ಫೈಟರ್ ಪೈಲಟ್‌ ಇಲ್ಲದೆ ಹಾರಾಡುವ 'ಮೇಡ್‌ ಇನ್‌ ಇಂಡಿಯಾ' ಯುದ್ಧವಿಮಾನ ಯಶಸ್ವಿ ಹಾರಾಟ!

ಮಾನವ ರಹಿತ ಯುದ್ಧ ವಿಮಾನವನ್ನು ‘ಅಟಾನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್’ ಎಂದೂ ಕರೆಯಲಾಗುತ್ತದೆ. ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಈ ಯುದ್ಧವಿಮಾನದ ಮೊದಲ ಹಾರಾಟವನ್ನು ನಡೆಸಲಾಗಿದೆ.

Aeronautical Development Establishment developed unmanned fighter aircraft successfully carries out maiden flight By DRDO san

ಚಿತ್ರದುರ್ಗ (ಜುಲೈ 1):  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಟಾನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ (Autonomous Flying Wing Technology Demonstrator) ಮೊಟ್ಟಮೊದಲ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ ಎಂದು ಶುಕ್ರವಾರ ಹೇಳಿಕೆಯಲ್ಲಿ ಪ್ರಕಟಿಸಿದೆ. ಈ ಪರೀಕ್ಷಾ ಹಾರಾಟ ಇಂದು ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ (Aeronautical Test Range) ಯಶಸ್ವಿಯಾಗಿ ನಡೆಸಲಾಯಿತು ಎಂದು ಡಿಆರ್‌ಡಿಒ (DRDO) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹಾರಾಟದ ಕುರಿತು ಹೆಚ್ಚಿನ ವಿವರಗಳನ್ನು ನೀಡಿರುವ ಡಿಆರ್‌ಡಿಓ “ಸಂಪೂರ್ಣ ಸ್ವಾಯತ್ತ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನವು ಟೇಕ್-ಆಫ್, ವೇ ಪಾಯಿಂಟ್ ನ್ಯಾವಿಗೇಷನ್ ಮತ್ತು ಸರಳವಾದ ಟಚ್‌ಡೌನ್ ಒಳಗೊಂಡಂತೆ ಪರಿಪೂರ್ಣ ಹಾರಾಟವನ್ನು ಪ್ರದರ್ಶಿಸಿತು. ಭವಿಷ್ಯದ ಮಾನವರಹಿತ ವಿಮಾನಗಳ ಅಭಿವೃದ್ಧಿಗೆ ನಿರ್ಣಾಯಕ ತಂತ್ರಜ್ಞಾನಗಳನ್ನು ಸಾಬೀತುಪಡಿಸುವ ವಿಷಯದಲ್ಲಿ ಈ ಹಾರಾಟವು ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ ಮತ್ತು ಅಂತಹ ಕಾರ್ಯತಂತ್ರದ ರಕ್ಷಣಾ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯಾಗಿದೆ' ಎಂದು ಹೇಳಿದೆ.

ಡಿಆರ್‌ಡಿಒ ಅಡಿಯಲ್ಲಿನ ಪ್ರಮುಖ ಸಂಶೋಧನಾ ಪ್ರಯೋಗಾಲಯವಾದ ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎಡಿಇ) ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಮಾನವರಹಿತ ಯುದ್ಧ ವಿಮಾನವು (Unmanned Aerial Vehicle) ಸಣ್ಣ, ಟರ್ಬೋಫ್ಯಾನ್ ಎಂಜಿನ್‌ನಿಂದ ಚಾಲಿತವಾಗಿದೆ ಎಂದು ನವದೆಹಲಿಯ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಸ್ಥೆ ತಿಳಿಸಿದೆ.. ವಿಮಾನದ ಏರ್‌ಫ್ರೇಮ್, ಅದರ ಅಂಡರ್‌ಕ್ಯಾರೇಜ್, ಫ್ಲೈಟ್ ಕಂಟ್ರೋಲ್‌ಗಳು ಮತ್ತು ಏವಿಯಾನಿಕ್ಸ್ ಸಿಸ್ಟಮ್ ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅದು ಹೇಳಿದೆ.


ಯಶಸ್ವಿ ಕ್ಷಿಪಣಿ ಪರೀಕ್ಷೆ ನಡೆಸಿದ ಡಿಆರ್‌ಡಿಓ-ನೌಕಾಸೇನೆ

ಇದರ ನಡುವೆ, ಡಿಆರ್‌ಡಿಒಗೆ ಅಭಿನಂದನೆ ಸಲ್ಲಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚಿತ್ರದುರ್ಗ ಎಟಿಆರ್‌ನಿಂದ ಅಟಾನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಯಶಸ್ವಿ ಚೊಚ್ಚಲ ಹಾರಾಟಕ್ಕಾಗಿ @DRDO_India ಗೆ ಅಭಿನಂದನೆಗಳು. ಇದು ಸ್ವಾಯತ್ತ ವಿಮಾನಗಳ ಕಡೆಗೆ ಒಂದು ಪ್ರಮುಖ ಸಾಧನೆಯಾಗಿದೆ, ಇದು ನಿರ್ಣಾಯಕ ಮಿಲಿಟರಿ ವ್ಯವಸ್ಥೆಗಳ ವಿಷಯದಲ್ಲಿ ಆತ್ಮನಿರ್ಭರ್ ಭಾರತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

SMART Missile ಸೂಪರ್‌ಸಾನಿಕ್‌ ಕ್ಷಿಪಣಿ ಆಧರಿತ ಟಾರ್ಪೆಡೋ ಪರೀಕ್ಷೆ ಪೂರ್ಣ ಯಶಸ್ವಿ!

ಡಿಆರ್‌ಡಿಒ ಅಧ್ಯಕ್ಷರಾದ ಡಾ ಜಿ ಸತೀಶ್ ರೆಡ್ಡಿ ಮತ್ತು ರಕ್ಷಣಾ ಇಲಾಖೆಯ ಕಾರ್ಯದರ್ಶಿ ಆರ್ & ಡಿ ಕೂಡ ವ್ಯವಸ್ಥೆಯ ವಿನ್ಯಾಸ, ಅಭಿವೃದ್ಧಿ ಮತ್ತು ಪರೀಕ್ಷೆಯಲ್ಲಿ ತೊಡಗಿರುವ ತಂಡಗಳ ಪ್ರಯತ್ನವನ್ನು ಈ ವೇಳೆ  ಶ್ಲಾಘಿಸಿದರು.

 

Latest Videos
Follow Us:
Download App:
  • android
  • ios