ಗುಜರಾತ್‌ನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ತಾಯಿಯೊಬ್ಬರು ಮಕ್ಕಳನ್ನು ರಕ್ಷಿಸಲು ಬಾಲ್ಕನಿಯಿಂದ ಕೆಳಗಿಳಿಸಿದ ಘಟನೆ ನಡೆದಿದೆ.
ಅಹ್ಮದಾಬಾದ್: ಗುಜರಾತ್‌ನ ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಜೀವ ಉಳಿಸಿಕೊಳ್ಳಲು ಕಟ್ಟಡದಲ್ಲಿದ್ದ ತಾಯಿ ಮಕ್ಕಳು ಮಹಿಳೆಯರು ಪರದಾಡಿದ ಮನಕಲುಕುವ ದೃಶ್ಯವೊಂದು ವೈರಲ್ ಆಗಿದೆ. ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಬೆಂಕಿಯಿಂದ ಆವರಿಸಿದ ಹೊಗೆ ಸ್ವಲ್ಪ ಹೊತ್ತಿನಲ್ಲಿ ಮೇಲಿನ ಮಹಡಿಗಳಿಗೆ ವ್ಯಾಪಿಸಿದೆ. ಇದರಿಂದ ಭಯಗೊಂಡ ಅಲ್ಲಿನ ನಿವಾಸಿಗಳು ಜೀವ ಉಳಿಸಿಕೊಳ್ಳಲು ಬಾಲ್ಕನಿಯಿಂದ ಮಕ್ಕಳನ್ನು ಕೆಳಗಿದ್ದವರಿಗೆ ಎಸೆದು ಬಳಿಕ ತಾವು ಕೆಳಗೆ ಇಳಿದಿರುವ ಘಟನೆ ನಡೆದಿದೆ.
ಅಹ್ಮದಾಬಾದ್‌ನ ಪರಿಸ್ಕಾರ್ 1 ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂದು ನಡೆದ ಘಟನೆ ಇದಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರ ಜೀವಕ್ಕೂ ಹಾನಿಯಾಗಿಲ್ಲ, ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡ ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಲ್ಲದೇ ಕಟ್ಟಡದಲ್ಲಿರುವ ನಿವಾಸಿಗಳ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ವಾಟ್ಸಾಪ್‌ನಲ್ಲಿ ಬಂದ ಫೋಟೋ ಓಪನ್ ಮಾಡಿ 2 ಲಕ್ಷ ಕಳೆದುಕೊಂಡ ವ್ಯಕ್ತ ...
ಪೊಲೀಸರ ಪ್ರಕಾರ 6ನೇ ಮಹಡಿಯಲ್ಲಿ ಶಾರ್ಟ್‌ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಘಟನೆ ನಡೆದಿದೆ. ಬಳಿಕ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಆದರೆ ಈ ಘಟನೆಯ ಬಳಿಕ ಕಟ್ಟಡದಲ್ಲಿದ್ದ ಮಹಿಳೆಯರು ಪುಟ್ಟ ಮಕ್ಕಳನ್ನು ಅಪಾಯಕಾರಿಯಾಗಿ ಕೆಳಗಿಳಿಸುತ್ತಿರುವ ದೃಶ್ಯ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಬಾಲ್ಕನಿಯಲ್ಲಿ ನಿಂತ ಮಹಿಳೆಯರು ಪುಟ್ಟ ಮಗುವೊಂದನ್ನು ಕೈಯಲ್ಲಿ ಹಿಡಿದು ಕೆಳಗಿಳಿಸುವ ಸಲುವಾಗಿ ನೇತಾಡಿಸುತ್ತಿರುವುದನ್ನು ಕಾಣಬಹುದು. ಬಳಿಕ ಕೆಳಗಿನ ಮಹಡಿಯಲ್ಲಿದ್ದ ಇಬ್ಬರು ಯುವಕರು ಈ ಪುಟ್ಟ ಮಗುವನ್ನು ಜಾಗರೂಕವಾಗಿ ಕೆಳಗಿಳಿಸಿಕೊಳ್ಳುತ್ತಾರೆ. ಇದಾದ ನಂತರ ಇನ್ನೊಂದು ಮಗುವನ್ನು ಆ ಯುವಕರ ಕೈಗೆ ಮಹಿಳೆ ನೀಡಿದ್ದು, ಬಳಿಕ ತಾನು ಕೂಡ ಜೀವವನ್ನು ಪಣಕ್ಕಿಟ್ಟು ಕೆಳಗಿಳಿದಿದ್ದಾರೆ. ಈ ವೇಳೆ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರು ಮಹಿಳೆಯ ಜೀವ ಹೋಗುವ ಸಾಧ್ಯತೆ ಇತ್ತು.
ವಿದ್ಯಾರ್ಥಿಯ ಹಾಲ್ ಟಿಕೆಟ್ ಕದ್ದೊಯ್ದ ಹದ್ದು: ಆಮೇಲಾಗಿದ್ದು ಪವಾಡ
ಸಾಮಾನ್ಯವಾಗಿ ಕೋತಿಗಳು ಮನುಷ್ಯರ ಕೈಯಲ್ಲಿದ್ದ ವಸ್ತುಗಳನ್ನು ಕಿತ್ತುಕೊಂಡು ಮರ ಏರುವುದನ್ನು ನೋಡಿದ್ದೇವೆ. ಬಹುತೇಕ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಈ ದೃಶ್ಯ ಕಾಣಲು ಸಿಗುತ್ತದೆ. ಅದರಲ್ಲು ಮಥುರಾದ ಬಂದಾವನದಲ್ಲಿ ಕೋತಿಗಳು ಮನುಷ್ಯರ ಕೈಯಲ್ಲಿದ್ದ ವಸ್ತುಗಳನ್ನು ಕಿತ್ತುಕೊಂಡು ಡೀಲಿಗಿಳಿದು ಬಿಡುತ್ತವೆ. ಬಳಿಕ ಅವುಗಳಿಗೆ ಬೇರೇನೋ ತಿನ್ನುವಂತಹದ್ದನ್ನು ನೀಡಿ ಜನ ತಮ್ಮ ಅಮೂಲ್ಯ ವಸ್ತುಗಳನ್ನು ಕೋತಿಯ ಕೈಯಿಂದ ಉಪಾಯವಾಗಿ ವಾಪಸ್ ಪಡೆಯುತ್ತಾರೆ. ಆದರೆ ಹಕ್ಕಿಗಳು/ಹದ್ದುಗಳು ಮನುಷ್ಯರ ಕೈಯಲ್ಲಿರುವುದನ್ನು ಕಸಿಯುವುದಕ್ಕೆ ಬರುವುದು ತೀರಾ ಅಪರೂಪ. ಆದರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಪರೀಕ್ಷೆಯ ಗಾಬರಿಯಲ್ಲಿದ್ದ ಪರೀಕ್ಷಾರ್ಥಿಗೆ ಹಕ್ಕಿಯೊಂದು ಮತ್ತಷ್ಟು ಆತಂಕಕ್ಕೀಡು ಮಾಡುವಂತೆ ಮಾಡಿದೆ. ಹಾಗಿದ್ರೆ ಹಕ್ಕಿ ಮಾಡಿದ್ದೇನು ನೋಡಿ.
ಸೈಟು, ಕೆಲಸ ರಿಜೆಕ್ಟ್ ಮಾಡಿ 4 ಕೋಟಿ ಪಡೆದ ವಿನೇಶ್ ಫೋಗಟ್!
ಪರೀಕ್ಷೆಗೆ ಇನ್ನೇನು ಸ್ವಲ್ಪ ಸಮಯ ಇದೇ ಎನ್ನುವಷ್ಟರಲ್ಲಿ ಪರೀಕ್ಷಾ ಹಾಲ್ ಮುಂದೆ ಹಾಲ್ ಟಿಕೆಟ್ ಹಿಡಿದು ನಿಂತಿದ್ದ ಪರೀಕ್ಷಾರ್ಥಿಯೊಬ್ಬನ ಕೈಯಿಂದ ಹಾಲ್ ಟಿಕೆಟ್ ಕಸಿದ ಹದ್ದೊಂದು ಬಳಿಕ ಮೇಲೇರಿ ಕುಳಿತಿದೆ. ಇದರಿಂದ ಪರೀಕ್ಷಾರ್ಥಿ ತೀವ್ರ ಆತಂಕಕ್ಕೀಡಾಗಿದ್ದಾನೆ. ಕೇರಳದ ಕಾಸರಗೋಡಿನ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಹದ್ದಿನ ತುಂಟಾಟದಿಂದಾಗಿ ಪರೀಕ್ಷೆ ಬರೆಯಬೇಕಿದ್ದ ಪರೀಕ್ಷಾರ್ಥಿಗೆ ಮಾತೇ ಬರದಂತಾಗಿತ್ತು. ಹದ್ದು ಹಾಲ್ ಟಿಕೆಟ್ ಕಸಿದುಕೊಂಡು ಅದನ್ನು ತನ್ನೆರಡು ಕಾಲಿನಲ್ಲಿ ಸಿಲುಕಿಸಿಕೊಂಡು ಶಾಲೆಯ ಕಿಟಕಿ ಬಾಗಿಲಿನ ಮೇಲೇರಿ ಕುಳಿತಿದೆ.
