Asianet Suvarna News Asianet Suvarna News

ಡ್ರಗ್ ಅಡಿಕ್ಷನ್ ಜೊತೆ ಕುಡಿತದ ಚಟ: ಅಮ್ಮ, ಹೆಂಡತಿ ಮೂವರು ಮಕ್ಕಳ ಕೊಂದು ಸಾವಿಗೆ ಶರಣಾದ ಪಾಪಿ

ಕುಡಿತದ ಜೊತೆಗೆ ಮಾದಕ ವ್ಯಸನದ ಚಟಕ್ಕೂ ದಾಸನಾಗಿದ್ದ ವ್ಯಕ್ತಿಯೋರ್ವ  ತನ್ನ ಮನೆಮಂದಿಯೆಲ್ಲರನ್ನೂ ಕೊಂದು ಕೊನೆಗೆ ತಾನೂ ಸಾವಿಗೆ ಶರಣಾದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸೀತಾಪುರ್‌ನಲ್ಲಿ ನಡೆದಿದೆ.

Addiction to alcohol and drug UP man killed mother, wife and three children and later surrendered to death akb
Author
First Published May 11, 2024, 2:03 PM IST

ಲಕ್ನೋ: ಕುಡಿತದ ಜೊತೆಗೆ ಮಾದಕ ವ್ಯಸನದ ಚಟಕ್ಕೂ ದಾಸನಾಗಿದ್ದ ವ್ಯಕ್ತಿಯೋರ್ವ  ತನ್ನ ಮನೆಮಂದಿಯೆಲ್ಲರನ್ನೂ ಕೊಂದು ಕೊನೆಗೆ ತಾನೂ ಸಾವಿಗೆ ಶರಣಾದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸೀತಾಪುರ್‌ನಲ್ಲಿ ನಡೆದಿದೆ. ತಾನು ಸಾಯುವುದಕ್ಕೂ ಮೊದಲು ಈ ಪಾಪಿ, ತನಗೆ ಜನ್ಮ ನೀಡಿದ ತಾಯಿ, ತನ್ನ ನಂಬಿ ಬಂದ ಹೆಂಡತಿ ಹಾಗೂ ತನ್ನಿಂದಲೇ ಜನಿಸಿದ ಮೂವರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸೀತಾಪುರ ಜಿಲ್ಲೆಯ ಪಲ್ಹಾಪುರದ ರಾಮ್‌ಪುರ ಮಥುರಾದಲ್ಲಿ ಘಟನೆ ನಡೆದಿದೆ. ಈತನ ಕೃತ್ಯ ಈಗ ಇಡೀ ಗ್ರಾಮದ ಸಮುದಾಯವನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. 

ಕೆಲ ಮಾಹಿತಿಯ ಪ್ರಕಾರ, 42 ವರ್ಷದ ಅನುರಾಗ್ ಎಂಬಾತ ಈ ಕೃತ್ಯವೆಸಗಿದ್ದಾನೆ.  ಆತ ಕುಡಿತಕ್ಕೆ ದಾಸನಾಗಿರುವುದರ ಜೊತೆಗೆ  ಮಾದಕ ವ್ಯಸನಗಳ ಚಟವೂ ಆತನಿಗೆ ಇತ್ತು.  ಇದರ ಜೊತೆಗೆ ಮಾನಸಿಕ ಆರೋಗ್ಯ ಸಮಸ್ಯೆಯಿಂದಲೂ ಈತ ಬಳಲುತ್ತಿದ್ದ. ದುಶ್ಚಟಗಳಿಗೆ ದಾಸನಾಗಿದ್ದ ಈತನಿಂದಾಗಿ ಕುಟುಂಬ ತೀವ್ರ ಸಂಕಷ್ಟಕ್ಕೆ ಒಳಗಾಗಿತ್ತು. ಅಲ್ಲದೇ ಪುನರ್ವಸತಿ ಕೇಂದ್ರಕ್ಕೆ ಸೇರಿ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯುವಂತೆ ಆತನ ಮನವೊಲಿಕೆಗೆ ಕುಟುಂಬ ಪ್ರಯತ್ನಿಸಿತ್ತು.  ಕುಟುಂಬದಲ್ಲಿ ಈತನ ವಿಚಾರದಿಂದಲೇ ನಿರಂತರ ಗಲಾಟೆಗಳು ನಡೆಯುತ್ತಿದ್ದವು. ಇಂದು ಈ ಗಲಾಟೆ ವಿಕೋಪಕ್ಕೆ ಹೋಗಿದ್ದು, ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ ಆರೋಪಿ ಬಳಿಕ ತಾನು ಸಾವಿಗೆ ಶರಣಾಗಿದ್ದಾನೆ. 

ಹೂವಿನಹಡಗಲಿ: ಕೊಡಲಿಯಿಂದ ಪತ್ನಿಯ ರುಂಡವನ್ನೇ ಕಡಿದ ಪತಿ

ಮೊದಲಿಗೆ 65 ವರ್ಷ ಪ್ರಾಯದ ತಾಯಿ ಸಾವಿತ್ರಿಗೆ ಗುಂಡಿಕ್ಕಿದ ಆರೋಪಿ ನಂತರ ತನ್ನ 40 ವರ್ಷದ ಪತ್ನಿ ಪ್ರಿಯಾಂಕಾ ಮೇಲೆ ಹ್ಯಾಮರ್‌ನಿಂದ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಇವರಿಬ್ಬರ ಪ್ರಾಣ ತೆಗೆದ ಬಳಿಕ ಈ ಪಾಪಿ ತಂದೆ ತನ್ನ ಕ್ರಮವಾಗಿ ಹನ್ನೆರಡು, ಒಂಭತ್ತು ಹಾಗೂ ಆರು ವರ್ಷದ ಮಕ್ಕಳನ್ನು ಮನೆಯ ಟೆರೇಸ್‌ನಿಂದ ಕೆಳಗೆ ಎಸೆದು ಕೊಲೆ ಮಾಡಿದ್ದಾನೆ. ಬಳಿಕ ತಾನು ಸಾವಿಗೆ ಶರಣಾಗಿದ್ದಾನೆ. 

ಈತನ ಈ ಕೃತ್ಯದ ವಿಚಾರ ಕೆಲಕ್ಷಣದಲ್ಲೇ ಗ್ರಾಮದಲ್ಲೆಡೆ ಹಬ್ಬಿದ್ದು, ಇಡೀ ಕುಟುಂಬವೇ ಹಠಾತ್ ಸಾವಿಗೀಡಾಗಿದ್ದಕ್ಕೆ ಜನ ಮಮ್ಮಲ ಮರುಗಿದ್ದಾರೆ. ಅಲ್ಲದೇ ಘಟನಾ ಸ್ಥಳಕ್ಕೆ ಜನ ಬಂದು ಸೇರಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಚಕ್ರೇಶ್ ಮಿಶ್ರಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಘಟನೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಮಾಹಿತಿ ಪಡೆದು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಬೆಂಗಳೂರು ಒಂಟಿ ಮಹಿಳೆಯರೇ ಎಚ್ಚರ; ಕೊರಳಲ್ಲಿರುವ ಗೋಲ್ಡ್ ಚೈನ್ ಕದಿಯಲು, ಮಹಿಳೆ ಕತ್ತನ್ನೇ ಹಿಸುಕಿ ಕೊಂದರು! 

 

Latest Videos
Follow Us:
Download App:
  • android
  • ios