೈಸಿ ಹೇಳಿದ್ದರು. ಈ ವಿಡಿಯೋ ವೈರಲ್ ಆಗಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.   ಮುಸ್ಲಿಮ್ ಹೆಣ್ಣುಮಕ್ಕಳ ಹಿಜಾಬ್ ತೆಗೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ ಒವೈಸಿ.  ಮುಸ್ಲಿಮ್ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ಇಚ್ಚಿಸುತ್ತಿದ್ದಾರೆ. ಹಿಜಾಬ್ ಧರಿಸಿದ್ದಾರೆ ಎಂದರೆ ಅವರ ಬುದ್ಧಿಶಕ್ತಿಯನ್ನು ಮುಚ್ಚುತ್ತಿದ್ದಾರೆ ಎಂದರ್ಥವಲ್ಲ. ಮುಸ್ಲಿಮ್ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಲು ಯಾರೂ ಒತ್ತಾಯ ಮಾಡುತ್ತಿಲ್ಲ. ಅವರ ಇಚ್ಚೆ ಅದು. ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ, ಆದರೆ ನಮ್ಮ ಮುಸ್ಲಿಮ್ ಹೆಣ್ಣುಮಕ್ಕಳು ಹಿಜಾಬ್ ಧರಿಸುತ್ತಾರೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದರು.

Follow Us:
Download App:
  • android
  • ios