Asianet Suvarna News Asianet Suvarna News

ಗಾಂಧಿ ಬದಲು ದೇಶದ ಕರೆನ್ಸಿ ನೋಟುಗಳಲ್ಲಿ ನೇತಾಜಿ ಚಿತ್ರ ಬಳಸಿ: ಹಿಂದು ಮಹಾಸಭಾ ಆಗ್ರಹ!

ದುರ್ಗಾಪೂಜೆಯ ಪೆಂಡಾಲ್‌ನಲ್ಲಿ ಮಹಾತ್ಮ ಗಾಂಧೀಜಿಯನ್ನು ಮಹಿಷಾಸುರನ ರೀತಿ ಹೋಲಿಕೆ ಮಾಡಿ ಚಿತ್ರಿಸಿದ್ದು ವಿವಾದವಾದ ಬಳಿಕ, ಅಖಿಲ ಭಾರತ ಹಿಂದೂ ಮಹಾಸಭಾದ ಪಶ್ಚಿಮ ಬಂಗಾಳ ಘಟಕ ಮತ್ತೊಂದು ವಿವಾದ ಎಳೆದುಕೊಂಡಿದೆ. ದೇಶದ ಕರೆನ್ಸಿ ನೋಟುಗಳಲ್ಲಿ ಗಾಂಧೀಜಿಯ ಬದಲು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಚಿತ್ರವಿರಬೇಕು ಎಂದು ಆಗ್ರಹ ಮಾಡಿದೆ.

after asur controversy Akhil Bharat Hindu Mahasabha  demands Netaji face on currency notes instead of Gandhi ji san
Author
First Published Oct 22, 2022, 2:45 PM IST

ಕೋಲ್ಕತ್ತಾ (ಅ.22): ಅಖಿಲ ಭಾರತ ಹಿಂದು ಮಹಾಸಭಾ (ಎಬಿಎಚ್ಎಂ) ಒಂದು ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ವಿವಾದದಿಂದಲೇ ಸುದ್ದಿಯಾಗಿದೆ. ಈ ಬಾರಿ ದೇಶದ ಕರೆನ್ಸಿ ನೋಟುಗಳ್ಲಿ ಮಹಾತ್ಮ ಗಾಂಧೀಜಿಯ ಬದಲಾಗಿ ಸುಭಾಷ್‌ ಚಂದ್ರ ಬೋಸ್‌ ಅವರ ಚಿತ್ರವಿರಬೇಕು ಎಂದು ಆಗ್ರಹ ಮಾಡಿದೆ. ಹಿಂದು ಮಹಾಸಭಾದ ಕೋಲ್ಕತ್ತ ಘಟಕ ಈ ಬೇಡಿಕೆಯನ್ನು ಇಟ್ಟಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿ ಎಷ್ಟು ಹೋರಾಟ ಮಾಡಿದ್ದಾರೆಯೋ ಅಷ್ಟೇ ತ್ಯಾಗವನ್ನು ಸುಭಾಷ್‌ ಚಂದ್ರ ಬೋಸ್‌ ಕೂಡ ಮಾಡಿದ್ದಾರೆ. ಅವರ ಕಾಣಿಕೆಯನ್ನು ಭಾರತೀಯರು ಮರೆಯಬಾರದು ಎಂದು ಎಬಿಎಚ್‌ಎಂನ ಕೋಲ್ಕತ್ತಾ ಘಟಕ ಹೇಳಿದೆ.  ಕೆಲ ದಿನಗಳ ಹಿಂದೆಯಷ್ಟೇ ಇದೇ ಘಟಕ ಗಾಂಧೀಜಿ ವಿಚಾರದಲ್ಲಿಯೇ ದೊಡ್ಡ ವಿವಾದ ಸೃಷ್ಟಿಸಿತ್ತು. ದುರ್ಗಾಪೂಜೆಯ ಪೆಂಡಾಲ್‌ನಲ್ಲಿ ಇಟ್ಟಿದ್ದ ದುರ್ಗಾಮಾತೆಯ ಮೂರ್ತಿಯ ಕೆಳಗೆ ಗಾಂಧೀಜಿಯನ್ನು ಮಹಿಷಾಸುರನ ರೀತಿಯಲ್ಲಿ ಚಿತ್ರಣ ಮಾಡಿತ್ತು. ಆದರೆ, ಇದಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲಿಯೇ ಇದನ್ನು ಬದಲಾವಣೆ ಮಾಡಿತ್ತು.

"ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿಯವರ ಕೊಡುಗೆಯು ಮಹಾತ್ಮ ಗಾಂಧಿಯವರಿಗಿಂತ ಕಡಿಮೆಯಿಲ್ಲ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಅವರನ್ನು ಗೌರವಿಸಲು ಉತ್ತಮ ಮಾರ್ಗವೆಂದರೆ ಅವರ ಚಿತ್ರವನ್ನು ಕರೆನ್ಸಿ ನೋಟುಗಳಲ್ಲಿ ಚಿತ್ರಿಸುವುದು. ಗಾಂಧೀಜಿ (Mahatma Gandhi) ಅವರ ಫೋಟೋವನ್ನು ನೇತಾಜಿಯವರ (Netaji Subhash Chandra Bose) ಚಿತ್ರದೊಂದಿಗೆ ಬದಲಾಯಿಸಬೇಕು" ಎಂದು ಎಬಿಎಚ್‌ಎಂ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಚೂರು ಗೋಸ್ವಾಮಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಎಬಿಎಚ್‌ಎಂ ಮುಂದಿನ ವರ್ಷ ರಾಜ್ಯ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಗೋಸ್ವಾಮಿ ತಿಳಿಸಿದ್ದಾರೆ.

ಪ್ರಧಾನಿ ಮೋದಿಗೆ ಸಿಕ್ಕಿದ್ದ ಗಿಫ್ಟ್‌ಗಳ ಆನ್‌ಲೈನ್‌ ಹರಾಜು: ಇಲ್ಲಿದೆ ನೋಂದಣಿ ವೆಬ್‌ಸೈಟ್

ಪಶ್ಚಿಮ ಬಂಗಾಳದ (West Bengal) ಆಡಳಿತಾರೂಢ ಟಿಎಂಸಿಯ (TMC) ವಕ್ತಾರ ಕುನಾಲ್ ಘೋಷ್ ಅವರು 'ಮಹಿಷಾಸುರ ವಿವಾದ' ಕುರಿತು ಪ್ರತಿಕ್ರಿಯೆ ನೀಡಿದ್ದು, ಇದು 'ರಾಷ್ಟ್ರಪಿತನಿಗೆ ಮಾಡಿರುವ ಅವಮಾನ' ಎಂದು ಕರೆದಿದ್ದಾರೆ. ಇದು ರಾಷ್ಟ್ರಪಿತನಿಗೆ ಮಾಡಿದ ಅವಮಾನ, ದೇಶದ ಪ್ರತಿಯೊಬ್ಬ ಪ್ರಜೆಗೂ ಅವಮಾನ, ಇಂತಹ ಅಪಮಾನದ ಬಗ್ಗೆ ಬಿಜೆಪಿ ಏನು ಹೇಳುತ್ತದೆ, ಗಾಂಧೀಜಿಯ ಹಂತಕ ಯಾವ ಸೈದ್ಧಾಂತಿಕ ಶಿಬಿರಕ್ಕೆ ಸೇರಿದ್ದ ಎಂಬುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ. ಬಿಜೆಪಿ (BJP) ಕೂಡ ಈ ಕೃತ್ಯವನ್ನು ಖಂಡನೆ ಮಾಡಿದೆ ಮತ್ತು ಟಿಎಂಸಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ. ಟಿಎಂಸಿ ಆಡಳಿತವು ತಕ್ಷಣ ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದೆ. ಆದರೆ, ಈ ವಿಚಾರದಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದೆ.

ಕರ್ತವ್ಯಪಥ: ನೇತಾಜಿಯ ಭವ್ಯ ಮೂರ್ತಿ ಕೆತ್ತಿದ್ದು ಕನ್ನಡಿಗ ಮೈಸೂರಿನ ಅರುಣ್ & ತಂಡ

ಹಾಗಿದ್ದರೂ, ಈ ಸಾಮ್ಯತೆಗಳು 'ಕೇವಲ ಕಾಕತಾಳೀಯ' ಎಂದು ಚಂದ್ರಚೂರು ಗೋಸ್ವಾಮಿ (Chandrachur Goswami) ನಂತರ ಸ್ಪಷ್ಟಪಡಿಸಿದರು. "ಇಲ್ಲಿ ಪೂಜಿಸಲ್ಪಟ್ಟ ದುರ್ಗಾ ವಿಗ್ರಹವು ಆರಂಭದಲ್ಲಿ ಮಹಿಸಾಸುರನನ್ನು ಹೊಂದಿತ್ತು. ಅವರ ಮುಖವು ಮಹಾತ್ಮ ಗಾಂಧಿಯವರಂತೆಯೇ ಕಾಣುತ್ತದೆ. ಸಾಮ್ಯತೆಗಳು ಕೇವಲ ಕಾಕತಾಳೀಯವಾಗಿದೆ. ಅದರ ಫೋಟೋಗಳು ವೈರಲ್ ಆದ ನಂತರ, ಪೊಲೀಸ್ ತಂಡವು ಪೆಂಡಾಲ್‌ಗೆ ಭೇಟಿ ನೀಡಿ ಅದನ್ನು ಬದಲಾಯಿಸುವಂತೆ ಕೇಳಿತ್ತು. ಅವರ ಮನವಿಯನ್ನು ಒಪ್ಪಿ ಅದನ್ನು (Akhil Bharat Hindu Mahasabha) ಮಾಡಿದ್ದೇವೆ' ಎಂದಿದ್ದಾರೆ.

Follow Us:
Download App:
  • android
  • ios