ಬೆಂಗಳೂರು ಒಂಟಿ ಮಹಿಳೆಯರೇ ಎಚ್ಚರ; ಕೊರಳಲ್ಲಿರುವ ಗೋಲ್ಡ್ ಚೈನ್ ಕದಿಯಲು, ಮಹಿಳೆ ಕತ್ತನ್ನೇ ಹಿಸುಕಿ ಕೊಂದರು!

ಬೆಂಗಳೂರಿನಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿರುವ ಮಹಿಳೆಯರೇ ಎಚ್ಚರ. ಒಂಟಿ ಮಹಿಳೆಯ ಕೊರಳಲ್ಲಿರುವ ಚಿನ್ನದ ಕದಿಯಲು ಬಂದ ದುಷ್ಕರ್ಮಿಯೊಬ್ಬ ವಿರೋಧಿಸಿದ್ದಕ್ಕೆ ಆಕೆಯ ಕತ್ತನ್ನೇ ಹಿಸುಕಿ ಕೊಲೆ ಮಾಡಿದ್ದಾನೆ.

Bengaluru single women beware gold chain snatcher killed woman in Kengeri home sat

ಬೆಂಗಳೂರು (ಮೇ 10): ಒಂಟಿ ಮನೆಯಲ್ಲಿ ವಾಸವಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕದಿಯಲು ದುಷ್ಕರ್ಮಿಗಳು ಆಕೆಯ ಕತ್ತನ್ನು ಹಿಸುಕಿ ಕೊಲೆಗೈದಿರುವ ದುರ್ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ. 

ರಾಜ್ಯ ರಾಜಧಾನಿಯಲ್ಲಿ ಮಹಿಳೆಯರ ಪ್ರಾಣ, ಮಾನಕ್ಕಾಗಿ ಪೊಲೀಸರು ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ದುಷ್ಕರ್ಮಿಗಳು, ಕಳ್ಳ-ಕಾಕರ ಹಾವಳಿ ಮಾತ್ರ ನಿಲ್ಲುತ್ತಿಲ್ಲ. ಒಬ್ಬಂಟಿ ಯುವತಿಯರು, ಮಹಿಳೆಯರಿಗೆ ರಕ್ಷಣೆ ಸಿಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಲೇ ಇದೆ. ಅಂತಹ ಅಪವಾದಕ್ಕೆ ಸಾಕ್ಷಿ ಎಂಬಂತೆ ಕೆಂಗೇರಿಯ ಬಳಿಯಿರುವ ಮನೆಯಲ್ಲಿ ವಾಸವಾಗಿದ್ದ ಒಬ್ಬಂಟಿ ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸವರನ್ನು ಕದಿಯಲು ಆಕೆಯ ಕತ್ತನ್ನು ಹಿಸುಕಿ ಕೊಲೆ ಮಾಡಿದ ದುರ್ಘಟನೆ ನಡೆದಿದೆ.

ಪಾಪ ಪ್ರಜ್ವಲ್, ಎಲ್ರೂ ನೋಡ್ಲಿ ಅಂತ ಅಶ್ಲೀಲ ವಿಡಿಯೋ ಹಂಚಿಕೊಂಡ; ಪೊಲೀಸರು ಬಂದ್ರು, ಎತ್ತಾಕೊಂಡ್ ಹೋದ್ರು!

ಹೌದು, ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಕೊಲೆಯಾಗಿದೆ. ಕೊಲೆಯಾದ ಮಹಿಳೆ ದಿವ್ಯಾ (36) ಆಗಿದ್ದಾಳೆ. ಬೆಂಗಳೂರು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ಘಟನೆ ನಡೆದಿದೆ. ಮಹಿಳೆ ಒಂಟಿಯಾಗಿ ಮನೆಯಲ್ಲಿದ್ದಾಗ ಸರ ಕಿತ್ತುಕೊಳ್ಳಲು ಬಂದ ಆರೋಪಿ ಕೊಲೆ ಮಾಡಿ ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಇನ್ನು ಮಹಿಳೆಯ ಪತಿ ಗುರುಮೂರ್ತಿ ಸಲೂನ್‌ನಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ, ಬೆಳಗ್ಗೆಯೇ ತಿಂಡಿ ತಿಂದು ಸಲೂನ್ ಕೆಲಸಕ್ಕೆ ಹೋಗಿದ್ದಾರೆ. ಆಗ ಮಹಿಳೆ ಮನೆಯಲ್ಲಿ ಒಂಟಿಯಾಗಿ ಇರುವುದನ್ನು ನೋಡಿ ಗಮನಿಸಿದ ಆರೋಪಿ ಮನೆಗೆ ನುಗ್ಗಿ ಮಹಿಳೆ ಕೊಲೆಗೈದು ಸರ ಕಿತ್ತುಕೊಂಡು ಹೋಗಿದ್ದಾನೆ.

ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿದ ಕೆಂಗೇರಿ ಠಾಣೆಯ ಪೊಲೀಸರು ಮೃತದೇಹ ಪರಿಶೀಲನೆ ಮಾಡಿದ್ದಾರೆ. ಆಗ ಕುತ್ತಿಗೆಯ ಮೇಲೆ ಗಾಯದ ಗುರುತುಗಳು ಇರುವುದನ್ನು ಗಮನಿಸಿದ್ದಾರೆ. ಆಗ ಗಂಡನನ್ನು ವಿಚಾರಿಸಿದಾಗ ತಾನು ಸಲೂನ್‌ಗೆ ಹೋಗಿದ್ದಾಗ ಇಂತಹ ದುರ್ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಜೊತೆಗೆ, ಪತ್ನಿಯ ಕೊರಳಲ್ಲಿದ್ದ ಚಿನ್ನದ ಸರವೂ ನಾಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಲ್ಲಿ ಕಳೆದ 20 ವರ್ಷದಿಂದ ಜೊತೆಗಿದ್ದ ತೃತೀಯ ಲಿಂಗಿಯನ್ನು ಕೊಲೆಗೈದ ಮಹಿಳೆ!

ಆಗ ಆರೋಪಿ ಮಹಿಳೆಯ ಮನೆಗೆ ನುಗ್ಗಿ ಸರ ಕಿತ್ತುಕೊಳ್ಳಲು ಮುಂದಾದಾಗ ಮಹಿಳೆ ವಿರೋಧಿಸಿದ್ದಾಳೆ. ಜೊತೆಗೆ, ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡು ಜನರನ್ನು ಸೇರಿಸಬಹುದು ಎಂಬ ಭಯದಿಂದ ಆಕೆಯ ಕುತ್ತಿಗೆಯನ್ನು ಹಿಸುಕಿ ಹಿಡಿದಿದ್ದಾನೆ. ಇದರಿಂದ ಮಹಿಳೆ ಉಸಿರಾಡಲು ಸಾಧ್ಯವಾಗದೇ ಸಾವನ್ನಪ್ಪಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್.ಆರ್. ನಗರ ಆಸ್ಪತ್ರೆಗೆ ರವಾನಿಸಲಾಗಿದೆ..

Latest Videos
Follow Us:
Download App:
  • android
  • ios