ನವದೆಹಲಿ[ನ.15]: ಶುಲ್ಕ ಹೆಚ್ಚಳ ಕುರಿತು ತೀವ್ರ ಸ್ವರೂಪದ ಪ್ರತಿಭಟನೆ ನಡೆದ ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದಲ್ಲಿ ಮತ್ತೆ ‘ಆಜಾದಿ’ ಘೋಷಣೆ ಕೂಗಿರುವ ವಿಡಿಯೋವೊಂದು ಹರಿದಾಡುತ್ತಿದೆ.

ಜೆಎನ್‌ಯು ವಿವೇಕಾನಂದ ಪ್ರತಿಮೆ ಪೀಠ ಮೇಲೆ ಆಕ್ಷೇಪಾರ್ಹ ಸಂದೇಶ!

ಆದರೆ ಈ ವಿಡಿಯೋ ಯಾವಾಗಿನದ್ದು ಎಂಬುದು ತಿಳಿದುಬಂದಿಲ್ಲ. 2016ರಲ್ಲಿ ಆಜಾದಿ ಘೋಷಣೆ ಕೂಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಪ್ರಕರಣವೂ ದಾಖಲಾಗಿ ಅದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ಜೆಎನ್’ಯು ಹೆಸರು ಬದಲಿಸಿ ಮೋದಿ ಹೆಸರಿಡಿ: ಹನ್ಸ್ ರಾಜ್ ಏಕಿಷ್ಟು ಗಡಿಬಿಡಿ?

ವಿಶ್ವವಿದ್ಯಾಲಯದ ಹಾಸ್ಟೆಲ್‌ ಶುಲ್ಕ ಹೆಚ್ಚಳ ವಿರೋಧಿಸಿ ಸೋಮವಾರ ಭಾರಿ ಸ್ವರೂಪದ ಪ್ರತಿಭಟನೆ ನಡೆದಿತ್ತು. ಇದಾದ ಬೆನ್ನಲ್ಲೇ ಆಜಾದಿ ವಿಡಿಯೋ ಪ್ರತ್ಯಕ್ಷವಾಗಿದೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ. ಆದರೆ ಇದರ ಅಸಲಿತನ ಹಾಗೂ ದಿನಾಂಕ ಗೊತ್ತಿಲ್ಲ ಎಂದೂ ತಿಳಿಸಿದೆ.

ವಿದ್ಯಾರ್ಥಿ ಶಕ್ತಿಗೆ ಮಣಿದ ಜೆಎನ್‌ಯು: ಶುಲ್ಕ ಪ್ರಮಾಣ ಕಡಿತಕ್ಕೆ ಒಪ್ಪಿಗೆ!