ಪತಿಯು ಏಕಾಏಕಿ ಮನೆ ಮುಂದೆಯೇ ಹೆಂಡತಿಯ ರುಂಡವನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆಂದು ಮೃತಳ ತಾಯಿ ಕುರಿ ಹನುಮಕ್ಕ ಪಟ್ಟಣದ ಠಾಣೆಗೆ ದೂರು ನೀಡಿದ್ದಾರೆ. 

ಹೂವಿನಹಡಗಲಿ(ಮೇ.11):  ಕೊಡಲಿಯಿಂದ ಪತ್ನಿಯ ರುಂಡ ಕಡಿದು ಕೊಲೆಗೈದ ಘಟನೆ ತಾಲೂಕಿನ ಕೆ.ಅಯ್ಯನ ಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಗ್ರಾಮದ ಅರುಣಾ ಪ್ರದೀಪ (28) ಕೊಲೆಯಾದವಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರು ಗ್ರಾಮದ ಪ್ರದೀಪ ಅಲಗೂರು ಕೊಲೆ ಆರೋಪಿ ಎಂದು ತಿಳಿದುಬಂದಿದೆ.

ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ಮಹಿಳೆ ಕೊಂದು ಚಿನ್ನದ ಸರ ಕಸಿದು ಪರಾರಿ

ಪ್ರದೀಪ ಹಾಗೂ ಅರುಣಾ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ-ಪತ್ನಿಯ ನಡುವೆ ಆಗಾಗ ಜಗಳವಾಗುತ್ತಿತ್ತು. ಶುಕ್ರವಾರ ಕೂಡ ಬೆಳಿಗ್ಗೆ ಜಗಳ ಆರಂಭವಾಗಿದೆ. ಪತಿಯು ಏಕಾಏಕಿ ಮನೆ ಮುಂದೆಯೇ ಹೆಂಡತಿಯ ರುಂಡವನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆಂದು ಮೃತಳ ತಾಯಿ ಕುರಿ ಹನುಮಕ್ಕ ಪಟ್ಟಣದ ಠಾಣೆಗೆ ದೂರು ನೀಡಿದ್ದಾರೆ. ಈ ಕೊಲೆಗೆ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ಸಿಪಿಐ ದೀಪಕ್ ಬೂಸರೆಡ್ಡಿ, ಎಎಸ್‌ಐ ರಾಜೇಂದ್ರ ನಾಯ್ಕ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಈ ಕುರಿತು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.