* ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣ* ಭಾರತೀಯರಿಗೆ ಸಹಾಯ ಮಾಡಲು ಸಹಾಯವಾಣಿ ಆರಂಭಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ* ವಾಯುಪಡೆಯ ಗ್ಲೋಬ್ ಮಾಸ್ಟರ್ ಸಿ -17 ವಿಮಾನದ ಮೂಲಕ ತವರಿಗೆ ಬಂದ ಭಾರತೀಯರು

ಕಾಬೂಲ್(ಆ.17): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣದ ನಂತರ, ಭಾರತ ಸರ್ಕಾರ ತನ್ನ ನಾಗರಿಕರ ಸ್ಥಳಾಂತರಿಸುವತ್ತ ಚಿತ್ತ ಹರಿಸಿದೆ. ಕಾಬೂಲ್‌ನಲ್ಲಿರುವ ರಾಯಭಾರಿ ರುದೇಂದ್ರ ಟಂಡನ್ ಮತ್ತು ಅವರ ಭಾರತೀಯ ಸಿಬ್ಬಂದಿಯನ್ನು ಭಾರತ ಸರ್ಕಾರ ಮಂಗಳವಾರ ವಾಪಸ್ ಕರೆಸಿಕೊಂಡಿದೆ. ಕಾಬೂಲ್‌ನಿಂದ 150 ಜನರನ್ನು ಹೊತ್ತ ವಾಯುಪಡೆಯ ಗ್ಲೋಬ್ ಮಾಸ್ಟರ್ ಸಿ -17 ವಿಮಾನ ಗುಜರಾತ್ ನ ಜಾಮ್ ನಗರಕ್ಕೆ ಬೆಳಗ್ಗೆ 11.15 ರ ಸುಮಾರಿಗೆ ತಲುಪಿದೆ. ಇದರಲ್ಲಿ ಭಾರತೀಯ ರಾಯಭಾರಿಯೂ ಇದ್ದರೆಂಬುವುದು ಉಲ್ಲೇಖನೀಯ.

ಗೃಹ ಸಚಿವಾಲಯದಿಂದ ತುರ್ತು ವೀಸಾ ಆರಂಭ

ಅನೇಕ ಭಾರತೀಯರು ಇನ್ನೂ ಅಫ್ಘಾನಿಸ್ತಾನದ ಕೆಲ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನೂ ಒಂದೆರಡು ದಿನದಲ್ಲಿ ಏರ್ ಲಿಫ್ಟ್ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುವ ಜನರಿಗೆ ವೀಸಾ ನಿಯಮಗಳನ್ನು ಬದಲಾಯಿಸಿದೆ. ಸರ್ಕಾರವು ಹೊಸ ವರ್ಗದ ಎಲೆಕ್ಟ್ರಾನಿಕ್ ವೀಸಾ, ಇ-ತುರ್ತು ಎಕ್ಸ್-ಮಿಸ್ಕ್ ವೀಸಾವನ್ನು ಪರಿಚಯಿಸಿದೆ. ಇದರೊಂದಿಗೆ ಜನರು ಶೀಘ್ರದಲ್ಲೇ ವೀಸಾ ಪಡೆಯಲು ಸಾಧ್ಯವಾಗುತ್ತದೆ.

Scroll to load tweet…

ಸಹಾಯವಾಣಿ ಸಂಖ್ಯೆ ಆರಂಭ

ಭಾರತೀಯರಿಗೆ ಸಹಾಯ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಹಾಯವಾಣಿ ಸಂಖ್ಯೆ +919717785379 ಮತ್ತು ಇಮೇಲ್ MEAHelpdeskIndia@gmail.com ಮೂಲಕ ತನ್ನ ಸೇವೆ ಆರಂಭಿಸಿದೆ.

Scroll to load tweet…

ಅಜಿತ್ ದೋವಲ್ ಮಾತುಕತೆ

ಮಂಗಳವಾರ ಬೆಳಿಗ್ಗೆ, ಭಾರತೀಯ NSA ಅಜಿತ್ ದೋವಲ್ ಅಮೆರಿಕದ NSA ಯೊಂದಿಗೆ ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವ ವಿಷಯದ ಕುರಿತು ಮಾತನಾಡಿದರು. ಈ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಬಗ್ಗೆ ಮಾತನಾಡುತ್ತಾ ತಾಲಿಬಾನ್ ಇತರ ದೇಶಗಳಿಗೂ ತೊಂದರೆ ಉಂಟು ಮಾಡುತ್ತದೆ. ನಾವು ಕಳೆದ 7 ವರ್ಷಗಳಲ್ಲಿ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿದ್ದೇವೆ. ಗಡಿಯಾಚೆಗಿನ ಭಯೋತ್ಪಾದನೆಯ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಭಾರತವು ತನ್ನಲ್ಲಿ ಬಲಿಷ್ಠ ಮತ್ತು ಸ್ವಾವಲಂಬಿಯಾಗಿದೆ.