Asianet Suvarna News Asianet Suvarna News

ಏರೋ ಇಂಡಿಯಾದಲ್ಲಿ ಗಮನ ಸೆಳಿತಿದೆ 7 ಭಾರತೀಯ ಸೈನಿಕರ ಅದ್ಭುತ ಆವಿಷ್ಕಾರಗಳು

ಮಾಲ್‌ವೇರ್‌ಗಳನ್ನು ತಡೆಯುವ ಪ್ರಹಾರ್‌, ಜಿಪಿಎಸ್‌ನಿಂದ ತಪ್ಪಿಸಿಕೊಂಡರೂ ಸೈನ್ಯದ ವಾಹನಗಳನ್ನು ಹುಡುಕಲಿದೆ ಸಂಚಾರ್‌, ತುಂಡಾದ ಬೆರಳಿನ ಶಸ್ತ್ರಚಿಕಿತ್ಸೆಯ ಪರಿಕರಕ್ಕೆ  3 ಸಾವಿರ ಬದಲು ಖರ್ಚಾಗುವುದು ಕೇವಲ 300. ಇವೆಲ್ಲ ಏರೋ ಇಂಡಿಯಾದಲ್ಲಿ ಪ್ರದರ್ಶನಗೊಳ್ಳುತ್ತಿರುವ ಏಳು ಭಾರತೀಯ ಸೈನಿಕರು ರೂಪಿಸಿರುವ ಆಧುನಿಕ ಆವಿಷ್ಕಾರಗಳು.

Aero India spotlights 7 modern innovations of the Indian Army akb
Author
First Published Feb 15, 2023, 10:37 AM IST | Last Updated Feb 15, 2023, 10:46 AM IST

ಮಯೂರ್‌ ಹೆಗಡೆ, ಕನ್ನಡಪ್ರಭ ವಾರ್ತೆ 

ಬೆಂಗಳೂರು: ಮಾಲ್‌ವೇರ್‌ಗಳನ್ನು ತಡೆಯುವ ಪ್ರಹಾರ್‌, ಜಿಪಿಎಸ್‌ನಿಂದ ತಪ್ಪಿಸಿಕೊಂಡರೂ ಸೈನ್ಯದ ವಾಹನಗಳನ್ನು ಹುಡುಕಲಿದೆ ಸಂಚಾರ್‌, ತುಂಡಾದ ಬೆರಳಿನ ಶಸ್ತ್ರಚಿಕಿತ್ಸೆಯ ಪರಿಕರಕ್ಕೆ  3 ಸಾವಿರ ಬದಲು ಖರ್ಚಾಗುವುದು ಕೇವಲ 300. ಇವೆಲ್ಲ ಏರೋ ಇಂಡಿಯಾದಲ್ಲಿ ಪ್ರದರ್ಶನಗೊಳ್ಳುತ್ತಿರುವ ಏಳು ಭಾರತೀಯ ಸೈನಿಕರು ರೂಪಿಸಿರುವ ಆಧುನಿಕ ಆವಿಷ್ಕಾರಗಳು. ನವೋದ್ಯಮ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಂಪನಿಗಳ ನಡುವೆ ಯೋಧರೇ ರೂಪಿಸಿರುವ ರಕ್ಷಣಾ ಕ್ಷೇತ್ರದ ಹೊಸತನಗಳು ಗಮನಸೆಳೆಯುತ್ತಿವೆ. ಇವರಿಗಾಗಿಯೇ ಇಂಡಿಯನ್‌ ಪೆವಿಲಿಯನ್‌ನಲ್ಲಿ ವಿಶೇಷ ಸ್ಥಾನ ಕಲ್ಪಿಸಲಾಗಿದೆ.

ಪ್ರಹಾರ್‌

ಕರ್ನಲ್‌ ಟಿ.ಪ್ರಶಾಂತ್‌ (Colonel T. Prashant) ರೂಪಿಸಿರುವ ಪ್ರಹಾರಿ ಸಾಫ್ಟ್ವೇರ್‌ (Prahari)ಕಂಟಕವಾಗಿರುವ ಮಾಲ್‌ವೇರ್‌ (anti-malware tool) ಅನ್ನು ಪರಿಣಾಮಕಾರಿಯಾಗಿ ತಡೆಯುವ ಉಪಕರಣ. ತಂತ್ರಾಂಶ ಹಾಗೂ ಹಾರ್ಡ್‌ವೇರ್‌ನ ಸಂಯೋಜಕ ಆಗಿರುವ ಇದು ದತ್ತಾಂಶ ಕದಿಯುವ, ಕಳೆದು ಹೋಗುವ ಸಮಸ್ಯೆಗೆ ಪರಿಹರಿಸುತ್ತಿದೆ. ಕಳೆದ ಜನವರಿಯಲ್ಲಷ್ಟೇ ರಕ್ಷಣಾ ಸಚಿವಾಲಯ (Ministry of Defense)ಇದರ ಬಳಕೆಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಪ್ರಾಯೋಗಿಕ ಹಂತದ ಪರೀಕ್ಷೆ ನಡೆಸಿದೆ. ಪೆನ್‌ಡ್ರೈವ್‌ ಮಾದರಿಯಲ್ಲಿರುವ ಈ ಉಪಕರಣವನ್ನು ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗೆ ಅಳವಡಿಸಿದರೆ ಮಾಲ್‌ವೇರ್‌ಗಳಿಂದ ರಕ್ಷಣೆ ಪಡೆಯಬಹುದು. ಸೈನ್ಯ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಇದನ್ನು ಬಳಸಬಹುದು. ಜತೆಗೆ ಡಿಲೀಟ್‌ ಮಾಡಿದ ಬಳಿಕವೂ ಖಾಸಗಿ ದತ್ತಾಂಶ ಕಂಪ್ಯೂಟರ್‌ನ ಹೆಚ್ಚುವರಿ ಮೆಮೊರಿಯಲ್ಲೂ ಇರದಂತೆ ನೋಡಿಕೊಳ್ಳುತ್ತದೆ.

ರಕ್ಷಣಾ ಉತ್ಪನ್ನಗಳ ರಫ್ತು 40000 ಕೋಟಿಗೆ ಏರಿಸುವ ಗುರಿ: ಪ್ರಧಾನಿ

ಹ್ಯಾಂಡ್‌ ಹೆಲ್ಡ್‌ ಎಫ್‌-ಎಸ್‌ಎನ್‌ಎಸ್‌ ಗನ್‌

ಲೆಫ್ಟಿನೆಂಟ್‌ ಕರ್ನಲ್‌ ಚೌಹಾಣ್‌ ಸು. (Lieutenant Colonel Chauhan Su) ರೂಪಿಸಿರುವ ಹ್ಯಾಂಡ್‌ ಹೆಲ್ಡ್‌ ಎಫ್‌-ಎಸ್‌ಎನ್‌ಎಸ್‌ ಗನ್‌ (F-SNS gun)ಗಡಿಯಲ್ಲಿ ಡ್ರೋನ್‌ಗಳ ಮೇಲೆ ನಿಗಾ ಇಡುತ್ತದೆ. ಡ್ರೋನ್‌ಗಳನ್ನು ಕೇವಲ ಹೊಡೆದುರುಳಿಸುವುದು ಮಾತ್ರವಲ್ಲದೆ ಅವು ಹ್ಯಾಂಡ್ಲರ್‌ಗಳಿಗೆ ಮಾಹಿತಿ ರವಾನಿಸದಂತೆಯೂ ರಿಮೋಟ್‌ಗಳನ್ನು ನಿಷ್ಕ್ರಿ ಯಗೊಳಿಸುವ ಸಾಮರ್ಥ್ಯ ಹೊಂದಿದೆ. 2 ಕಿ.ಮೀ. ಅಂತರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಇದನ್ನು ಈಗಾಗಲೇ ಪಂಜಾಬ್‌, ಜಮ್ಮುವಿನಲ್ಲಿ ಬಳಸಲಾಗುತ್ತಿದೆ. ಎಲ್‌ಒಸಿಯಲ್ಲಿ (LOC) ಇತ್ತೀಚೆಗಷ್ಟೇ ಇದನ್ನು ಬಳಸಿ ಡ್ರೋಣ್‌ಗಳನ್ನು ನಿಷ್ಕ್ರಿಯ ಮಾಡಲಾಗಿದೆ.


ಸೈನಿಕನ ಕೈಯಲ್ಲೇ ಶತ್ರುಗಳ ಮಾಹಿತಿ

ಕ್ಯಾ.ವಿಕಾಸ್‌ ತ್ರಿಪಾಟಿ (capt K Vikas Tripathi)ರೂಪಿಸಿರುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ವ್ಯವಸ್ಥೆ ಇದು. ಸಾಮಾನ್ಯ ಗಡಿ ಕಾಯುವ ಸೈನಿಕನಿಗೆ ವೈರಿ ರಾಷ್ಟ್ರಗಳು ವಂಚಿಸಲು ಹಲವು ಮಾರ್ಗ ಅನುಸರಿಸುತ್ತವೆ. ಅಂತ ಸಂದರ್ಭದಲ್ಲಿ ಅಗ್ನಿ-ಡಿ (Agni-D) ನೆರವಿಗೆ ಬರುತ್ತದೆ. ಹೈ ಆ್ಯಂಡ್‌ ಕಂಪ್ಯೂಟರ್‌ನಲ್ಲಿ ಈ ತಂತ್ರಾಂಶ ಅಳವಡಿಸಿ ಸೈನಿಕನ ಕೈಗೆ ಡಿವೈಸ್‌ ನೀಡಲಾಗುತ್ತದೆ. ಇದರಲ್ಲಿನ ಕ್ಯಾಮೆರಾ ಸೈನಿಕನ ಎದುರು ಹಾದು ಹೋಗುವ ಶತ್ರುರಾಷ್ಟ್ರಗಳ ಎಲ್ಲ ವಾಹನ, ಡ್ರೋನ್‌ಗಳನ್ನು ಗುರುತಿಸಿ ಆತನಿಗೆ ತಿಳಿಸಿ ಎಚ್ಚರಿಸುತ್ತದೆ. ಜತೆಗೆ ಸೈನ್ಯದ ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸುತ್ತದೆ.

ವಿಮಾನ ಹಾರಾಟದಲ್ಲಿ ಸಾಧನೆ ತೋರಿದ ಭಾರತೀಯ ಮಹಿಳೆಯರು…
ಅಹಾನ್‌ ಸೈನ್‌ಕ್ಯಾಪ್‌

ಯೋಧರ ಆವಿಷ್ಕಾರ ವಿಭಾಗದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಉಪಕರಣವಿದು. ಯುದ್ಧದಲ್ಲಿ ಸೈನಿಕರ ಬೆರಳಿಗೆ ಗಾಯ, ಎಲುಬು ಮುರಿಯುವ ಸಾಧ್ಯತೆ ಹೆಚ್ಚು. ಇಂಥ ಸಂದರ್ಭದಲ್ಲಿ ಅಹಾನ್‌ ಸೈನ್‌ಕ್ಯಾಫ್‌ (Ahan SignCaf) ನೆರವಾಗಲಿದೆ. ಶಸ್ತ್ರಚಿಕಿತ್ಸೆ ಬಳಿಕ ಮೂಳೆ ಜೋಡಣೆಗೆ ಈ ಹಿಂದೆ ಬಳಸುತ್ತಿದ್ದ ಕಬ್ಬಿಣದ ಸಪೋರ್ಟರ್‌ಗಳ ಬದಲಾಗಿ ಸಿರಿಂಜ್‌ನ ಸೂಜಿಯ ಕ್ಯಾಪ್‌ ಬಳಸಿ ಇದನ್ನು ರೂಪಿಸಿದ್ದಾರೆ. ಬೆರಳಿಗೆ ಬಲವರ್ದನೆ ನೀಡುವ ಈ ಉಪಕರಣ ಸಿರಿಯಾ, ಟರ್ಕಿಗೆ ರವಾನೆ ಆಗಿದೆ. ಕಬ್ಬಿಣದ ಸಪೋರ್ಟರ್‌ಗೆ 3 ಸಾವಿರ ವೆಚ್ಚ ತಗುಲಿದರೆ ಇದಕ್ಕೆ ಕೇವಲ 300 ವೆಚ್ಚವಾಗುತ್ತದೆ ಎನ್ನುತ್ತಾರೆ ಇದನ್ನು ರೂಪಿಸಿರುವ ಕರ್ನಲ್‌ ವಿಜಯ್‌ಕುಮಾರ್‌ ಪಾಂಡೆ (Colonel Vijaykumar Pandey).

ಪ್ರಕೃತಿ ವಿಕೋಪ, ಯುದ್ಧದಂತಹ ಸಂದರ್ಭದಲ್ಲಿ ಸೈನಿಕರಿಗೆ, ಸಂತ್ರಸ್ತರಿಗೆ ಆಹಾರ ಸೇರಿ ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳನ್ನು ನಿರಂತರವಾಗಿ ಟ್ರ್ಯಾಕ್‌ ಮಾಡುವ ಹಾಗೂ ಅದರ ಮಾಹಿತಿಯನ್ನು ರವಾನಿಸುವ ಸಂಚಾರ್‌ ಎಂಬ ತಂತ್ರಾಂಶ ಹಾಗೂ ತ್ರಿಶೂಲ್‌ ಉಪಕರಣ ಕೂಡ ಸೈನಿಕರ ಆವಿಷ್ಕಾರ ವಿಭಾಗದಲ್ಲಿದೆ.

Latest Videos
Follow Us:
Download App:
  • android
  • ios