ನವದೆಹಲಿ(ಜು. 01)  ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿ ನವೆಂಬರ್ ವರೆಗೆ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದರು .

80 ಕೋಟಿ ಜನರಿಗೆ ಇದರಿಂದ ಅನುಕೂಲ ಆಗಲಿದೆ. ಕೊರೋನಾ ವಿರುದ್ಧದ ಹೋರಾಟ ಮುಂದುವರಿದ್ದಿದ್ದು ಜನರು ಪ್ರತಿಕ್ಷಣ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದರು.

ಮಂಗಳವಾರ ಮೋದಿ ಹೇಳಿದ್ದೇನು? ಪೂರ್ಣ ವಿವರ

ಆದರೆ ಸೋಶಿಯಲ್ ಮೀಡಿಯಾ ಸುಮ್ಮನೆ ಕೂರಬೇಕಲ್ಲ. ಮೆಮೆಗಳ ಮೂಲಕ ಪ್ರಧಾನಿ ಅವರ ಭಾಷಣಕ್ಕೆ ಸಂಬಂಧಿಸಿ ತನ್ನದೇ ಆದ ಅಭಿಪ್ರಾಯ ಹೊರಹಾಕಿದೆ.  ಚೀನಾ ಅಪ್ಲಿಕೇಶನ್ ನಿಷೇಧದ ಬಗ್ಗೆ ಮಾತನಾಡಲಿದ್ದಾರೆಯೇ? ಕೊರೋನಾ ಲಾಕ್ ಡೌನ್ ಬಗ್ಗೆ ಮಾತನಾಡಲಿದ್ದಾರೆಯೇ? ಎಂಬ ಪ್ರಶ್ನೆಗಳು ಮೊದಲು  ಕೇಳಿಬಂದಿದ್ದವು.