ಮಂಡ್ಯದಲ್ಲಿ ಲವ್ ಜಿಹಾದ್, ಮತಾಂತರವಾದ್ರೆ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಅಂಗವಿಕಲೆಯ ಅತ್ಯಾಚಾರ!
ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಅಪ್ರಾಪ್ತ ಅಂಗವಿಕಲ ಬಾಲಕಿಯ ಸ್ನೇಹ ಬೆಳೆಸಿ, ಮುಸ್ಲಿಂ ಧರ್ಮಕ್ಕೆ ಮತಾಂತರ ಆದರೆ ಮದುವೆ ಆಗುತ್ತೇನೆ ಎಂದು ನಂಬಿಸಿ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್,
ಮಂಡ್ಯ (ನ.22): ಅಪ್ರಾಪ್ತ ಅಂಗವಿಕಲ ಬಾಲಕಿಯ ಸ್ನೇಹ ಬೆಳೆಸಿ, ಮುಸ್ಲಿಂ ಧರ್ಮಕ್ಕೆ ಮತಾಂತರ ಆದರೆ ಮದುವೆ ಆಗುತ್ತೇನೆ ಎಂದು ನಂಬಿಸಿ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಘಟನೆ ನಡೆದಿದ್ದು. 13 ವರ್ಷದ ಬಾಲಕಿ ಮೇಲೆ 25 ವರ್ಷದ ಅನ್ಯಕೋಮಿನ ಯುವಕ ಅತ್ಯಾಚಾರ ಎಸಗಿದ್ದಾನೆ. ಪಟ್ಟಣದ ನಿವಾಸಿ ವಿವಾಹಿತ ಯೂನಸ್ ಪಾಷ ಎಂಬುವನಿಂದ ಹೀನ ಕೃತ್ಯ ನಡೆದಿದೆ. ಬಾಲಕಿ ನಗ್ನ ಫೋಟೋ, ವಿಡಿಯೋಗಳನ್ನ ರೆಕಾರ್ಡ್ ಮಾಡಿಕೊಂಡಿದ್ದ ಯೂನಸ್, ಲೈಂಗಿಕ ಕ್ರಿಯೆಗೆ ಸಹಕರಿಸದಿದ್ರೆ ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿ ಅಂಗವಿಕಲ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಬಾಲಕಿಯ ಮನೆಯ ಎದುರು ವಾಸವಿದ್ದ ಯೂನಸ್ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದನು. ಈತನಿಗೆ ಒಂದು ಗಂಡು ಮಗುವು ಇದೆ. ಆದರೆ ತನ್ನ ಕಾಮದೃಷ್ಠಿಯನ್ನ 8ನೇ ತರಗತಿ ಓದುತ್ತಿದ್ದ 13 ವರ್ಷದ ಅಂಗವಿಕಲ ಬಾಲಕಿ ಮೇಲೆ ಬೀರಿದ್ದನು. ಬಾಲಕಿಯನ್ನ ಆಗಾಗ್ಗೆ ಮಾತನಾಡಿಸುತ್ತಿದ್ದ ಆತ, ಆಕೆ ಪೋಷಕರಿಗೆ ತಿಳಿಯದ ಹಾಗೇ ಮೊಬೈಲ್ ಕೊಡಿಸದ್ದನಂತೆ. ವಾಟ್ಸಪ್ ವಿಡಿಯೋ ಕಾಲ್ ಮೂಲಕ ಬಾಲಕಿ ಜೊತೆ ಚಾಟಿಂಗ್ ನಡೆಸುತ್ತಿದ್ದ ಯೂನಸ್ ಬಾಲಕಿಯ ನಗ್ನ ಫೋಟೋ, ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದನು. ಲೈಂಗಿಕ ಕ್ರಿಯೆಗೆ ಸಹಕರಿಸದಿದ್ರೆ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡುವುದಾಗಿ ಬ್ಲಾಕ್ ಮೇಲೆ ಮಾಡಿದ್ದ.
ಕಾಫಿನಾಡಲ್ಲಿ Love Jihad ಪ್ರಕರಣ: ನೊಂದ ಯುವತಿಯಿಂದ ಪೊಲೀಸ್ ಠಾಣೆಗೆ ದೂರು
ಸಾಂಬಾರ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಲು ಪ್ಲಾನ್: ನ. 8 ರಂದು ಬಾಲಕಿ ತಂದೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದ ಬಾಲಕಿಯನ್ನು ಯೂನಸ್ ಸಂಪರ್ಕಿಸಿದ್ದಾನೆ. ನವೆಂಬರ್ 11 ರ ಮಧ್ಯರಾತ್ರಿ ಮನೆಗೆ ಬರುವುದಾಗಿ ತಿಳಿಸಿ, ಸಾಂಬಾರ್‌ನಲ್ಲಿ ನಿದ್ರೆ ಮಾತ್ರೆ ಹಾಕಿ ಅಜ್ಜಿಗೆ ನೀಡುವಂತೆ ಹೇಳಿದ್ದನು. ಆತ ತಂದುಕೊಟ್ಟ ನಿದ್ರೆ ಮಾತ್ರೆ ಪುಡಿಯನ್ನು ಸಾಂಬಾರ್‌ನಲ್ಲಿ ಬೆರೆಸಿ ಅಜ್ಜಿಗೆ ಊಟ ಬಡಿಸಿದ್ದಳು. ಬಳಿಕ ಮಧ್ಯರಾತ್ರಿ ಮನೆಗೆ ಬಂದ ಯೂನಸ್ ಪಾಷ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪ್ರವಾಸ ಮುಗಿಸಿ ವಾಪಸ್ಸಾದ ಪೋಷಕರಿಗೆ ಮಗಳ ನಡವಳಿಕೆ ಮೇಲೆ ಅನುಮಾನ ಮೂಡಿದೆ. ಬಳಿಕ ಬಾಲಕಿಯನ್ನು ಪೋಷಕರು ವಿಚಾರಿಸಿದ್ದು, ಸಂತ್ರಸ್ತ ಬಾಲಕಿ ತನ್ನ ಪೋಷಕರಿಗೆ ಘಟನೆ ವಿವರಿಸಿದ್ದಾಳೆ.
Kerala Crime: ಕಾರಿನಲ್ಲೇ 19 ವರ್ಷದ ಮಾಡೆಲ್ ಮೇಲೆ ಗ್ಯಾಂಗ್ ರೇಪ್: ಮಹಿಳೆ ಸೇರಿ ನಾಲ್ವರ ವಶಕ್ಕೆ
ಮದುವೆ ಆದರೆ ಮದುವೆ ಎಂದು ನಂಬಿಸಿ ಅತ್ಯಾಚಾರ
ಅತ್ಯಾಚಾರ ಎಸಗಿದ ಪಾಪಿ ಯೂನಸ್ ಪಾಷ ಮುಸ್ಲಿಂ ಧರ್ಮಕ್ಕೆ ಮತಾಂತರ ಆದರೆ ತನ್ನನ್ನು ಮದುವೆ ಆಗುವುದಾಗಿ ಹೇಳಿದ್ದ ಎಂದು ಬಾಲಕಿ ಹೇಳಿದ್ದಾರೆ. ಘಟನೆ ಕುರಿತು ನವೆಂಬರ್ 19 ರಂದು ನಾಗಮಂಗಲ ಪಟ್ಟಣ ಠಾಣೆಗೆ ದೂರು ನೀಡಲಾಗಿದೆ. ಪೋಷಕರ ದೂರಿನ ಅನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು. ಆರೋಪಿ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.