10 ವರ್ಷ ಭಾರತದಲ್ಲಿದ್ದ ಅಕ್ರಮವಾಗಿ ನೆಲೆಸಿದ್ದ ಯುವಕ; ಇದೀಗ ತಾಲಿಬಾನ್ ಜೊತೆ ಪ್ರತ್ಯಕ್ಷ!

  • 10 ವರ್ಷ ಮಹಾರಾಷ್ಟ್ರದ ನಾಗ್ಪುರದಲ್ಲಿದ್ದ ಉಗ್ರ
  • ಕಾರ್ಯಾಚರಣೆ ನಡೆಸಿ ಬಂಧಿಸಿದ್ದ ಪೊಲೀಸರಿಗೆ ಕಾದಿದೆ ಅಚ್ಚರಿ
  • ಆಫ್ಘಾನಿಸ್ತಾನಕ್ಕೆ ಗಡೀಪಾರು ಮಾಡಿದ್ದ ಯುವಕ ಇದೀಗ ತಾಲಿಬಾನ್ ಜೊತೆ ಪ್ರತ್ಯಕ್ಷ
Afghan national deported from India was found staying illegally last 10 years apparently joined Taliban ckm

ನಾಗ್ಪುರ(ಆ.20): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯಕ್ಕೆ ಜನ ನಲುಗಿ ಹೋಗಿದ್ದಾರೆ. ವಿಶ್ವೇ ಆಫ್ಗಾನ್ ಜನತೆಯ ಕುರಿತು ಆತಂಕ ವ್ಯಕ್ತಪಡಿಸುತ್ತಿದೆ. ಆದರೆ ತಾಲಿಬಾನ್ ಉಗ್ರರು ಮಾತ್ರ ರುಂಡು ಚೆಂಡಾಡುವನ್ನು ನಿಲ್ಲಿಸಿಲ್ಲ. ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿಯಾಗುತ್ತಿದೆ. ಇದರ ನಡುವೆ ಅಚ್ಚರಿ ಬೆಳವಣಿಗೆಯೊಂದು ನಡೆದಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ 10 ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಯುವ ಇದೀಗ ಆಫ್ಘಾನಿಸ್ತಾನದ ತಾಲಿಬಾನ್ ಉಗ್ರರ ಜೊತೆ ಪ್ರತ್ಯಕ್ಷವಾಗಿದ್ದಾನೆ.

ಆಫ್ಘಾನಿಸ್ತಾನ ಬಿಕ್ಕಟ್ಟು; ಭಾರತದ ಜೊತೆಗಿನ ರಫ್ತು, ಆಮದು ವಹಿವಾಟು ಸ್ಥಗಿತಗೊಳಿಸಿದ ತಾಲಿಬಾನ್!

ಭಾರತಕ್ಕೆ ಪ್ರವಾಸಿ ವೀಸಾ ಮೇಲೆ ಆಗಮಿಸುವವರ ಮೇಲೆ ನಿಗಾ ಇಡಬೇಕು ಅನ್ನೋ ಮಾತುಗಳು ಕೇಳಿಸುತ್ತಲೇ ಇದೆ. ಕಾರಣ ಹೀಗೆ ಬಂದವರಲ್ಲಿ ಅರ್ಧಕ್ಕರ್ಧ ಜನ ಹಿಂತಿರುಗಲ್ಲ. ಇಲ್ಲೇ ಟೆಂಟ್ ಹಾಕಿ ವಿದ್ವಂಸಕ ಕೃತ್ಯ, ಡ್ರಗ್ಸ್ ಸೇರಿದಂತೆ ಹಲವು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಹೆಚ್ಚಾಗಿದೆ. ಹೀಗೆ ಪ್ರವಾಸಿ ವೀಸಾದಲ್ಲಿ ಆಫ್ಘಾನಿಸಿಸ್ತಾನದಿಂದ ಭಾರತಕ್ಕೆ ಆಗಮಿಸಿದ ನೂರಿ ಮೊಹಮ್ಮದ್ ಅಲಿಯಾಸ್ ಅಬ್ದುಲ್ ಹಕ್ ನಾಗ್ಪುರದ ನಗರದ ದಿಗೋರಿ ಏರಿಯಾದಲ್ಲಿ ಮನೆ ಬಾಡಿಗೆ ಪಡೆದು 10 ವರ್ಷದಿಂದ ಅಕ್ರಮವಾಗಿ ನೆಲೆಸಿದ್ದ.

ಆಫ್ಘಾನಿಸ್ತಾನ ಸ್ವಾತಂತ್ರ್ಯ ದಿನಾಚರಣೆ; ಧ್ವಜ ಹಿಡಿದವರ ಮೇಲೆ ತಾಲಿಬಾನ್ ಗುಂಡಿನ ದಾಳಿ!

ಈತನ ಕುರಿತು ಮಾಹಿತಿ ಪಡೆದ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಈ ವೇಳೆ ನೂರ್ ಮೊಹಮ್ಮದ್ ಮೂಲತಃ ಆಫ್ಘಾನಿಸ್ತಾನ ಪ್ರಜೆಯಾಗಿದ್ದು, ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ಬಹಿರಂಗವಾಗಿದೆ. ಹೀಗಾಗಿ ಪೊಲೀಸರು ನೂರ ಮೊಹಮ್ಮದ್ ಬಂಧಿಸಿದ್ದರು. ಕಾನೂನು ಪ್ರಕ್ರಿಯೆ ಮುಗಿಸಿ ಜೂನ್ 23, 2021ರಲ್ಲಿ ನೂರ್ ಮೊಹಮ್ಮದ್‌ನನ್ನು ಆಫ್ಘಾನಿಸ್ತಾನಕ್ಕೆ ಗಡೀಪಾರು ಮಾಡಲಾಗಿತ್ತು. 

ಬಳಿಕ ನಿಟ್ಟುಸಿರು ಬಿಟ್ಟ ಪೊಲೀಸರಿಗೆ ಇದೀಗ ಅಚ್ಚರಿಯಾಗಿದೆ. ಆಫ್ಘಾನಿಸ್ತಾನವನ್ನು ತಾಲೀಬಾನ್ ಉಗ್ರರು ಕೈವಶ ಮಾಡಿಕೊಂಡು ಅಟ್ಟಹಾಸ ಮೆರೆಯುತ್ತಿದ್ದಾರೆ. ತಾಲಿಬಾನಿಗಳ ಕ್ರೌರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದ ಮೇಲೂ ಭಾರತೀಯ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈ ವೇಳೆ ತಾಲಿಬಾನ್ ಉಗ್ರರೊಂದಿಗೆ ಎಕೆ47 ಗನ್ ಹಿಡಿದಿರುವ ಉಗ್ರನ ಫೋಟೋ ನಾಗ್ಪುರ ಪೊಲೀಸರ ಕಣ್ಣಿಗೆ ಬಿದ್ದಿದೆ. ಈ ಫೋಟೋದಲ್ಲಿರುವುದು ಬೇರೆ ಯಾರು ಅಲ್ಲ, ತಾವು ಗಡೀಪಾರು ಮಾಡಿದ್ದ ನೂರ್ ಮೊಹಮ್ಮದ್ ಎಂದು ಪೊಲೀಸರು ಹೇಳಿದ್ದಾರೆ.

ಸಹಾಯ ಮಾಡಿ, ನಮ್ಮನ್ನು ಕಾಪಾಡಿ: ಅಮೆರಿಕ ಸೇನೆ ಎದುರು ಅಫ್ಘಾನ್ ಮಹಿಳೆಯರ ಕಣ್ಣೀರು!

2010ರಲ್ಲಿ ಭಾರತಕ್ಕೆ 6 ತಿಂಗಳ ವೀಸಾ ಮೇಲೆ ಆಗಮಿಸಿದ್ದ ನೂರ್ ಮೊಹಮ್ಮದ್ ಆಗಮಿಸಿದ ಕೆಲಸಕ್ಕಾಗಿ ಅಲೆದಾಡಿದ್ದ. ಬಳಿಕ ವೀಸಾ ಅವಧಿ ಅಂತ್ಯವಾಗುತ್ತಿದ್ದಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ನೂರ್ ಮೊಹಮ್ಮದ್ ಅರ್ಜಿ ಸಲ್ಲಿಸಿದ್ದ. ತನಗೆ ನಿರಾಶ್ರಿತ ತಾಣದಲ್ಲಿ ಆಶ್ರಯ ನೀಡುವಂತೆ ಕೋರಿದ್ದ. ಆದರೆ ಈತನ ಅರ್ಜಿ ತಿರಸ್ಕೃತಗೊಂಡಿತ್ತು.

ಬೇರೆ ದಾರಿ ಕಾಣದೆ ನಾಗ್ಪುರದಲ್ಲೇ ಉಳಿದುಕೊಂಡ ನೂರ್ ಮೊಹಮ್ಮದ್ ಗಡೀಪಾರಾದ ಬಳಿಕ ಸುಳಿವೇ ಇರಲಿಲ್ಲ. ಇದೀಗ ತಾಲೀಬಾನ್ ಉಗ್ರರೊಂದಿಗೆ ಕಾರ್ಯಚರಣೆಯಲ್ಲಿ ಕಾಣಿಸಿಕೊಂಡಿದ್ದಾನೆ. ಈತನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Latest Videos
Follow Us:
Download App:
  • android
  • ios