ಭಾರತೀಯ ಸೇನೆ ಜನರನ್ನು ಕೊಲ್ಲುತ್ತದೆ ಎಂದ ತಪನ್ ಬೋಸ್| ಪಾಕ್ ಸೇನೆಯಂತೆಯೇ ಭಾರತೀಯ ಸೇನೆಯೂ ಕ್ರೂರಿ ಎಂದ ಸಾಮಾಜಿಕ ಹೋರಾಟಗಾರ| ಸಿಎಎ ವಿರೋಧಿ ಸಮಾವೇಶದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ತಪನ್ ಬೋಸ್| 'ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರತೀಯ ಸೇನೆಯಿಂದ ಬರ್ಬರತೆ'| 'ದೆಹಲಿಯ ಶಾಹೀನ್ ಬಾಗ್ ಹೋರಾಟಗಾರರೆಂದರೆ ಬಿಜೆಪಿ, ಆರ್‌ಎಸ್‌ಎಸ್‌ಗೆ ಭಯ'|

ನವದೆಹಲಿ(ಜ.30): ಭಾರತ ಹಾಗೂ ಪಾಕಿಸ್ತಾನದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಏನೂ ಇಲ್ಲ ಎಂದಿರುವ ಸಾಮಾಜಿಕ ಹೋರಾಟಗಾರ ಹಾಗೂ ಚಲನಚಿತ್ರ ನಿರ್ಮಾಪಕ ತಪನ್ ಬೋಸ್, ಭಾರತೀಯ ಸೇನೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಕಿಸ್ತಾನ ಸೇನೆ ಹೇಗೆ ತನ್ನದೇ ಜನರನ್ನು ಕೊಲ್ಲುತ್ತದೆಯೋ ಹಾಗೆಯೇ ಭಾರತೀಯ ಸೇನೆ ಕೂಡ ತನ್ನದೇ ಜನರನ್ನು ಕೊಲ್ಲುತ್ತದೆ ಎಂದು ಹೇಳುವ ಮೂಲಕ ತಪಸ್ ಬೋಸ್ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಟುಕ್ಡೆ ಗ್ಯಾಂಗ್ ಎಕ್ಸ್‌ಪೋಸ್: ಭಾರತದಿಂದ ಅಸ್ಸಾಂ ಬೇರ್ಪಡಿಸುವಂತೆ ಕರೆ!

ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ತಪನ್ ಬೋಸ್, ಪಾಕಿಸ್ತಾನ ಸೇನೆಯಷ್ಟೇ ಭಾರತೀಯ ಸೇನೆ ಕೂಡ ಕ್ರೂರವಾಗಿದೆ ಎಂದು ಹೇಳಿದ್ದಾರೆ.

Scroll to load tweet…

ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರತೀಯ ಸೇನೆ ನಡೆಸಿದ ಬರ್ಬರತೆ ಎಲ್ಲರ ಕಣ್ಣ ಮುಂದಿದೆ ಎಂದು ತಪನ್ ಬೋಸ್ ಹೇಳಿದರು.

ನಾವು ದೇಶ ಧ್ವಂಸ ಮಾಡಬಲ್ಲ ಸಮುದಾಯದವರು: ಹಸನ್ ವಿವಾದಾತ್ಮಕ ಹೇಳಿಕೆ

ದೆಹಲಿಯ ಶಾಹೀನ್ ಬಾಗ್ ಹೋರಾಟಗಾರರನ್ನು ಕಂಡು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹೆದರಿವೆ. ಇದೇ ಕಾರಣಕ್ಕೆ ಹೋರಾಟಗಾರರನ್ನು ದೇಶದ್ರೋಹಿಗಳೆಂದು ಬಿಂಬಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಪನ್ ಬೋಸ್ ಆರೋಪಿಸಿದರು.