Asianet Suvarna News Asianet Suvarna News

Age Just Number: 82 ದಾಟಿದರೂ ಕುಂದದ ಉತ್ಸಾಹ, ಹನುಮಾನ್ ಕತೆ ಹೇಳುವ ಅಜ್ಜಿಗೆ ಇಂಟರ್‌ನೆಟ್ ಫಿದಾ

ವೃದ್ಧ ಮಹಿಳೆಯೊಬ್ಬರು ಹನುಮಾನ್ ಕತೆ (ಹರಿಕತೆ) ಹೇಳುವ ವೇಳೆ ನರ್ತಿಸುತ್ತಾ ಬಹಳ ವೈವಿಧ್ಯ ಹಾಗೂ ಉತ್ಸಾಹದಿಂದ ಹೇಳುತ್ತಿರುವ ರೀತಿ ಎಲ್ಲರ ಹೃದಯ ಗೆದ್ದಿದೆ. ವಯಸ್ಸನ್ನು ಮೀರಿದ ಅವರ ಈ ಉತ್ಸಾಹ ನೋಡುಗರನ್ನು ಸೆಳೆಯುತ್ತಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Age Just Number grand mother dance goes viral in social media akb
Author
First Published Sep 18, 2022, 3:19 PM IST

ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದು ಸಾಬೀತುಪಡಿಸುವ ಹಲವು ಘಟನೆಗಳು ನಮ್ಮ ನಡುವೆ ನಡೆದಿವೆ. 80 ದಾಟಿದ ವೃದ್ಧರೊಬ್ಬರು ತಮ್ಮ ಇಳಿ ವಯಸ್ಸಿನಲ್ಲಿ ಶಿಕ್ಷಣ ಮುಂದುವರೆಸಿ ಪದವೀಧರನಾಗಿ ಕಲಿಯಲು ವಯಸ್ಸಿನ ಹಂಗಿಲ್ಲ ಎಂಬುದನ್ನು ತೋರಿಸಿದ್ದರು. ಅದೇ ರೀತಿ 80 ದಾಟಿದ ವೃದ್ಧರೊಬ್ಬರು ಯುವಕರು ನಾಚಿಸುವಂತೆ ಕುಣಿಯುವ ಮೂಲಕ ತನ್ನ ಮನಸ್ಸಿಗೆ ಕೇವಲ 18 ವರ್ಷ ಎಂದು ಹೇಳುವಂತೆ ಮಾಡಿದ್ದರು. ಅದೇ ರೀತಿ ವೃದ್ಧ ಮಹಿಳೆಯೊಬ್ಬರು ಹನುಮಾನ್ ಕತೆ (ಹರಿಕತೆ) ಹೇಳುವ ವೇಳೆ ನರ್ತಿಸುತ್ತಾ ಬಹಳ ವೈವಿಧ್ಯ ಹಾಗೂ ಉತ್ಸಾಹದಿಂದ ಹೇಳುತ್ತಿರುವ ರೀತಿ ಎಲ್ಲರ ಹೃದಯ ಗೆದ್ದಿದೆ. ವಯಸ್ಸನ್ನು ಮೀರಿದ ಅವರ ಈ ಉತ್ಸಾಹ ನೋಡುಗರನ್ನು ಸೆಳೆಯುತ್ತಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹರಿಕತೆ, ಇದೊಂದು ಸಾಹಿತ್ಯಕ ಪ್ರಕಾರ, ನೃತ್ಯ ಸಂಗೀತಾದ ಹಿನ್ನೆಲೆಯೊಂದಿಗೆ ಪುರಾಣದ ಕತೆಗಳನ್ನು ಹೇಳುವುದು ಹರಿಕತೆ (Harikate). ಹಳ್ಳಿಯ ಕೆಲ ಭಾಗಗಳಲ್ಲಿ ಈ ಹರಿಕತೆ ಇನ್ನು ಚಾಲ್ತಿಯಲ್ಲಿದೆ. ಪುರಾಣದ ಕೆಲ ಹಿನ್ನೆಲೆಗಳನ್ನು ತೆಗೆದುಕೊಂಡು ಈ ಕಾಲಕ್ಕೆ ಅದನ್ನು ಹೋಲಿಸಿಕೊಂಡು ಹರಿಕತೆದಾಸರು ಬಹಳ ರಸವತ್ತಾಗಿ ಕತೆಗಳನ್ನು ಜನರಿಗೆ ಹೇಳುತ್ತಾರೆ. ಕೇಳಲು ಸ್ವಾರಸ್ಯಕರವೆನಿಸುವ ಈ ಕತೆಗಳು ಎಷ್ಟು ಕೇಳಿದರು ಸಾಕೆನಿಸುವುದಿಲ್ಲ. ಆದರೆ ಇಲ್ಲಿ ವೃದ್ಧೆಯೊಬ್ಬರು ಹನುಮಾನ್ ಗಥಾ ಎಂದರೆ ಆಂಜನೇಯನ ಕತೆ ಹೇಳುತ್ತಿದ್ದಾರೆ. ನಲಿಯುತ್ತಾ ಹಾಡುತ್ತಾ ಇವರು ಆಂಜನೇಯನ ಕತೆ ಹೇಳುತ್ತಿದ್ದರೆ ಸುತ್ತ ಕುಳಿತಿದ್ದವರೆಲ್ಲಾ ಚಪ್ಪಾಳೆ ತಟ್ಟುತ್ತಾ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಹಾಲೊಂದರಲ್ಲಿ ಇವರು ಈ ಭಾರತದ ಪೌರಾಣಿಕ ಶ್ರೀಮಂತಿಕೆಯನ್ನು ಪ್ರಚುರಪಡಿಸುತ್ತಿದ್ದರೆ, ಹಾಲಿನ ಹೊರಗೂ ಕಿಟಕಿಯ ಹೊರಗಡೆಯಿಂದ ಮಕ್ಕಳು ದೊಡ್ಡವರೆಂಬ ಬೇಧವಿಲ್ಲದೇ ಎಲ್ಲರೂ ಕಿಟಕಿಯ ಹೊರಗಿನಿಂದ ನಿಂತುಕೊಂಡು ಕತೆಯ ಜೊತೆಗಿನ ನೃತ್ಯ ವೈಭವವನ್ನು ಸವಿಯುತ್ತಿದ್ದಾರೆ. 

ಕನಸುಗಳನ್ನು (Dream) ಸಾಕಾರಗೊಳಿಸಲು ವಯಸ್ಸಿನ ಅಡ್ಡಿ ಇಲ್ಲ ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ದಿವ್ಯ ಸಕ್ಸೇನಾ ಎಂಬುವವರು ಪೋಸ್ಟ್ ಮಾಡಿದ್ದಾರೆ. ಅಜ್ಜಿಯ ವಿಡಿಯೋ (video) ನೋಡಿದ ನೆಟ್ಟಿಗರು ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಉತ್ಸಾಹಿ ನೃತ್ಯಗಾರ್ತಿ ಅಜ್ಜಿಯ ಹಸೆರು ರಮಾಬಾಯಿ (Ramabhai) 82 ವರ್ಷದ ಇವರು ವಿದ್ಯಾರಣ್ಯಪುರದ (Vidyaranyapura) ಹಿರಿಯ ನಾಗರಿಕರು, ಶ್ರೀಕೃಷ್ಣನ ಭಕ್ತರಾಗಿರುವ ಇವರು ಹರೆ ಶ್ರೀನಿವಾಸ ಎಂಬ ನೃತ್ಯಹಾಡುಗಾರಿಕೆಯ ಗುಂಪೊಂದನ್ನು ರಚಿಸಿದ್ದು, ಅವರು ಹಾಗೂ ಅವರ ತಂಡದಲ್ಲಿರುವ ವಿದ್ಯಾರ್ಥಿಗಳು, ಆಹ್ವಾನದ ಮೇರೆಗೆ ಹಲವೆಡೆ ಈ ರೀತಿಯ ನೃತ್ಯ ತರಬೇತಿಯನ್ನು ನಡೆಸುತ್ತಾರೆ ಎಂದು ಟ್ವಿಟ್ಟರ್‌ನಲ್ಲಿ ಒಬ್ಬರು ಮಾಹಿತಿ ನೀಡಿದ್ದಾರೆ. 

ಈ ಜನರೇಷನ್‌ನಲ್ಲಿ ಹುಟ್ಟಿದ್ರೆ ಈ ತಾತನ ಹಿಡಿಯಕ್ಕಾಗ್ತಿರ್ಲಿಲ್ಲ ಬಿಡಿ: ಹೆಂಗೆ ಕುಣಿತಾರೆ ನೋಡಿ

ಸಾಮಾನ್ಯವಾಗಿ ಭಾರತದಲ್ಲಿ (India) ಯುವತಿಯರ ವಯಸ್ಸು 18 ಆಗಿರಲಿ 28 ಆಗಿರಲಿ ಒಂದು ಮದುವೆಯಾಗುತ್ತಿದ್ದಂತೆ ಅವರನ್ನು ನೋಡುವ ರೀತಿಯೇ ಬದಲಾಗುತ್ತದೆ. ಆಕೆಯ ವಯಸ್ಸಿನ ಅಥವಾ ಆಕೆಗಿಂತ ದೊಡ್ಡ ವಯಸ್ಸಿನ ಯುವಕರು ಆಕೆಯನ್ನು ಆಂಟಿ ಎಂದು ಕರೆಯಲು ಶುರು ಮಾಡುತ್ತಾರೆ. ವೇಷ ಭೂಷಣ ಬದಲಾಗುತ್ತದೆ. ಧರಿಸುವ ಬಟ್ಟೆಯಿಂದ ಹಿಡಿದು ಹಾವಭಾವದವರೆಗೂ ಎಲ್ಲದಕ್ಕೂ ನಿನಗೆ ಮದುವೆಯಾಗಿದೆ ಎಂಬುದು ಗಮನದಲ್ಲಿರಲಿ ಎಂದು ಹೇಳುತ್ತಾರೆ. ಆಕೆಯ ಎಲ್ಲ ಕನಸುಗಳಿಗೆ ಒಂದು ಮಿತಿ ಹೇರಲಾಗುತ್ತದೆ. ಇದೇ ಕಾರಣಕ್ಕೆ ಬಹುತೇಕ ಮಹಿಳೆಯರು ತಮ್ಮ ವಯಸ್ಸು ಕನಸು ಎಲ್ಲವನ್ನು ಬಲಿಕೊಟ್ಟು "ವಯಸ್ಸಿಗೆ ತಕ್ಕಂತೆ ವರ್ತಿಸು" ಎಂಬ ಮಾತಿಗೆ ಕಟಿಬೀಳುತ್ತಾರೆ. ಸಮಾಜ ಏನನ್ನುತದೋ ಎಂಬ ಯೋಚನೆ ಮಾಡುವ ಪ್ರತಿ ಕೆಲಸದಲ್ಲೂ ಕಾಡುತ್ತದೆ. ಇದು ಬಹುತೇಕ 80-90 ದಶಕದಲ್ಲಿ ಹುಟ್ಟಿದ ಹಾಗೂ ಅದಕ್ಕೂ ಮೊದಲು ಹುಟ್ಟಿದ ಬಹುತೇಕ ಹೆಣ್ಣು ಮಕ್ಕಳ ಕತೆ ಇದು. (ಈಗಿನ ಜನರೇಷನ್ ಹೀಗಿಲ್ಲ ಬಿಡಿ. ಅದನ್ನ ಬಾಯ್ಬಿಟ್ಟು ಹೇಳಬೇಕಾಗಿಲ್ಲ) ಆದರೆ ಅದೇ ಜನರೇಷನ್‌ನ ಅಜ್ಜಿಯೊಬ್ಬರ ಈ ಬಿಂದಾಸ್ ಹಾಡು ಹಾಗೂ ನೃತ್ಯ ನೋಡುಗರನ್ನು ಸೆಳೆಯುತ್ತಿದೆ. 

ಟೈಗರ್ ಜಿಂದಾ ಹೈ... ರಥವೇರಿ ಬಂದ 102 ವರ್ಷದ ಅಜ್ಜ, ಕಾರಣ ಕೇಳಿದ್ರೆ ಗಾಬರಿಯಾಗ್ತೀರಾ

Follow Us:
Download App:
  • android
  • ios