ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ , ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಿಒಕೆಯಲ್ಲಿರುವ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗಳ ನೆಲೆಗಳನ್ನು ಕ್ಷಿಪಣಿ ದಾಳಿಯ ಮೂಲಕ ನಾಶಪಡಿಸಿತು. ಈ ವಿಷಯದ ಬಗ್ಗೆ ಮಾಜಿ ಸೇನಾ ಮುಖ್ಯಸ್ಥ ಮನೋಜ್ ನರವಾಣೆ, 'Abhi picture baki hai…' ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ಪಾಕಿಸ್ತಾನಕ್ಕೆ ಇನ್ನಷ್ಟು ನಡುಕ ಉಂಟುಮಾಡಲಿದೆ.

Operation Sindoor: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ , ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಿಒಕೆಯಲ್ಲಿರುವ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗಳ ನೆಲೆಗಳನ್ನು ಕ್ಷಿಪಣಿ ದಾಳಿಯ ಮೂಲಕ ನಾಶಪಡಿಸಿತು. ಈ ವಿಷಯದ ಬಗ್ಗೆ ಮಾಜಿ ಸೇನಾ ಮುಖ್ಯಸ್ಥ ಮನೋಜ್ ನರವಾಣೆ, 'Abhi picture baki hai…' ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ಪಾಕಿಸ್ತಾನಕ್ಕೆ ಇನ್ನಷ್ಟು ನಡುಕ ಉಂಟುಮಾಡಲಿದೆ.

ಪಾಕಿಸ್ತಾನವು ಭಾರತದಲ್ಲಿರುವ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಸಂಘರ್ಷವನ್ನು ಹೆಚ್ಚಿಸಲು ನಿರ್ಧರಿಸಿದರೆ ಭಾರತದ ಪ್ರತಿದಾಳಿ ಇನ್ನಷ್ಟು ತೀವ್ರವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರ ಕ್ರೂರ ಹತ್ಯಾಕಾಂಡದ ನಂತರ, ದಿಟ್ಟ ಮತ್ತು ಯೋಜಿತ ಪ್ರತೀಕಾರವಾಗಿ, ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ ಪ್ರದೇಶದೊಳಗೆ ನುಗ್ಗಿ ಒಂಭತ್ತು ಉಗ್ರರ ನೆಲೆಗಳನ್ನು ಉಡಾಯಿಸಿದೆ. ಈ ದಾಳಿಯಲ್ಲಿ ಹೈವ್ಯಾಲ್ಯು ಟೆರರಿಸ್ಟ್‌ಗಳ ಹತ್ಯೆಯಾಗಿದೆ.

ಇದನ್ನೂ ಓದಿ: ಭಾರತದ ದಿಟ್ಟ ದಾಳಿಗೆ ಉಗ್ರರ ನವರಂಧ್ರಗಳು ಉಡೀಸ್; ಇಬ್ಬರು ಹೈ ವ್ಯಾಲ್ಯೂ ಟೆರರಿಸ್ಟ್ ಹ ತ್ಯೆ

ರಾತ್ರಿಯ ಕಗ್ಗತ್ತಲಲ್ಲಿ ನಡೆಸಲಾದ ಈ ಕಾರ್ಯಾಚರಣೆಯಲ್ಲಿ, ಭಾರತೀಯ ವಾಯುಪಡೆಯು ಒಂಬತ್ತು ಪ್ರಮುಖ ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿಗಳ ಮೂಲಕ ದಾಳಿ ಮಾಡಿತು. ಈ ಸ್ಥಳಗಳನ್ನು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಗಳೆಂದು ಪರಿಗಣಿಸಲಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನಿಖರ ಮತ್ತು ಸಂಯಮದ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂಧೂರ್ ಅನ್ನು ರಕ್ಷಣಾ ಸಚಿವಾಲಯ ಬಣ್ಣಿಸಿದೆ. ಈ ದಾಳಿಯಲ್ಲಿ ಲಷ್ಕರ್-ಎ-ತೊಯ್ಬಾದ ಇಬ್ಬರು ಪ್ರಮುಖ ಭಯೋತ್ಪಾದಕರು ಸಹ ಸಾವನ್ನಪ್ಪಿದ್ದಾರೆ.ವ