Asianet Suvarna News Asianet Suvarna News

ಪ್ರಧಾನಿ ಮೋದಿಗೆ ಸಿಕ್ಕಿದ್ದ ಗಿಫ್ಟ್‌ಗಳ ಆನ್‌ಲೈನ್‌ ಹರಾಜು: ಇಲ್ಲಿದೆ ನೋಂದಣಿ ವೆಬ್‌ಸೈಟ್

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಪುತ್ಥಳಿಯ ಮಾದರಿ ಹಾಗೂ ಕಾಮನ್‌ವೆಲ್ತ್‌ ಪದಕ ವಿಜೇತರ ಕ್ರೀಡಾ ಸ್ಮರಣಿಕೆಗಳು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲಾಗಿರುವ ಸುಮಾರು 1200 ಕ್ಕೂ ಹೆಚ್ಚು ವಸ್ತುಗಳ ಆನ್ಲೈನ್‌ ಹರಾಜು (online auction) ಪ್ರಕಿಯೆ ಆರಂಭವಾಗಿದೆ. ಅ.2ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ.

Online auction of PM Modi's gift begins,website is here for registration, money used for Namami Gange project akb
Author
First Published Sep 18, 2022, 7:36 AM IST

ನವದೆಹಲಿ: ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಪುತ್ಥಳಿಯ ಮಾದರಿ ಹಾಗೂ ಕಾಮನ್‌ವೆಲ್ತ್‌ ಪದಕ ವಿಜೇತರ ಕ್ರೀಡಾ ಸ್ಮರಣಿಕೆಗಳು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲಾಗಿರುವ ಸುಮಾರು 1200 ಕ್ಕೂ ಹೆಚ್ಚು ವಸ್ತುಗಳ ಆನ್ಲೈನ್‌ ಹರಾಜು (online auction) ಪ್ರಕಿಯೆ ಆರಂಭವಾಗಿದೆ. ಅ.2ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಮೋದಿ ಜನ್ಮದಿನದ ಅಂಗವಾಗಿ ಶನಿವಾರ ಮುಂಜಾನೆಯಿಂದ ಉಡುಗೊರೆಗಳ ಹರಾಜು ಆರಂಭವಾಗಿದೆ. ‘ಸಮಯ ಬಂದಿದೆ. ಮುಂಜಾನೆ 10 ಗಂಟೆಯಿಂದ ಪ್ರಧಾನಿ ಉಡುಗೊರೆಗಳ ಹರಾಜು 2022 ಆರಂಭವಾಗಿದ್ದು, ನೇರ ಪ್ರಸಾರವಾಗುತ್ತಿದೆ. ಇದಕ್ಕಾಗಿ (https://pmmementos.gov.in/#) ನೋಂದಣಿ ಮಾಡಿಕೊಳ್ಳಿ. ಪ್ರಧಾನಿ ಮೋದಿಗೆ ನೀಡಿದ್ದ ವಿಶೇಷ ಉಡುಗೊರೆಗಳ ಹರಾಜಿನಲ್ಲಿ ಭಾಗಿಯಾಗಿ’ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್‌ ರೆಡ್ಡಿ (Kishan Reddy) ಟ್ವೀಟ್‌ ಮಾಡಿದ್ದಾರೆ.

ಗಣೇಶನ ಪ್ರತಿಮೆ (statue of Lord Ganesha) , ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮಾದರಿ, ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯದ ಮಾದರಿ, ಒಂದು ತ್ರಿಶೂಲ ಮೊದಲಾದ ವಸ್ತುಗಳನ್ನು ಹರಾಜಿಗೆ ಇರಿಸಲಾಗಿದೆ. ಶಿಲ್ಪಿ ಅರುಣ್‌ ಯೋಗಿರಾಜ್‌ ಪ್ರಧಾನಿ ಉಡುಗೊರೆಯಾಗಿ ನೀಡಿದ್ದ ಕಪ್ಪು ಗ್ರೆನೇಟ್‌ನಲ್ಲಿ ಕೆತ್ತಲ್ಪಟ್ಟ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಪ್ರತಿಮೆ (Subhash Chandra Bose statue) ಮಾದರಿ, ಕಾಮನ್‌ವೆಲ್ತ್‌ ಪದಕ ವಿಜೇತರು ನೀಡಿದ 25ಕ್ಕೂ ಹೆಚ್ಚು ಕ್ರೀಡಾ ಸ್ಮರಣಿಕೆಗಳನ್ನು ಹರಾಜಿಗಿಡಲಾಗಿದೆ.

PM Modi Birthday: 72ರ ಹರೆಯದಲ್ಲೂ ಮೋದಿ ಫಿಟ್‌ ಆಗಿರೋ ಸೀಕ್ರೇಟ್ ಏನು ?

ಆನ್ಲೈನ್‌ ಹರಾಜು ಪ್ರಕ್ರಿಯೆ ಅ.2 ರಂದು ಮುಕ್ತಾಯಗೊಳ್ಳುವುದು. ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯಲ್ಲೂ ಕೆಲ ಉಡುಗೊರೆಗಳನ್ನು ಪ್ರದರ್ಶನಕ್ಕಾಗಿರಿಸಲಾಗಿದೆ. ಉಡುಗೊರೆ ಹರಾಜಿನಿಂದ ಬಂದ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಿಕೊಳ್ಳಲಾಗುವುದು ಎಂದು ರೆಡ್ಡಿ ಹೇಳಿದ್ದಾರೆ.

ಮೋದಿ ಬಗ್ಗೆ ಅಮೆರಿಕ ಮಾಧ್ಯಮಗಳ ಮೆಚ್ಚುಗೆ

ಶುಕ್ರವಾರ ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಶೃಂಗದ (Shanghai Cooperation Summit) ವೇಳೆ, ಉಕ್ರೇನ್‌ ಯುದ್ಧದ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ (Russian President Vladimir Putin) ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಲಹೆಯನ್ನು ಅಮೆರಿಕ ಮಾಧ್ಯಮಗಳು ಬಹುವಾಗಿ ಮೆಚ್ಚಿಕೊಂಡಿವೆ. ವಾಷಿಂಗ್ಟನ್‌ ಪೋಸ್ಟ್‌, ನ್ಯೂಯಾರ್ಕ್ ಪೋಸ್ಟ್‌ ಸೇರಿದಂತೆ ಹಲವು ಪ್ರಮುಖ ಪತ್ರಿಕೆಗಳು ಉಕ್ರೇನ್‌ ಯುದ್ಧದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇರಾನೇರ ನಿಲುವನ್ನು ಪ್ರಶಂಸಿಸಿವೆ.

ಉಕ್ರೇನ್‌ ವಿಷಯದಲ್ಲಿ ಪುಟಿನ್‌ಗೆ ಮೋದಿ ತರಾಟೆ ಎಂಬ ಹೆಡ್‌ಲೈನ್‌ನಲ್ಲಿ ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆ ವರದಿ ಪ್ರಕಟಿಸಿದೆ. ‘ಇದು ಯುದ್ಧ ಮಾಡುವ ಯುಗವಲ್ಲ, ನಿಮ್ಮ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ವೇಳೆಯೂ ಇದನ್ನು ನಾನು ಪ್ರಸ್ತಾಪಿಸಿದ್ದೇನೆ’ ಎಂದು ಪುಟಿನ್‌ರನ್ನು ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಥ ಅಪರೂಪದ ಟೀಕೆಯು, ರಷ್ಯಾದ ಬಲಶಾಲಿ ನಾಯಕರ ವಿಶ್ವದ ಎಲ್ಲೆಡೆಯಿಂದ ಯುದ್ಧ ನಿಲ್ಲಿಸುವ ಬಗ್ಗೆ ತೀವ್ರ ಒತ್ತಡದಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ’ ಎಂದು ಪತ್ರಿಕೆ ವರದಿ ಮಾಡಿದೆ.

PM Narendra Modi Birthday : ಮೋದಿ ಜನ್ಮದಿನಕ್ಕೆ ಬಿಜೆಪಿಯಿಂದ ಸೇವಾ ಪಾಕ್ಷಿಕ

ಇನ್ನು ‘ನ್ಯೂಯಾರ್ಕ್ ಟೈಮ್ಸ್‌’ ಕೂಡಾ ‘ಇದು ಯುದ್ಧದ ಯುಗವಲ್ಲ ಎಂದು ಪುಟಿನ್‌ಗೆ ಭಾರತೀಯ ನಾಯಕನ ಸಲಹೆ’ ಎಂಬ ಹೆಡ್‌ಲೈನ್‌ನಲ್ಲಿ ಸುದ್ದಿ ಪ್ರಕಟಿಸಿದೆ. ಉಭಯ ನಾಯಕರ ಮಾತುಕತೆ ಸ್ನೇಹಯುತವಾಗಿತ್ತು. ಈ ವೇಳೆ ಇಬ್ಬರೂ ನಾಯಕರು ಪರಸ್ಪರರ ಸುದೀರ್ಘ ಸಂಬಂಧವನ್ನು ಮೆಲುಕು ಹಾಕಿದರು. ಮೋದಿ ಅವರ ಈ ಮಾತಿಗೂ ಮುನ್ನ, ‘ಉಕ್ರೇನ್‌ ಯುದ್ಧದ (Ukraine war) ವಿಷಯದಲ್ಲಿ ಭಾರತದ ಕಳವಳವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ’ ಎಂದು ಪುಟಿನ್‌ ಹೇಳಿದರು’ ಎಂದು ಪತ್ರಿಕೆ ವರದಿ ಮಾಡಿದೆ.

ಮೋದಿ ಹೇಳಿದ್ದೇನು?:

ಪುಟಿನ್‌ ಜೊತೆ ಶುಕ್ರವಾರ ಪ್ರತ್ಯೇಕ ಮಾತುಕತೆ ನಡೆಸಿದ್ದ ಪ್ರಧಾನಿ ಮೋದಿ, ‘ಇದು ಯುದ್ಧ ಮಾಡುವ ಯುಗವಲ್ಲ, ನಿಮ್ಮ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ವೇಳೆಯೂ ಇದನ್ನು ನಾನು ಪ್ರಸ್ತಾಪಿಸಿದ್ದೇನೆ. ನಾವೆಲ್ಲರೂ ಒಟ್ಟಾಗಿ ಜಾಗತಿಕ ಆಹಾರ ಮತ್ತು ಶಕ್ತಿಯ ಭದ್ರತೆಗೆ ಹೊಸ ದಾರಿಯನ್ನು ಕಂಡುಕೊಳ್ಳಬೇಕು’ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪುಟಿನ್‌ ‘ಉಕ್ರೇನೊಂದಿಗಿನ ಬಿಕ್ಕಟ್ಟಿನ ಕುರಿತಾಗಿ ಭಾರತದ ಕಾಳಜಿಯ ಬಗ್ಗೆ ನಮಗೆ ಅರಿವಿದೆ. ಆದಷ್ಟುಶೀಘ್ರವಾಗಿ ಯುದ್ದವನ್ನು ಕೊನೆಗೊಳಿಸಲು ನಾವು ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ದುರದೃಷ್ಟವಶಾತ್‌, ನಮ್ಮ ಎದುರಾಳಿ ಮತ್ತು ಉಕ್ರೇನ್‌ನ ನಾಯಕತ್ವ ಮಾತುಕತೆಗೆ ಸಿದ್ದವಿಲ್ಲ ಮತ್ತು ತನ್ನ ಉದ್ದೇಶಗಳನ್ನು ಯುದ್ಧದ ಮೂಲಕವೇ ಸಾಧಿಸುವ ನಿರ್ಧಾರ ಮಾಡಿದೆ. ಏನೇ ಆಗಲಿ ಅಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಾವು ನಿಮಗೆ ಕಾಲಕಾಲಕ್ಕೆ ಮಾಹಿತಿ ನೀಡುತ್ತೇವೆ’ ಎಂದಿದ್ದರು.
 

Follow Us:
Download App:
  • android
  • ios