ವಾಟ್ಸಪ್ ವಾಯ್ಸ್ ನೋಟ್‌ನಲ್ಲಿ ತಲಾಖ್ ನೀಡಿದ್ದ ಗಂಡ ಅರೆಸ್ಟ್
ವಾಟ್ಸಪ್ ವಾಯ್ಸ್ ಮೆಸೇಜ್‌ನಲ್ಲಿ ಮೊದಲ ಪತ್ನಿಗೆ ತ್ರಿಪಲ್ ತಲಾಖ್ ಹೇಳಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಮಕ್ಕಳ ಜೊತೆ ತವರು ಮನೆಯಲ್ಲಿ ವಾಸವಾಗಿದಗ್ದರು.
ಹೈದರಾಬಾದ್: ವಾಟ್ಸಪ್ ವಾಯ್ಸ್ ನೋಟ್‌ನಲ್ಲಿ ಮೊದಲ ಪತ್ನಿಗೆ ತ್ರಿಪಲ್ ತಲಾಖ್ ಹೇಳಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಅಬ್ದುಲ್ ಅತೀಖ್ ಬಂಧಿತ ಪತಿ. ಅಬ್ದುಲ್ ಅತೀಖ್ ಅದಿಲಾಬಾದ್ ಪಟ್ಟಣದ ಕೆಆರ್‌ಕ ಕಾಲೋನಿಯ ನಿವಾಸಿಯಾಗಿದ್ದಾನೆ. ಅಬ್ದುಲ್ ಅತೀಖ್ ಸಾರಿಗೆ ವಿಭಾಗದಲ್ಲಿ ಕೆಲಸ ಮಾಡಕೊಂಡಿದ್ದಾನೆ ಎಂದು ಅದಿಲಾಬಾದ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಜಿ.ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
2017ರಲ್ಲಿ ಜಾಸ್ಮೀನ್ ಎಂಬವರನ್ನು ಅಬ್ದುಲ್ ಅತೀಖ್ ಮದುವೆಯಾಗಿದ್ದನು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಜಾಸ್ಮೀನ್ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತವರಿನಲ್ಲಿ ವಾಸವಾಗಿದ್ದರು. ಈ ನಡುವ ಅಬ್ದುಲ್ ಅತೀಕ್ ಮತ್ತೊಂದು ಮದುವೆಯಾಗಿದ್ದಾನೆ.
ತ್ರಿವಳಿ ತಲಾಖ್‌ನಿಂದ ಬೇಸತ್ತ ಮುಸ್ಲಿಂ ಮಹಿಳೆ: ಹಿಂದೂ ಯುವಕನೊಂದಿಗೆ ದೇಗುಲದಲ್ಲಿ ಮದುವೆ
ಕಾನೂನು ಹೋರಾಟ ನಡೆಸುಂತೆ ಕುಟುಂಬಸ್ಥರ ಸಲಹೆ
ಜಾಸ್ಮೀನ್ ಜೊತೆಗಿನ ಕಲಹ ಮುಂದುವರಿದ ಹಿನ್ನೆಲೆ ಅಬ್ದುಲ್ ಅತೀಖ್ ವಾಟ್ಸಪ್ ವಾಯ್ಸ್ ನೋಟ್‌ನಲ್ಲಿ ತ್ರಿಪಲ್ ತಲಾಖ್ ಸಂದೇಶವನ್ನು ಕಳುಹಿಸಿದ್ದಾನೆ. ವಾಯ್ಸ್ ನೋಟ್ ಸಂದೇಶವನ್ನು ಜಾಸ್ಮೀನ್ ಎರಡು ಕುಟುಂಬಗಳಿಗೆ ಕಳುಹಿಸಿದ್ದಾರೆ. ಎರಡು ಕುಟುಂಬಗಳ ಸದಸ್ಯರು ಈ ಸಂಬಂಧ ದೂರು ದಾಖಲಿಸಿ, ಕಾನೂನು ಹೋರಾಟ ನಡೆಸುವಂತೆ ಸಲಹೆ ನೀಡಿದ್ದಾರೆ.
ತಲಾಖ್ ನೀಡಿದ ಪತಿಯ ಬಂಧನ
ಕುಟುಂಬಸ್ಥರ ಸಲಹೆ ಮೇರೆಗೆ ತಲಾಖ್ ಹೇಳಿದ ಪತಿ ಅಬ್ದುಲ್ ಲತೀಖ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಅದಿಲಾಬಾದ್ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತಲಾಖ್ ನೀಡಿದ ಪತಿಯನ್ನು ಬಂಧಿಸಿದ್ದಾರೆ.
ತ್ರಿವಳಿ ತಲಾಕ್ ಆಘಾತ, ಮುಸ್ಲಿಂ ಧರ್ಮವನ್ನೇ ತೊರೆದು ಹಿಂದು ಯುವಕರ ಮದುವೆಯಾದ ಮಹಿಳೆಯರು!