Asianet Suvarna News Asianet Suvarna News

ಆಫ್ಘಾನಿಸ್ತಾನ ಬಿಕ್ಕಟ್ಟು; ಗೃಹ, ರಕ್ಷಣಾ ಸಚಿವ, NSA ಜೊತೆ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!

  • ಆಫ್ಘಾನಿಸ್ತಾನ ಬಿಕ್ಕಟ್ಟು ಕುರಿತು ಪ್ರಧಾನಿ ನರೇಂದ್ರ ಮೋದಿ ಮೊದಲ ಸಭೆ
  • ಆಫ್ಘಾನ್ ಪರಿಸ್ಥಿತಿ ಕುರಿತು ಮಹತ್ವದ ಚರ್ಚೆ
  • ಭಾರತೀಯರ ರಕ್ಷಣೆ ಸೇರಿದಂತೆ ಹಲವು ಮಹತ್ವದ ನಿರ್ಧಾರ
Afghanistan Crisis PM modi chairs high level meeting of Cabinet Committee on Security  Meeting ckm
Author
Bengaluru, First Published Aug 17, 2021, 7:40 PM IST

ನವದೆಹಲಿ(ಆ.17): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ರಕ್ತದ ಹೊಳೆ ಹರಿಸಿದೆ. ಸರ್ಕಾರವನ್ನೇ ಶರಣಾಗುವಂತೆ ಮಾಡಿ ಸಂಪೂರ್ಣ ಆಡಳಿತವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ತಾಲಿಬಾನ್ ಉಗ್ರರ ಈ ಹಾದಿಯಲ್ಲಿ ಸಾವಿರ ಸಾವಿರ ಅಮಾಯಕರು ಬೀದಿ ಹೆಣವಾಗಿದ್ದಾರೆ. ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಆಫ್ಘಾನ್ ಬಿಕ್ಕಟ್ಟು ಚರ್ಚಿಸುಲ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಕಾಬೂಲ್‌ನಿಂದ ಜಾಮ್‌ನಗರ ತಲುಪಿದ IAF ವಿಮಾನ: ಭಾರತ ಮಾತೆಗೆ ಜಯಕಾರ!

ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹಗಾರ ಅಜಿತ್ ದೋವಲ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಉನ್ನತ ಅಧಿಕಾರಿಗಳ ಜೊತೆ ಮೋದಿ ಮಹತ್ವದ ಸಭೆ ನಡೆಸಿದ್ದಾರೆ. 

 

ಸಭೆಯ ಆರಂಭದಲ್ಲಿ ಆಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಸಿಬ್ಬಂದಿಗಳು ಭಾರತಕ್ಕೆ ಕರೆ ತಂದಿರುವ ಕುರಿತು ಮಾಹಿತಿ ಪಡೆದರು. ಇದೀಗ ಆಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರ ಭದ್ರತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಅಫ್ಘಾನಿಸ್ತಾನದಿಂದ ಭಾರತೀಯರ ರಕ್ಷಣೆ: ಗೃಹ ಸಚಿವಾಲಯದಿಂದ ಹೆಲ್ಪ್‌ಲೈನ್‌ ನಂಬರ್ ಜಾರಿ!

ಆಫ್ಘಾನಿಸ್ತಾನ ಬಿಕ್ಕಟ್ಟಿನಿಂದ ದೇಶದಲ್ಲಿ ಉದ್ಭವಿಸಿರುವ ಭದ್ರತಾ ಸವಾಲಿನ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಾಲಿಬಾನ್ ಆಟ್ಟಹಾಸದಿಂದ ಭಾರತಕ್ಕಾಗುವ ಭದ್ರತೆ ಆತಂಕ ಕುರಿತು ಚರ್ಚೆ ನಡೆಸಲಾಗಿದೆ. ಇದೇ ವೇಳೆ ಆಫ್ಘಾನಿಸ್ತಾನದಿಂದ ಭಾರತೀಯರ ರಕ್ಷಣೆ ಹಾಗೂ ಹಿಂದೂ, ಸಿಖ್, ಬುದ್ದ ಸಮುದಾಯಮಂದಿಗೆ ಭಾರತದಲ್ಲಿ ಆಶ್ರಯ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಅನ್ನೋ ಮಾಹಿತಿಯೂ ಹೊರಬಿದ್ದಿದೆ.

ಭಾರತಕ್ಕೆ ಆಗಮಿಸಲು ಇಚ್ಚಿಸುವ ಆಫ್ಘಾನ್ ಹಿಂದೂ, ಸಿಖ್‌ರಿಗೆ ನೆರವು ಘೋಷಿಸಿದ ಕೇಂದ್ರ!

ಕಠಿಣ ಸಂದರ್ಭದಲ್ಲಿ ಇಂದು ಭಾರತದ ವಾಯು ಸೇನೆ ರಾಯಭಾರ ಕಚೇರಿ ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ  120 ಮಂದಿಯನ್ನು ಕಾಬೂಲ್‌ನಿಂದ ದೇಶಕ್ಕೆ ಕರೆತಂದಿದೆ. ಭದ್ರತಾ ಕರ್ತವ್ಯದಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಸೇರಿದಂತೆ ರಾಯಭಾರ ಸಿಬ್ಬಂದಿಯನ್ನು ಎರಡು ವಾಯುಪಡೆಯ ವಿಮಾನಗಳಲ್ಲಿ ಭಾರತಕ್ಕೆ ಕರೆತರಲಾಗಿದೆ.

Follow Us:
Download App:
  • android
  • ios