Asianet Suvarna News Asianet Suvarna News

ಟೈಗರ್ ಜಿಂದಾ ಹೈ... ರಥವೇರಿ ಬಂದ 102 ವರ್ಷದ ಅಜ್ಜ, ಕಾರಣ ಕೇಳಿದ್ರೆ ಗಾಬರಿಯಾಗ್ತೀರಾ

ಸಾವಿನ ಸುಳ್ಳಿನಿಂದ ಸಿಟ್ಟಿಗೆದ್ದ 102 ವರ್ಷದ ತಾತ ಒಬ್ಬರು ತಾನು ಬದುಕಿದ್ದೇನೆ ಎಂದು ಎಲ್ಲರಿಗೂ ತಿಳಿಸುವ ಸಲುವಾಗಿ ರಥವೇರಿ ಬಂದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

centenarian unique protest against Haryana government, he dead in govt records shows up in chariot to prove he's alive akb
Author
First Published Sep 9, 2022, 3:13 PM IST

ರೋಹ್ಟಕ್: ಸರ್ಕಾರಿ ದಾಖಲೆಗಳಲ್ಲಿ ಕೆಲವೊಮ್ಮೆ ಸತ್ತವರು ಬದುಕುವುದು, ಬದುಕಿದವರು ಸಾಯುವುದು ಮುಂತಾದ ಪ್ರಸಂಗಗಳು ಆಗಾಗ ನಡೆಯುವುದನ್ನು ನೋಡಿದ್ದೇವೆ. ಆದರೆ ಇದೇ ರೀತಿ ತನ್ನ ಸಾವಿನ ಸುಳ್ಳಿನಿಂದ ಸಿಟ್ಟಿಗೆದ್ದ 102 ವರ್ಷದ ತಾತ ಒಬ್ಬರು ತಾನು ಬದುಕಿದ್ದೇನೆ ಎಂದು ಎಲ್ಲರಿಗೂ ತಿಳಿಸುವ ಸಲುವಾಗಿ ರಥವೇರಿ ಬಂದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹರಿಯಾಣದ 102 ವರ್ಷದ ಶತಾಯುಷಿಯೊಬ್ಬರನ್ನು ಸರ್ಕಾರಿ ದಾಖಲೆಗಳಲ್ಲಿ ನಿಧನರಾಗಿದ್ದಾರೆ ಎಂದು ಘೋಷಿಸಲಾಗಿತ್ತು. ಹೀಗಾಗಿ ರಥವೊಂದರಲ್ಲಿ ಮಧುಮಗನಂತೆ ಕುದುರೆ ಏರಿ ಬಂದ ಅವರು ಹರಿಯಾಣದ ರೋಹ್ಟಕ್ ನಗರದುದ್ದಕ್ಕೆ ರಥದಲ್ಲಿ ಸಂಚರಿಸಿ ಸರ್ಕಾರದ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಇವರಿಗೆ ವೃದ್ದಾಪ್ಯ ವೇತನ ನಿಲ್ಲಿಸಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಅವರು ಈ ಪ್ರತಿಭಟನೆ ನಡೆಸಿದ್ದಾರೆ.  

 

ರೋಹ್ಟಕ್‌  ಜಿಲ್ಲೆಯ ಗಾಂಧಾರ ಗ್ರಾಮದ (Gandhra village) ದುಲಿಚಂದ್ (Duli Chand) ಎಂಬುವವರೇ ಹೀಗೆ ಕುದುರೆ ಏರಿ ಆಗಮಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದವರು. ರಥ ಓಡಿಸುತ್ತಾ ಕುತ್ತಿಗೆಗೆ ಹಣದ ಹಾರವನ್ನು ಹಾಕಿಕೊಂಡು ಕುತ್ತಿಗೆಗೆ ಪ್ಲೇಕಾರ್ಡ್ ಒಂದನ್ನು ನೇತು ಹಾಕಿಕೊಂಡಿದ್ದರು. ಅದರಲ್ಲಿ ನಿಮ್ಮ ಚಿಕ್ಕಪ್ಪ ಇನ್ನೂ ಬದುಕಿದ್ದಾರೆ ಎಂದು ಬರೆಯಲಾಗಿತ್ತು. ದೊಡ್ಡ ಮೆರವಣಿಗೆಯಲ್ಲಿ ಇವರು ಕುದುರೆ ಗಾಡಿ ಏರಿ ಇವರು ಬಂದಿದ್ದರು, ಈ ಮೆರವಣಿಗೆಯಲ್ಲಿ ನೂರಾರು ಜನ ಸೇರಿದ್ದರು. ಜೊತೆಗೆ ಬ್ಯಾಂಡ್‌ ವಾದನದವರು ಕೂಡ ಜೊತೆಯಲ್ಲಿದ್ದು, ರಥದ ಮುಂದೆ ಬ್ಯಾಂಡ್ ವಾದನಕ್ಕೆ ಜೊತೆಯಲ್ಲಿದ್ದ ಜನ ಸಖತ್ ಆಗಿ ಡಾನ್ಸ್ ಮಾಡಿದ್ದು, ಮಧುಮಗನನ್ನು ಕರೆದುಕೊಂಡು ಬಂದಂತೆ ಇವರು 102 ವರ್ಷದ ಶತಾಯುಷಿ ತಾತನನ್ನು ಕರೆ ತಂದಿದ್ದಾರೆ. 

ಪಕೋಡ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ: ಮೊಗೇರರಿಂದ ಮುಂದುವರಿದ ಧರಣಿ ಸತ್ಯಾಗ್ರಹ

ನನಗೆ ಕೊನೆಯ ಬಾರಿಗೆ ಮಾರ್ಚ್‌ನಲ್ಲಿ ವೃದ್ಧಾಪ್ಯ ವೇತನ ನೀಡಲಾಗಿದೆ. ಆದರೆ ಸರ್ಕಾರಿ ದಾಖಲೆಗಳಲ್ಲಿ (government records) ನಾನು ತೀರಿಕೊಂಡಿದ್ದೇನೆ ಎಂದು ದಾಖಲಾಗಿದ್ದು, ಹೀಗಾಗಿ ನನಗೆ ವೃದ್ದಾಪ್ಯ ವೇತನ ಬರುವುದು ನಿಂತಿದೆ. ನಾನು ಬದುಕಿದ್ದೇನೆ ಎಂದು ತೋರಿಸಲು ಹಲವು ಪ್ರಯತ್ನಗಳನ್ನು ಮಾಡಿದರು ಇದೆಲ್ಲವೂ ವಿಫಲವಾಯಿತು. ಹೀಗಾಗಿ ತಾನು ಈ ರೀತಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾಗಿ ತಾತ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ತಾತನ ವೈಭವದ ರಥಯಾತ್ರೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಸಖತ್ ವೈರಲ್ ಆಗಿದೆ. ಇನ್ನು ಈ ಶತಾಯುಷಿಯ ಮೊಮ್ಮಗ ಈ ಬಗ್ಗೆ ಹರಿಯಾಣದ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರು, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. 

ಪಿಂಚಣಿಗಾಗಿ ಕೊರಳಲ್ಲಿ ಹಾವು ಸುತ್ತಿಕೊಂಡು ಪ್ರತಿಭಟನೆ
ಇನ್ನು ಈ ಮೆರವಣಿಗೆ ನಡೆಸುವುದಕ್ಕೂ ಮೊದಲು ಈ ಹಿರಿಯಜ್ಜ ಮಾಧ್ಯಮಗಳಿಗೆ ತನ್ನ ಐಡಿ ಕಾರ್ಡ್‌, ಆಧಾರ್‌ಕಾರ್ಡ್ (Aadhar card), ಪಾನ್ ಕಾರ್ಡ್, ಬ್ಯಾಂಕ್‌ ಸ್ಟೇಟ್‌ಮೆಂಟ್‌ (bank statements) ಸೇರಿದಂತೆ ಹಲವು ದಾಖಲೆಗಳನ್ನು ತೋರಿಸಿದ್ದಾರೆ. ಇನ್ನು ಈ ಮುತ್ತಜ್ಜನಿಗೆ ಹರಿಯಾಣದ ಆಮ್‌ ಆದ್ಮಿ ಪಕ್ಷವೂ (AAP) ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಅಜ್ಜನಿಗೆ ಕೂಡಲೇ ವೃದ್ಧಾಪ್ಯ ವೇತನ ನೀಡುವಂತೆ ಆಗ್ರಹಿಸಿದೆ. ವೃದ್ದಾಪ್ಯ ವೇತನವನ್ನು ನಿಲ್ಲಿಸುವ ಮೂಲಕ ಇಷ್ಟೊಂದು ವಯಸ್ಸಾದವರಿಗೆ ಕಿರುಕುಳ ನೀಡುತ್ತಿರುವುದು ದುರಾದೃಷ್ಟಕರ ಎಂದು ಎಎಪಿಯ ಮುಖಂಡ ನವೀನ್ ಜೈಹಿಂದ್ ಹೇಳಿದ್ದಾರೆ. 

Follow Us:
Download App:
  • android
  • ios