ನವದೆಹಲಿ(ಜ.25): ಸಿಎಎ ವಿರೋಧಿ ಶಹೀನ್ ಬಾಗ್ ಹೋರಾಟದಲ್ಲಿ,  ಭಾರತವನ್ನು ಒಡೆಯುವ ಹುನ್ನಾರದ ಹೇಳಿಕೆಯನ್ನು ಗೊಣಗಿರುವುದು ತೀವ್ರ ವಿವಾದ ಸೃಷ್ಟಿಸಿದೆ.

ಸಿಎಎ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಶ್ರಜಿಲ್ ಇಮಾಮ್, ಅಸ್ಸಾಂ ಸೇರಿದಂತೆ ಸಂಪೂರ್ಣ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುವ ಕುರಿತು ಮಾತನಾಡಿದ್ದಾರೆ.

ತಮ್ಮ ಭಾಷಣದಲ್ಲಿ ಅಸ್ಸಾಂ ಸೇರಿದಂತೆ ಸಂಪೂರ್ಣ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸಿದರೆ ಸಿಎಎ ಕಾನೂನು ಸೋಲುತ್ತದೆ ಎಂದು ಶ್ರಜಿಲ್ ಇಮಾಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತಮ್ಮೊಂದಿಗೆ 5 ಲಕ್ಷ ಜನ ಸೇರಿದರೆ  ಅಸ್ಸಾಂ ಸೇರಿದಂತೆ ಸಂಪೂರ್ಣ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಕೆಲ ತಿಂಗಳುಗಳ ಮಟ್ಟಿಗಾದರೂ ಬೇರ್ಪಡಿಸುವುದಾಗಿ ಶ್ರಜಿಲ್ ಹೇಳಿದ್ದಾರೆ.

ನಾವು ದೇಶ ಧ್ವಂಸ ಮಾಡಬಲ್ಲ ಸಮುದಾಯದವರು: ಹಸನ್ ವಿವಾದಾತ್ಮಕ ಹೇಳಿಕೆ

ಶ್ರಜಿಲ್ ಇಮಾಮ್ ಅವರ ಹೇಳಿಕೆಯ ವಿಡಿಯೋವನ್ನು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಟ್ವಿಟ್ಟರ್’ನಲ್ಲಿ ಹಂಚಿಕೊಂಡಿದ್ದು, ಸಿಎಎ ವಿರೋಧಿ ಹೋರಾಟಗಾರರಿಗೆ ಭಾರತವನ್ನು ಒಡೆಯುವ ಹುನ್ನಾರವಿದೆ ಎಂದು ಆರೋಪಿಸಿದ್ದಾರೆ.

ಸದ್ಯ ಶ್ರಜಿಲ್ ಇಮಾಮ್  ಹೇಳಿಕೆ ವಿರುದ್ಧ ಅಸ್ಸಾಂ ಮತ್ತು ದೆಹಲಿ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.