‘ನಾವು ದೇಶ ಧ್ವಂಸ ಮಾಡಬಲ್ಲ ಸಮುದಾಯದವರು’| ಅಲಿಗಢ ಮುಸ್ಲಿಂ ವಿವಿ ಮಾಜಿ ವಿದ್ಯಾರ್ಥಿ ನಾಯಕ ಹಸನ್‌ ವಿವಾದಿತ ಭಾಷಣ

ಅಲಿಗಢ[ಜ.25]: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಅಲ್ಲಲ್ಲಿ ದೇಶವಿರೋಧಿ ಘೋಷಣೆಗಳು ಮೊಳಗಿ, ಪ್ರಕರಣ ದಾಖಲಾದ ಬೆನ್ನಲ್ಲೇ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಫೈಜುಲ್‌ ಹಸನ್‌ ‘ನಾವು ಯಾವುದೇ ದೇಶವನ್ನು ಧ್ವಂಸಗೊಳಿಸಬಲ್ಲ ಶಕ್ತಿ ಹೊಂದಿರುವ ಸಮುದಾಯಕ್ಕೆ ಸೇರಿದವರು’ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ಪೌರತ್ವ ಕಾಯ್ದೆ ತಂದ ಬಿಜೆಪಿಗೆ ಬಿಗ್ ಶಾಕ್: 90 ನಾಯಕರ ರಾಜೀನಾಮೆ!

ವಿಶ್ವವಿದ್ಯಾಲಯದ ಹೊರಗಡೆ ನಡೆದ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ (ಸಿಎಎ ಹಾಗೂ ಎನ್‌ಆರ್‌ಸಿ) ಜಾರಿಗೊಳಿಸಲು ಹೊರಟಿರುವ ಅಮಿತ್‌ ಶಾ ಅವರೇ ಮೊದಲು ನಿಮ್ಮ ಬಳಿ ಇರುವ ಕಾಗದಪತ್ರಗಳನ್ನು ತೋರಿಸಿ. ಇಲ್ಲಿಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ. ತಾಳ್ಮೆ ನೋಡಬೇಕು ಎಂದರೆ ಮುಸ್ಲಿಮರ ಕಡೆ ದೃಷ್ಟಿಹರಿಸಿ. ಆದರೆ ನಮ್ಮ ಮನಸ್ಸಿಗೆ ಬಂತೆಂದರೆ ನಾವು ಎಲ್ಲವನ್ನೂ ಧ್ವಂಸ ಮಾಡುತ್ತೇವೆ, ನಾವು ಯಾವುದೇ ದೇಶವನ್ನು ಧ್ವಂಸಗೊಳಿಸಬಲ್ಲ ಶಕ್ತಿ ಹೊಂದಿರುವ ಸಮುದಾಯಕ್ಕೆ ಸೇರಿದವರು’ ಎಂದು ಗುಡುಗಿದರು.

Scroll to load tweet…

‘ಸಿಎಎ-ಎನ್‌ಆರ್‌ಸಿ ಎಂಬುದು ನಮಗೆ ಮಾತ್ರವಲ್ಲ. ನಿಮಗೂ (ಶಾ) ಅನ್ವಯವಾಗುತ್ತದೆ. ಇಂದು ನೀವು ಅಧಿಕಾರದಲ್ಲಿದ್ದೀರಿ. ನಾಳೆ ಅಧಿಕಾರ ಕಳೆದುಕೊಳ್ಳಬಹುದು. ಆಗ ನಾವು ನಿಮಗೆ ಮೊದಲು ದಾಖಲೆ ತೋರಿಸಿ ಎಂದು ಕೇಳುತ್ತೇವೆ’ ಎಂದು ಲೇವಡಿ ಮಾಡಿದರು.

ನಿರುದ್ಯೋಗಿಗಳ ಪರ ಕಾಂಗ್ರೆಸ್‌ ಮಿಸ್ಡ್‌ ಕಾಲ್‌ ಅಭಿಯಾನ!