AIMIM ಸದಸ್ಯತ್ವ ಹೆಚ್ಚಿಸಿಕೊಳ್ಳಲು Owaisi ಪಕ್ಷದಿಂದ Biryani ಆಫರ್‌!

ಪಕ್ಷದ ಸದಸ್ಯತ್ವ ಹೆಚ್ಚಿಸಲು ಒವೈಸಿ ಪಕ್ಷ ಬಿರಿಯಾನಿ ಆಫರ್‌ ನೀಡುತ್ತಿದೆ. ಬಿಜೆಪಿ ಅಥವಾ ಪಕ್ಷಗಳಲ್ಲಿ ಗೌರವ ಸಿಗದ ಕಾರ‍್ಯಕರ್ತರನ್ನು ನಾವು ಸ್ವಾಗತಿಸುತ್ತೇವೆ. ಅವರು ನಮ್ಮ ಪಕ್ಷವನ್ನು ಸೇರಲು ಬಂದರೆ ಅವರಿಗೆ ಮನೆಗೆ ಬಂದ ಅತಿಥಿಗಳಂತೆ ಬಿರಿಯಾನಿ ಅಥವಾ ಸಮೋಸಾ, ಟೀಯಂತಹ ಉಪಾಹಾರ ನೀಡಿ ಗೌರವಿಸುತ್ತೇವೆ ಎಂದು ಎಐಎಂಐಎಂ ನಾಯಕ ಹೇಳಿದ್ದಾರೆ. 

owaisis party leader offers biryani to new entrants to boost membership in madhya pradesh ash

ಭೋಪಾಲ್‌: ಪಕ್ಷದ ಸದಸ್ಯತ್ವವನ್ನು ಹೆಚ್ಚು ಮಾಡುವ ಸಲುವಾಗಿ ಪಕ್ಷಕ್ಕೆ ಸೇರಲು ಬಯಸುವವರಿಗೆ ಅಸಾದುದ್ದೀನ್‌ ಓವೈಸಿ (Asaduddin Owaisi) ಅವರ ಎಐಎಂಐಎಂನ (AIMIM) ನಾಯಕರೊಬ್ಬರು ಬಿರಿಯಾನಿ (Biryani) ಮತ್ತು ಬೆಳಗ್ಗಿನ ಉಪಾಹಾರ (Breakfast) ನೀಡುವುದಾಗಿ ಘೋಷಿಸಿದ ಪ್ರಸಂಗ ಮಧ್ಯಪ್ರದೇಶದ (Madhya Pradesh) ಭೋಪಾಲ್‌ನಲ್ಲಿ (Bhopal) ನಡೆದಿದೆ. ಈ ಪ್ರದೇಶದಲ್ಲಿ ಪಕ್ಷದ ಬಲವನ್ನು ಹೆಚ್ಚಿಸಲು ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ. ಈ ನಿಮಿತ್ತ ಮಾತನಾಡಿದ ಪಕ್ಷದ ನಾಯಕ ಪೀರ್‌ಜಾದಾ ನಿಜಾಮಿ, ‘ಬಿಜೆಪಿ ಅಥವಾ ಪಕ್ಷಗಳಲ್ಲಿ ಗೌರವ ಸಿಗದ ಕಾರ‍್ಯಕರ್ತರನ್ನು ನಾವು ಸ್ವಾಗತಿಸುತ್ತೇವೆ. ಅವರು ನಮ್ಮ ಪಕ್ಷವನ್ನು ಸೇರಲು ಬಂದರೆ ಅವರಿಗೆ ಮನೆಗೆ ಬಂದ ಅತಿಥಿಗಳಂತೆ ಬಿರಿಯಾನಿ ಅಥವಾ ಸಮೋಸಾ, ಟೀಯಂತಹ ಉಪಾಹಾರ ನೀಡಿ ಗೌರವಿಸುತ್ತೇವೆ. ಅವರು ಸರಿಯಾದ ಪಕ್ಷಕ್ಕೆ ಸೇರಲು ಬಯಸಿದರೆ ನಾವು ಅವರ ಸಮಸ್ಯೆಗಳನ್ನು ಕೇಳಿ, ಪರಿಹರಿಸುತ್ತೇವೆ’ ಎಂದು ಹೇಳಿದ್ದಾರೆ.

ಅಸಾದುದ್ದೀನ್‌ ಓವೈಸಿ ನೇತೃತ್ವದ ಪಕ್ಷ ಇದೇ ಮೊದಲ ಬಾರಿಗೆ ಮಧ್ಯ ಪ್ರದೇಶ ರಾಜ್ಯದಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಿ 7 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇತ್ತೀಚೆಗೆ ನಡೆದ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ 7 ಕಾರ್ಪೊರೇಟರ್‌ಗಳನ್ನು ಪಡೆದುಕೊಂಡಿದೆ.

ಇದನ್ನು ಓದಿ: ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗ್ತಿದೆ; ನಮ್ಮಿಂದಲೇ ಹೆಚ್ಚು ಕಾಂಡೋಮ್‌ ಬಳಕೆ: Asaduddin Owaisi

ಹೊಸಬರಿಗೆ ಮಾಲೆ ಹಾಕಿ ಅವರವರ ಧಾರ್ಮಿಕ ಆಚರಣೆಗಳಿಗೆ ಅನುಗುಣವಾಗಿ ಅನ್ನಸಂತರ್ಪಣೆ ಮಾಡಲಾಗುತ್ತದೆ ಎಂದೂ ಪಕ್ಷದ ನಾಯಕ ಪೀರ್‌ಜಾದಾ ನಿಜಾಮಿ ಅವರು ಹೇಳಿದರು. "ಅವರು ಸರಿಯಾದ ಸ್ಥಳಕ್ಕೆ ಬಂದಿದ್ದಾರೆ ಎಂದು ಅವರು ಭಾವಿಸಬೇಕು. ನಾನು ಅವರ ಸಮಸ್ಯೆಗಳನ್ನು ಆಲಿಸುತ್ತೇನೆ ಮತ್ತು ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ" ಎಂದು ಸಹ ಅವರು ಹೇಳಿದರು.

ಈ ಅಭಿಯಾನದಲ್ಲಿ ಇದುವರೆಗೆ 20,000 ಕ್ಕೂ ಹೆಚ್ಚು ಜನರು ಪಕ್ಷಕ್ಕೆ ಸೇರಿದ್ದಾರೆ, ದೀಪಾವಳಿ ನಂತರ ಭೋಪಾಲ್‌ನ ಇತರ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕ್ರಮವನ್ನು ಪಕ್ಷವು ಪುನರಾವರ್ತಿಸಲಿದೆ ಎಂದು ಎಐಎಂಐಎಂ ನಾಯಕ ಹೇಳಿದ್ದಾರೆ. "ಇತ್ತೀಚೆಗೆ ನಡೆದ ನಗರ ಸಂಸ್ಥೆಗಳ ಚುನಾವಣೆಯ ಸಮಯದಲ್ಲಿ ನಾವು ಪಕ್ಷದ ಅಧ್ಯಕ್ಷ ಓವೈಸಿ ಅವರ ಸಾರ್ವಜನಿಕ ಸಭೆಯನ್ನು ನರೇಲಾದಲ್ಲಿ ಆಯೋಜಿಸಿದ್ದೇವೆ" ಎಂದು ನಿಜಾಮಿ ಹೇಳಿದರು. ಅಲ್ಲದೆ, ಭೋಪಾಲ್‌ನಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಲು ತನಗೆ ತಿಳಿಸಲಾಗಿದೆ ಎಂದೂ ಎಐಎಂಐಎಂ ನಾಯಕ ಪೀರ್‌ಜಾದಾ ನಿಜಾಮಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಗಡಿಯಲ್ಲಿ BSF ಯೋಧರು ಬಿರಿಯಾನಿ ತಿಂದು ಮಲಗಿದ್ದಾರಾ? ಬಾಂಗ್ಲಾ ನುಸುಳುವಿಕೆ ಆರೋಪಕ್ಕೆ ಒವೈಸ್ ಕೆಂಡ!

Latest Videos
Follow Us:
Download App:
  • android
  • ios