Asianet Suvarna News Asianet Suvarna News

ಸಿರುಗುಪ್ಪ: ಶಾಲಾ ಬಸ್‌ಗೆ ಬೆಂಕಿ: 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರು!

ವಿದ್ಯಾರ್ಥಿಗಳನ್ನು ಶಾಲೆಯಿಂದ ಮನೆಗೆ ಬಿಡಲು ತೆರಳುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದಿದ್ದು, ವಾಹನದಲ್ಲಿದ್ದ ವಿದ್ಯಾರ್ಥಿಗಳೆಲ್ಲ ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಹೊರವಲಯದಲ್ಲಿ ಸೋಮವಾರ ನಡೆದಿದೆ.

School bus caught fire: more than 40 students sefe rav
Author
First Published Mar 27, 2023, 11:59 PM IST

ಸಿರುಗುಪ್ಪ (ಮಾ.27) : ವಿದ್ಯಾರ್ಥಿಗಳನ್ನು ಶಾಲೆಯಿಂದ ಮನೆಗೆ ಬಿಡಲು ತೆರಳುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದಿದ್ದು, ವಾಹನದಲ್ಲಿದ್ದ ವಿದ್ಯಾರ್ಥಿಗಳೆಲ್ಲ ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಹೊರವಲಯದಲ್ಲಿ ಸೋಮವಾರ ನಡೆದಿದೆ.

ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ವಿಶ್ವಜ್ಯೋತಿ ಇಂಟರ್‌ನ್ಯಾಷನಲ್‌ ಶಾಲೆ(Vishwajyoti International School siruguppa)ಯ ಚಲಿಸುತ್ತಿರುವ ಬಸ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಚಾಲಕ ಮತ್ತು ಸಾರ್ವಜನಿಕರು ಸೇರಿ ಮಕ್ಕಳನ್ನು ವಾಹನದಿಂದ ಕೆಳಗಿಳಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಚಾಲಕ ಮತ್ತು ಸಾರ್ವಜನಿಕರ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 40ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Ramanagara: ಶಾಲಾ ಬಸ್‌ನಿಂದ ಕೆಳಗೆ ಬಿದ್ದು ವಿದ್ಯಾರ್ಥಿನಿ ಸಾವು: ಪೋಷಕರ ಆಕ್ರಂದನ

ಪ್ರತಿದಿನದಂತೆ ಶಾಲೆಯಿಂದ ಹಳೆಕೋಟೆ, ತೆಕ್ಕಲಕೋಟೆ, ದೇವಿನಗರಕ್ಕೆ ಬಸ್‌ನಲ್ಲಿ ವಿದ್ಯಾರ್ಥಿಗಳನ್ನು ಬಿಡಲು ತೆರಳುತ್ತಿದ್ದಾಗ ಆಕಸ್ಮಾತಾಗಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ (Firefighters )ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರಾದರೂ ಬಸ್ಸಿನ ಒಳಭಾಗದಲ್ಲಿನ ಆಸನಗಳೆಲ್ಲಾ ಸಂಪೂರ್ಣ ಸುಟ್ಟು ಕರಕಲಾಗಿದೆ.

ಮಕ್ಕಳ ಶಾಲಾ ಬ್ಯಾಗ್‌ ಮತ್ತು ಪುಸ್ತಕಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿಸಿದ ಶಾಲಾ ಬಸ್‌ ಚಾಲಕ ನಾಸೀರ್‌ ಅವರು, ಘಟನೆಗೆ ಶಾರ್ಚ್‌ ಸಕ್ರ್ಯೂಟ್‌ ಕಾರಣವಿರಬಹುದೆಂಬ ಶಂಕೆ ವ್ಯಕ್ತಪಡಿದರು. ಘಟನೆ ಕುರಿತು ತನಿಖೆ ನಡೆಸಿದ ನಂತರವೇ ಸತ್ಯಾಂಶ ಹೊರಬರಲಿದೆ. ಘಟನೆ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಅಯ್ಯೋ ಹಾವು ಹಾವು... ಸ್ಕೂಲ್ ಬಸ್ ಕೆಳಗಿತ್ತು ಭಯಾನಕ ದೈತ್ಯ ಹೆಬ್ಬಾವು

ಘಟನೆಯಿಂದ ಹಾಗೂ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವುಂಟಾಯಿತು. ಸ್ಥಳಕ್ಕೆ ನಗರ ಠಾಣಾ ಪಿಎಸ್‌ಐ ಕೆ. ರಂಗಯ್ಯ,ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ತಿಮ್ಮಾರಡ್ಡಿ ಆಗಮಿಸಿ ಘಟನೆಯ ಬಗ್ಗೆ ವಿವರ ಪಡೆದರು. ನಗರ ಅಗ್ನಿಶಾಮಕ ಠಾಣಾಧಿಕಾರಿ ಆರ್‌.ಎಲ್‌. ಪೂಜಾರಿ, ಸಿಬ್ಬಂದಿಗಳಾದ ಸುಧೀರ್‌ಕುಮಾರ್‌, ಮಂಜುನಾಥ ಕುರಿ, ಅಮರಯ್ಯ, ಮಂಜುನಾಥ ಇತರರು ಇದ್ದರು.

ಕಿಡ್ನಾಪ್‌ ಯತ್ನ: ಯುಕೆಜಿ ಚಾಣಾಕ್ಷ ಬಾಲಕ ಎಸ್ಕೇಪ್‌

ಚಿಕ್ಕಮಗಳೂರು: ರಸ್ತೆಬದಿಯ ಫುಟ್‌ಪಾತ್‌ನಲ್ಲಿ ಆಟವಾಡುತ್ತಿದ್ದ ಬಾಲಕನನ್ನು ಇದ್ದಕ್ಕಿದ್ದಂತೆ ಎತ್ತಿಕೊಂಡು ಓಡಿದ ಕಿಡ್ನಾಪರ್‌ಗೆ ಅಷ್ಟೇ ಚಾಣಾಕ್ಷತನದಿಂದ ಬಾಲಕನೋರ್ವ ಚಳ್ಳೆಹಣ್ಣು ತಿನ್ನಿಸಿ ಅಪಹರಣಕಾರನಿಂದ ಪಾರಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿ ಭಾನುವಾರ ಸಂಜೆ 6.38ರ ವೇಳೆಯಲ್ಲಿ ಬಾಲಕನ ಅಪಹರಣಕ್ಕೆ ಈ ಯತ್ನ ನಡೆದಿದೆ. ಫುಟ್‌ಪಾತ್‌ನಲ್ಲಿ ಗೆಳೆಯರ ಜತೆಗೆ ಆಟವಾಡುತ್ತಿದ್ದ ಬಾಲಕನನ್ನು ಅಪಹರಿಸಲು ವ್ಯಕ್ತಿಯೋರ್ವ ಪ್ರಯತ್ನಿಸಿದ್ದಾನೆ. ಬಾಲಕನ್ನು ಅಪಹರಿಸಿ ಹೆಗಲ ಮೇಲೆ ಎತ್ತಿಕೊಂಡು ಸಾಗುತ್ತಿದ್ದ ವೇಳೆ, ಬಾಲಕ ಅವನ ಹಿಡಿತದಿಂದ ನುಸುಳಿ ಕೊಂಡವನೇ ಹೆಗಲಿನಿಂದ ಕೆಳಗೆ ಚಂಗನೆ ಹಾರಿ ಅಲ್ಲಿಂದ ಪರಾರಿ ಆಗಿದ್ದಾನೆ. ಸಾಹಸ ಮೆರೆದು ಧೈರ್ಯ ಪ್ರದರ್ಶಿಸಿದ ಬಾಲಕ ಯುಕೆಜಿ ವಿದ್ಯಾರ್ಥಿಯಾಗಿದ್ದು, ಬಾಲಕನ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Follow Us:
Download App:
  • android
  • ios