Asianet Suvarna News Asianet Suvarna News

ಕಾಬೂಲ್‌ನಿಂದ ಜಾಮ್‌ನಗರ ತಲುಪಿದ IAF ವಿಮಾನ: ಭಾರತ ಮಾತೆಗೆ ಜಯಕಾರ!

* ಭಾರತೀಯರನ್ನು ಕಾಬೂಲ್‌ನಿಂದ ಏರ್‌ಲಿಫ್ಟ್‌ ಮಾಡಿದ ಭಾರತೀಯ ವಾಯುಸೇನೆ

* ಕಾಬೂಲ್‌ನಿಂದ ಗುಜರಾತ್‌ನ ಜಾಮ್‌ನಗರ ತಲುಪಿದ ಭಾರತೀಯ ವಾಯುಪಡೆಯ ಸಿ -17 ವಿಮಾನ 

* ವಿಮಾನದಲ್ಲಿ ತವರಿಗೆ ಬಂದಿಳಿದ ಸುಮಾರು 120 ಪ್ರಯಾಣಿಕರು

IAF plane carrying 120 Indians from Afghanistan lands at Jamnagar airbase pod
Author
Bangalore, First Published Aug 17, 2021, 2:01 PM IST

ಕಾಬೂಲ್(ಆ.17): ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಉದ್ಯೋಗಿಗಳನ್ನು ಹೊತ್ತ ಕಾಬೂಲ್‌ನಿಂದ ಹೊರಟ ಭಾರತೀಯ ವಾಯುಪಡೆಯ ಸಿ -17 ವಿಮಾನ ಗುಜರಾತ್‌ನ ಜಾಮ್ ನಗರವನ್ನು ತಲುಪಿದೆ. ವಿಮಾನದಲ್ಲಿ ಸುಮಾರು 120 ಪ್ರಯಾಣಿಕರು ಇದ್ದರು. ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಎಲ್ಲ ಉದ್ಯೋಗಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ತಾಲಿಬಾನಿಗಳ ಬೆದರಿಕೆಯ ನಡುವೆ ಕಳೆದ ಸೋಮವಾರದಿಂದ ನಡೆಯುತ್ತಿದೆ. ಭಾರತೀಯ ವಾಯುಪಡೆಯ ವಿಮಾನವು ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದಿಂದ ಇಂದು ಬೆಳಿಗ್ಗೆ ಉದ್ಯೋಗಿಗಳನ್ನು ಮತ್ತು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಗುಜರಾತ್‌ನ ಜಾಮ್‌ನಗರಕ್ಕೆ ಬಂದಿಳಿದಿದೆ.

"

ಕಾಬೂಲ್‌ನಲ್ಲಿ ಹದಗೆಟ್ಟಿರುವ ಪರಿಸ್ಥಿತಿಯ ನಡುವೆ ಭಾರತೀಯ ರಾಯಭಾರ ಕಚೇರಿಯು ಸೋಮವಾರವೇ ಕೆಲಸವನ್ನು ಸ್ಥಗಿತಗೊಳಿಸಿದೆ. ಭಾರತೀಯ ಸಿಬ್ಬಂದಿ ನಿರ್ಗಮನದ ನಂತರ, ರಾಯಭಾರ ಕಚೇರಿಯ ಕೆಲಸವನ್ನು ಸ್ಥಳೀಯ ಅಫ್ಘಾನ್ ಸಿಬ್ಬಂದಿಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದ್ದರು. ಭಾರತೀಯ ವಾಯುಪಡೆಯ ವಿಮಾನ ಸಿ -17 ಇಲ್ಲಿನ ಭಾರತೀಯರನ್ನು ರಕ್ಷಿಸಲು ಕಾಬೂಲ್ ತಲುಪಿತ್ತು. ಈ ನಡುವೆ ಅಡಚಣೆಗಳಿಂದಾಗಿ ಮಿಲಿಟರಿ ಮತ್ತು ನಾಗರಿಕ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿದೆ.

"

ಒಂದೆರಡು ದಿನಗಳಲ್ಲಿ ಭಾರತೀಯರ ಏರ್‌ಲಿಫ್ಟ್‌

ಭಾರತಕ್ಕೆ ಮರಳಲು ಇಚ್ಛಿಸುವ ಭಾರತೀಯರು ಸುರಕ್ಷಿತ ಪ್ರದೇಶಗಳಲ್ಲಿದ್ದಾರೆ. ಜೊತೆಗೆ ಒಂದು ಅಥವಾ ಎರಡು ದಿನಗಳಲ್ಲಿ ಅವರನ್ನು ಸುರಕ್ಷಿತವಾಗಿ ಕರೆತರಲಾಗುವುದು ಸುದ್ದಿ ಸಂಸ್ಥೆ ANI ಟ್ವೀಟ್ ಮಾಡಿದೆ. ಇನ್ನು ಇಂಡಿಯಾ ಟುಡೇ ವರದಿಯ ಪ್ರಕಾರ, ಅಫ್ಘಾನಿಸ್ತಾನದ ವಿವಿಧ ಭಾಗಗಳಲ್ಲಿ ಸಿಲುಕಿರುವ ಸುಮಾರು 120 ಭಾರತೀಯರನ್ನು ಒಂದೆರಡು ದಿನಗಳಲ್ಲಿ ಭಾರತಕ್ಕೆ ಕರೆತರಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಭಾರತ ಸರ್ಕಾರ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದಿದೆ. ಕಳೆದ ಕೆಲವು ದಿನಗಳಲ್ಲಿ ಕಾಬೂಲ್‌ನ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ ಎಂದು ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಅಫ್ಘಾನಿಸ್ತಾನದಿಂದ ಭಾರತೀಯರನ್ನು ಮರಳಿ ಕರೆತರಲು ಸಹಾಯವಾಣಿ ಹಾಗೂ ಇಮೇಲ್ ಸೇವೆ ಆರಂಭಿಸಿದೆ. 

Follow Us:
Download App:
  • android
  • ios