ಮಳೆಯಿಂದ ರಸ್ತೆಲ್ಲಿ ನೀರು ಕೆಸರು, ಹಾಕಿದ್ದ ಡಾಂಬರು ಕಿತ್ತು ಬಂದಿದೆ. ಇದೇ ರಸ್ತೆಯಲ್ಲಿ ಶಾಲಾ ಮಕ್ಕಳನ್ನು ಹೊತ್ತು ಸಾಗುತ್ತಿದ್ದ ಬಸ್ ಪಲ್ಟಿಯಾಗಿದೆ. ಈ ಘಟನೆಯಲ್ಲಿ 15 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 

ಆಂಧ್ರ ಪ್ರದೇಶ(ಜು.05) ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕೆಲೆವೆಡೆ ಭೂಕುಸಿತ, ಪ್ರವಾಹ ಸೃಷ್ಟಿಯಾಗಿದೆ. ಇದರ ಪರಿಣಾಮ ರಸ್ತೆ ಸಂಪರ್ಕ ಕಡಿತ, ರಸ್ತೆಗಳ ಡಾಂಬರ್ ಕಿತ್ತು ಹೋಗಿರುವ ಘಟನೆಗಳು ನಡೆದಿದೆ. ಹೀಗೆ ಕಿತ್ತು ಹೋದ ರಸ್ತೆಯಲ್ಲಿ ಶಾಲೆಯಿಂದ ಮರಳುತ್ತಿದ್ದ ವಿದ್ಯಾರ್ಥಿಗಳ ಬಸ್ ಪಲ್ಟಿಯಾಗಿದೆ. ಆಂಧ್ರ ಪ್ರದೇಶದ ಪಾಲಂಡು ಜಿಲ್ಲೆಯ ಪಮಿದಿಮಾರು ಗ್ರಾಮದಲ್ಲಿ ನಡೆದ ಈ ಅವಘಡದಲ್ಲಿ 15 ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ.

ಶಾಲೆ ಮುಗಿಸಿ ಸಂಜೆ ಮಕ್ಕಳನ್ನು ಹೊತ್ತುಕೊಂಡು ಶಾಲಾ ಮನೆಯತ್ತ ಸಾಗಿದೆ. ಮಕ್ಕಳನ್ನು ತಮ್ಮ ತಮ್ಮ ಮನೆಗೆ ಬಿಡಲು ಸಾಗುತ್ತಿದ್ದ ಬಸ್ ವಿಪರೀತ ಮಳೆಯಿದಂ ಹಾಳಾದ ರಸ್ತೆ ಮೂಲಕ ಸಾಗಿದೆ. ಈ ವೇಳೆ ಏಕಾಏಕಿ ಬಸ್ ನಿಯಂತ್ರಣ ಕಳೆದುಕೊಂಡಿದೆ. ಇದರ ಪರಿಣಾಮ ಬಸ್ ಪಕ್ಕದ ಹೊಲಕ್ಕೆ ಪಲ್ಟಿಯಾಗಿದೆ. ಬಸ್ ಪಲ್ಟಿಯಾದ ರಭಸಕ್ಕೆ ಹಲವು ವಿದ್ಯಾರ್ಥಿಗಳಿಗೆ ಗಾಯವಾಗಿದೆ.

ಸಿರುಗುಪ್ಪ: ಶಾಲಾ ಬಸ್‌ಗೆ ಬೆಂಕಿ: 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರು!

ತಕ್ಷಣವೇ ಸ್ಥಳೀಯರು ಧಾವಿಸಿ ಪಲ್ಟಿಯಾದ ಬಸ್‌ನಿಂದ ಮಕ್ಕಳನ್ನು ರಕ್ಷಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಇತ್ತ ಪೊಲೀಸರು ಮಾಹಿತಿ ತಿಳಿದಿ ಸ್ಥಳಕ್ಕೆ ಧಾವಿಸಿದ್ದಾರೆ. ಜಂಟಿ ಕಾರ್ಯಾಚರಣೆ ಮೂಲಕ ಎಲ್ಲಾ ಮಕ್ಕಳನ್ನು ಪಲ್ಟಿಯಾದ ಬಸ್‌ನಿಂದ ರಕ್ಷಿಸಿದ್ದಾರೆ. ಇತ್ತ ಗಾಯಗೊಂಡ 15 ಮಕ್ಕಳನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಬಸ್ ನಿಯಂತ್ರಣ ಕಳೆದುಕೊಳ್ಳಲು ರಸ್ತೆ ಅಥವಾ ಇನ್ಯಾವುದೇ ಕಾರಣವಿತ್ತೇ ಅನ್ನೋದು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Scroll to load tweet…

ಶಾಲಾ ಬಸ್‌ಗೆ ಬೆಂಕಿ: 40 ಮಕ್ಕಳು ಪಾರು
ಖಾಸಗಿ ಶಾಲೆಗೆ ವಿದ್ಯಾರ್ಥಿಗಳನ್ನು ಕರೆತರುತ್ತಿದ್ದ ಬಸ್‌ನಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡು ವಾಹನದಲ್ಲಿದ್ದ 40 ವಿದ್ಯಾರ್ಥಿಗಳು ಮತ್ತು ಮೂವರು ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇತ್ತೀಚೆಗೆ ಕರ್ನಾಟದ ಕೊಟ್ಟೂರು ತಾಲೂಕಿನ ಕೆ ಅಯ್ಯನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿತ್ತು. 

ಅಯ್ಯೋ ಹಾವು ಹಾವು... ಸ್ಕೂಲ್ ಬಸ್ ಕೆಳಗಿತ್ತು ಭಯಾನಕ ದೈತ್ಯ ಹೆಬ್ಬಾವು

ಕೊಟ್ಟೂರು ಪಟ್ಟಣದ ತರಳಬಾಳು ಶಾಲೆಗೆ ಬಸ್‌ನಲ್ಲಿ ಎಂದಿನಂತೆ ಮಕ್ಕಳನ್ನು ತಾಲೂಕಿನ ವಿವಿಧ ಹಳ್ಳಿಗಳಿಂದ ಕರೆದುಕೊಂಡು ಬರುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ಬಸ್‌ನ ಎಂಜಿನ್‌ನಲ್ಲಿ ಸುಟ್ಟವಾಸನೆ ಬರುತ್ತಿರುವುದನ್ನು ಅರಿತ ಚಾಲಕ ವಾಹನವನ್ನು ಕೂಡಲೇ ರಸ್ತೆಯ ಬದಿ ನಿಲ್ಲಿಸಿ ಮಕ್ಕಳು, ಶಿಕ್ಷಕರನ್ನು ವಾಹನದಿಂದ ಇಳಿಸಿದ್ದಾರೆ. ಇದಾದ ಕೆಲಹೊತ್ತಿನಲ್ಲಿ ಇಡೀ ಬಸ್‌ಗೆ ಬೆಂಕಿ ಆವರಿಸಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬಸ್‌ನ ಎಂಜಿನ್‌ನಲ್ಲಿ ಶಾರ್ಚ್‌ ಸಕ್ರ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಟ್ಟೂರು ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವೆಂಕಟಸ್ವಾಮಿ, ಶಿಕ್ಷಣ ಇಲಾಖೆಯ ಪ್ರಭಾರ ಶಿಕ್ಷಣಾಧಿಕಾರಿ ಸಿ. ಬಸವರಾಜ್‌ ಭೇಟಿ ನೀಡಿ ಪರಿಶೀಲಿಸಿದರು.