ಯಶಸ್ವಿ ಕ್ಷಿಪಣಿ ಪರೀಕ್ಷೆ ನಡೆಸಿದ ಡಿಆರ್‌ಡಿಓ-ನೌಕಾಸೇನೆ
ಡಿಆರ್‌ಡಿಓ ಹಾಗೂ ಭಾರತೀಯ ನೌಕಾಸೇನೆ ಅಭಿವೃದ್ಧಿ ಪಡಿಸಿದ ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (ವಿಎಲ್-ಎಸ್ಆರ್‌ಎಸ್‌ಎಎಂ) ಅನ್ನು ಶುಕ್ರವಾರ ಒಡಿಶಾ ಕರಾವಳಿ ಚಂಡೀಪುರದಲ್ಲಿ ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ.
ಭುವನೇಶ್ವರ (ಜೂನ್ 24): ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (ವಿಎಲ್-ಎಸ್ಆರ್‌ಎಸ್‌ಎಎಂ) ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯು ಒಡಿಶಾದ ಕರಾವಳಿಯ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಲ್ಲಿ ಭಾರತೀಯ ನೌಕಾಸೇನೆಯ ( Indian Navy) ಯುದ್ಧ ನೌಕೆಯಿಂದ (War Ship) ಶುಕ್ರವಾರ ಯಶಸ್ವಿ ಪರೀಕ್ಷೆ ನಡೆಸಿತು.
VL-SRSAM ಯುದ್ಧ ಹಡಗಿನ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದ್ದು, ಸಮುದ್ರದ ಸ್ಕಿಮ್ಮಿಂಗ್ ಗುರಿಗಳನ್ನು ಒಳಗೊಂಡಂತೆ ಹತ್ತಿರದ ವ್ಯಾಪ್ತಿಯಲ್ಲಿ ವಿವಿಧ ವೈಮಾನಿಕ ಬೆದರಿಕೆಗಳನ್ನು ತಟಸ್ಥಗೊಳಿಸಲು ನಿಟ್ಟಿನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಈ ವ್ಯವಸ್ಥೆಯ ಉಡಾವಣೆಯು ಹೆಚ್ಚಿನ ವೇಗದ ವೈಮಾನಿಕ ಗುರಿಯನ್ನು ಅನುಕರಿಸುವ ವಿಮಾನದ ವಿರುದ್ಧ ನಡೆಸಲಾಯಿತು, ಹಾಗೂ ಈ ಪರೀಕ್ಷೆಯು ಅತ್ಯಂತ ಯಶಸ್ವಿಯಾಗಿ ಮುಗಿದಿದೆ. ಒಡಿಶಾದ ಚಂಡೀಪುರದ ITR ನಿಂದ ನಿಯೋಜಿಸಲಾದ ಹಲವಾರು ಟ್ರ್ಯಾಕಿಂಗ್ ಉಪಕರಣಗಳನ್ನು ಬಳಸಿಕೊಂಡು ಆರೋಗ್ಯ ನಿಯತಾಂಕಗಳೊಂದಿಗೆ ಕ್ಷಿಪಣಿಯ ಹಾರಾಟದ ಮಾರ್ಗವನ್ನು ಮೇಲ್ವಿಚಾರಣೆ ಮಾಡಲಾಯಿತು. ಪರೀಕ್ಷಾ ಉಡಾವಣೆಯನ್ನು DRDO ಮತ್ತು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡಿದರು.
ಕ್ಷಿಪಣಿಯ ಯಶಸ್ವಿ ಪರೀಕ್ಷೆ ಮಾಡಿದ ಡಿಆರ್‌ಡಿಓ (DRDO), ಭಾರತೀಯ ನೌಕಾಸೇನೆ ಹಾಗೂ ಯಶಸ್ವಿ ಪರೀಕ್ಷೆಯಲ್ಲಿ ಭಾಗಿಯಾದ ಎಲ್ಲರಿಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence minister Rajnath Singh) ಅಭಿನಂದನೆ ಸಲ್ಲಿದ್ದಾರೆ. ವೈಮಾನಿಕ ಬೆದರಿಕೆಗಳ ವಿರುದ್ಧ ಭಾರತೀಯ ನೌಕಾಪಡೆಯ ಹಡಗುಗಳ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ರಕ್ಷಾಕವಚವನ್ನು ವ್ಯವಸ್ಥೆಯು ಸೇರಿಸಿದೆ ಎಂದು ಹೇಳಿದರು.
VL-SRSAM ನ ಯಶಸ್ವಿ ಹಾರಾಟ ಪರೀಕ್ಷೆಗಾಗಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಭಾರತೀಯ ನೌಕಾಪಡೆ ಮತ್ತು DRDO ಅನ್ನು ಶ್ಲಾಘನೆ ಮಾಡಿದ್ದಾರೆ. ಈ ಸ್ವದೇಶಿ ಕ್ಷಿಪಣಿ ವ್ಯವಸ್ಥೆಯ ಅಭಿವೃದ್ಧಿಯು ಭಾರತೀಯ ನೌಕಾಪಡೆಯ ರಕ್ಷಣಾತ್ಮಕ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.
ರಕ್ಷಣಾ ಇಲಾಖೆಯ ಕಾರ್ಯದರ್ಶಿ, ಆರ್ & ಡಿ ಮತ್ತು ಅಧ್ಯಕ್ಷ ಡಿಆರ್‌ಡಿಒ ಡಾ ಜಿ ಸತೀಶ್ ರೆಡ್ಡಿ ಯಶಸ್ವಿ ಹಾರಾಟ ಪರೀಕ್ಷೆಯಲ್ಲಿ ತೊಡಗಿರುವ ತಂಡಗಳನ್ನು ಶ್ಲಾಘಿಸಿದರು. ಈ ಪರೀಕ್ಷೆಯು ಭಾರತೀಯ ನೌಕಾ ಹಡಗುಗಳಲ್ಲಿ ಸ್ವದೇಶಿ ಶಸ್ತ್ರಾಸ್ತ್ರ ವ್ಯವಸ್ಥೆಯ ಏಕೀಕರಣವನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದರು. ಇದು ಭಾರತೀಯ ನೌಕಾಪಡೆಯ ಬಲ ಇನ್ನಷ್ಟು ಹೆಚ್ಚಾಗಿದೆ ಎಂದು ಸಾಬೀತುಪಡಿಸುತ್ತದೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ್ ಭಾರತ್’ ದೃಷ್ಟಿಯ ಕಡೆಗೆ ಮತ್ತೊಂದು ಮೈಲಿಗಲ್ಲು ಎಂದು ಅವರು ಹೇಳಿದರು.
ಹೈಪರ್‌ಸಾನಿಕ್ ಜಿರ್ಕಾನ್ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ರಷ್ಯಾ!
ಏನಿದರ ವಿಶೇಷತೆ: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಭಾರತೀಯ ನೌಕಾಪಡೆಯ ಯುದ್ಧನೌಕೆಯಿಂದ ಕ್ಷಿಪಣಿಯನ್ನು ಉಡಾಯಿಸಿದೆ, ಅದು ಶತ್ರುಗಳ ಯಾವುದೇ ವೈಮಾನಿಕ ದಾಳಿಯನ್ನು ಶಮನಗೊಳಿಸಬಲ್ಲದು. ಇದರ ವೇಗ, ನಿಖರತೆ ಮತ್ತು ಫೈರ್‌ಪವರ್ ಎಷ್ಟು ಮಾರಣಾಂತಿಕವಾಗಿದೆ ಎಂದರೆ ಅದನ್ನು ರಾಡಾರ್‌ನಲ್ಲೂ ಹಿಡಿಯಲು ಸಾಧ್ಯವಿಲ್ಲ. ಈ ಕ್ಷಿಪಣಿಯ ಹೆಸರು ವರ್ಟಿಕಲ್ ಲಾಂಚ್-ಶಾರ್ಟ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (VL-SRSAM). ಇದು ಕಡಿಮೆ ಎತ್ತರದಲ್ಲಿ ಹಾರುವ ಗುರಿಯನ್ನು ಹೊಡೆದುರುಳಿಸುವ ಮೂಲಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣ ಮಾಡಿದೆ. ಕಡಿಮೆ ಎತ್ತರದಲ್ಲಿ ಹಾರುವ ಗುರಿ ಎಂದರೆ, ಸಣ್ಣ ಯುದ್ಧವಿಮಾನ, ಡ್ರೋಣ್, ಮಿಸೈಲ್ ಅಥವಾ ಹೆಲಿಕಾಪ್ಟರ್ ಆಗಿದೆ. ಈ ಗುರಿಯನ್ನು ರಾಡಾರ್‌ನಿಂದ ತಪ್ಪಿಸಿಕೊಳ್ಳುವ ಹೊಡೆದುರುಳಿಸುವ ಕ್ಷಮತೆ ಭಾರತ ಪರೀಕ್ಷೆ ನಡೆಸಿದ ಕ್ಷಿಪಣಿಗೆ ಇದೆ.
AgniIV 4 ಸಾವಿರ ಕಿ.ಮೀ ಗುರಿ ಸಾಮರ್ಥ್ಯದ ಅಗ್ನಿ 4 ಕ್ಷಿಪಣಿ ಪರೀಕ್ಷೆ ಯಶಸ್ವಿ, ಶತ್ರುಗಳಿಗೆ ನಡುಕ!
ಈ ಕ್ಷಿಪಣಿಯನ್ನು ಯಾವ ಯುದ್ಧನೌಕೆಯಿಂದ ಹಾರಿಸಲಾಗಿದೆ ಎಂಬುದನ್ನು ಡಿಆರ್‌ಡಿಒ ಬಹಿರಂಗಪಡಿಸಿಲ್ಲ. ಆದರೆ ಭಾರತದ ಈ ರಹಸ್ಯ ಅಸ್ತ್ರ ಬಹಳ ಮಾರಕ ಎನ್ನುವುದಂತೂ ಸತ್ಯ. ಬರಾಕ್-1 ಕ್ಷಿಪಣಿಗಳನ್ನು ಭಾರತೀಯ ಯುದ್ಧನೌಕೆಗಳಿಂದ ತೆಗೆದುಹಾಕಲು ಈ ಕ್ಷಿಪಣಿಯ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಸ್ವದೇಶಿ ಆಯುಧಗಳನ್ನು ಯುದ್ಧನೌಕೆಗೆ ಬಳಕೆ ಮಾಡಲಾಗುತ್ತಿದೆ. ಬರಾಕ್-1 ಕ್ಷಿಪಣಿಯನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಮತ್ತು ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಜಂಟಿಯಾಗಿ ಅಭಿವೃದ್ಧಿಪಡಿಸಿತ್ತು.