Asianet Suvarna News Asianet Suvarna News

ಹಿಂದೂಗಳು ಲವ್ ಜಿಹಾದ್ ಮಾಡಿ ನಿಮ್ಮ ತಾಕತ್ತೇನು ನೋಡುತ್ತೇವೆ ಎಂದ ಸಂಸದ

ಮುಸ್ಲಿಂ ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಥನೆ ನೀಡಲು ಹೋಗಿ ಎಐಡಿಯುಎಫ್‌ನ ಸಂಸದರೊಬ್ಬರು ವಿವಾದ ಸೃಷ್ಟಿಸಿದ್ದಾರೆ.

AIDUF MP Badruddin Ajmal made a controversial statement that you hindus also do love jihad if you have dare akb
Author
First Published Dec 4, 2022, 10:25 AM IST

ಕರೀಂಗಂಜ್: ಮುಸ್ಲಿಂ ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಥನೆ ನೀಡಲು ಹೋಗಿ ಎಐಡಿಯುಎಫ್‌ನ ಸಂಸದರೊಬ್ಬರು ವಿವಾದ ಸೃಷ್ಟಿಸಿದ್ದಾರೆ. ಹಿಂದೂ ಯುವಕರು ಮದುವೆಗೆ ಮೊದಲೇ ಎಲ್ಲಾ ಮಜಾ ಮಾಡುತ್ತಾರೆ. ನಂತರ 40 ಕಳೆದ ಮೇಲೆ ಪೋಷಕರ ಒತ್ತಾಯಕ್ಕೆ ಮದ್ವೆಯಾಗುತ್ತಾರೆ. ಭೂಮಿ ಫಲವತ್ತಾಗಿರುವಾಗ ಉಳುಮೆ ಮಾಡಬೇಕು ಬರಡಾದ ಮೇಲೆಲ್ಲ ಫಲವತ್ತಾಗಿರುವಾಗ ಉಳುಮೆ ಮಾಡಿದರೆ ಉತ್ತಮ ಫಸಲು ಬರುತ್ತದೆ ಎಂದು ಎಐಡಿಯುಎಫ್‌ ಸಂಸದ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮುಸ್ಲಿಂ ಜನಸಂಖ್ಯೆ(Muslim population) ಶೀಘ್ರ ಹೆಚ್ಚಳದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಹಿಂದೂಗಳು (Hindu) ಮದುವೆಗೆ ಮುಂಚೆಯೇ ಒಂದಷ್ಟು ಅನೈತಿಕ ಸಂಬಂಧ ಹೊಂದಿರುತ್ತಾರೆ. ಆದರೆ ಮಕ್ಕಳನ್ನು ಮಾತ್ರ ಮಾಡಿಕೊಳ್ಳುವುದಿಲ್ಲ. ಕೇವಲ ಮಜಾ ಮಾಡಿ ಹಣ ಉಳಿಸುತ್ತಾರೆ. ಹಿಂದೂ ಯುವಕರು ಮದುವೆಗೆ ಮೊದಲೇ ಅನೈತಿಕ ಸಂಬಂಧ ಇರಿಸಿಕೊಳ್ಳುವ ಬದಲು ಹೆಚ್ಚೆಚ್ಚು ಮಕ್ಕಳನ್ನು ಪಡೆದು ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಸಣ್ಣ ವಯಸ್ಸಿಗೆ ಮದುವೆಯಾಗುವಂತೆ ಈ ಸಂಸದ ಬಿಟ್ಟಿ ಸಲಹೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. 

ಲವ್‌ ಜಿಹಾದ್‌ ಆರೋಪ: ಮದುವೆಗೆ ಒಂದು ತಿಂಗಳು ಇರುವಾಗ ಯುವತಿ ಎಸ್ಕೇಪ್

ಹಿಂದೂ ಯುವಕರು 40 ವಯಸ್ಸಿನ ನಂತರ ಮದುವೆಯಾಗಲು(Marriage) ಹೊರಡುತ್ತಾರೆ. ಆ ವಯಸ್ಸಲ್ಲಿ ಮಕ್ಕಳಾಗಬೇಕು ಎಂದರೆ ಹೇಗೆ ಸಾಧ್ಯ. ಆದರೆ ನಮ್ಮ ಮುಸ್ಲಿಂ ಸಮುದಾಯದಲ್ಲಿ ಹಾಗಲ್ಲ, ಗಂಡು ಮಕ್ಕಳು 20 ರಿಂದ 22 ವರ್ಷಕ್ಕೆ ಮದ್ವೆಯಾಗ್ತಾರೆ. ಹೆಣ್ಣು ಮಕ್ಕಳಿಗೆ 18 ಕಳೆಯುತ್ತಿದ್ದಂತೆ ಮದ್ವೆ ಮಾಡುತ್ತೇವೆ. ಹೀಗಾಗಿಯೇ ನಮ್ಮ ಜನಸಂಖ್ಯೆ ಹೆಚ್ಚಿದೆ. ಈ ಫಾರ್ಮುಲಾವನ್ನು ಹಿಂದೂಗಳು ಬೇಕಿದ್ದಲ್ಲಿ ಫಾಲೋ ಮಾಡಬಹುದು ಎಂದು ಬದ್ರುದ್ದೀನ್ ಅಜ್ಮಲ್ (Badruddin Ajmal) ವಿವಾದ ಸೃಷ್ಟಿಸಿದ್ದಾರೆ. 

ಮಂಡ್ಯದಲ್ಲಿ ಲವ್ ಜಿಹಾದ್, ಮತಾಂತರವಾದ್ರೆ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಅಂಗವಿಕಲೆಯ ಅತ್ಯಾಚಾರ!

ನೀವೂ ಲವ್ ಜಿಹಾದ್ ಮಾಡಿ

ಇದೇ ವೇಳೆ ಪ್ರಿಯಕರನಿಂದ 36 ತುಂಡುಗಳಾಗಿ ಕೊಲ್ಲಲ್ಪಟ್ಟ ಮುಂಬೈನ ಶ್ರದ್ಧಾ ವಾಖರ್ (Shraddha Waqar) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಅಜ್ಮಲ್, ನೀವೂ (ಹಿಂದೂಗಳು)ಕೂಡ 4 ರಿಂದ 5 ರಷ್ಟು ಲವ್ ಜಿಹಾದ್ ಮಾಡಿ, ಮುಸ್ಲಿಂ ಹುಡುಗಿಯರನ್ನು ತೆಗೆದುಕೊಂಡು ಹೋಗಿ ನಿಮ್ಮನ್ನು ತಡೆಯುವವರು ಯಾರು? ನಿಮ್ಮ ತಾಕತ್ತು ಏನು ಎಂಬುದನ್ನು ನಾವು ನೋಡುತ್ತೇವೆ ಎಂದರು. 

ಕಾಫಿನಾಡಲ್ಲಿ Love Jihad ಪ್ರಕರಣ: ನೊಂದ ಯುವತಿಯಿಂದ ಪೊಲೀಸ್ ಠಾಣೆಗೆ ದೂರು

Follow Us:
Download App:
  • android
  • ios