ನವದೆಹಲಿ(ಫೆ.13): ಅಭೂತಪೂರ್ವ ಜಯದೊಂದಿಗೆ ಮೂರನೇ ಬಾರಿ ದೆಹಲಿ ಗದ್ದುಗೆ ಏರಿರುವ ಅರವಿಂದ್ ಕೇಜ್ರಿವಾಲ್, ಇದೇ ಫೆ.16(ಭಾನುವಾರ) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅರವಿಂದ್ ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ಗಣ್ಯಾತೀ ಗಣ್ಯರ ದಂಡೇ ಬರಲಿದ್ದು, ಪ್ರಧಾನಿ ಮೋದಿ ಅವರಿಗೂ ಆಪ್ ಆಹ್ವಾನ ನೀಡಿರುವುದು ವಿಶೇಷ.

ನಿಂಗ್ಯಾಕೋ ಪಾಲಿಟಿಕ್ಸು?: ಹವಾ ಸೃಷ್ಟಿಸಿದ ಪುಟ್ಟ ಪೋರನ ಕೇಜ್ರಿ ಪೋಸು!

ಆದರೆ ಅರವಿಂದ್ ಕೇಜ್ರಿವಾಲ್ ಪದಗ್ರಹಣ ಸಮರಂಭಕ್ಕೆ ಮತ್ತೋರ್ವ ವಿಶೇಷ ಅತಿಥಿ ಆಗಮಿಸಲಿದ್ದು, ಈ ವಿಶೇಷ ಅತಿಥಿಯನ್ನು ಖುದ್ದು ಆಪ್ ವಿಶೇಷ ಆಹ್ವಾನ ನೀಡಿದೆ.

ಹೌದು, ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶದ ದಿನ ಕೇಜ್ರಿವಾಲ್ ವೇಷದಲ್ಲಿ ಮಿಂಚಿದ್ದ ಒಂದು ವರ್ಷದ ಪುಟ್ಟ ಕಂದ,  ಇದೀಗ ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಭಾಗಿಯಾಗಲಿದ್ದಾನೆ.

ಈ ಕುರಿತು ಟ್ವೀಟ್ ಮಾಡಿರುವ ಆಪ್, ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ಈ ಪುಟ್ಟ ಕಂದ ವಿಶೇಷ ಅತಿಥಿಯಾಗಿ ಬರಲಿದೆ ಎಂದು ತಿಳಿಸಿದೆ.

ಮನೆಗೆ ಬಂದ ಜ್ಯೂನಿಯರ್ ಕೇಜ್ರಿ: ಕಂದನ ನೋಡಿ ಅರವಿಂದ್ ಗಾನ್ ಕ್ರೇಜಿ!

ಅರವಿಂದ್ ಕೇಜ್ರಿವಾಲ್ ಅವರ ಸಿಗ್ನೇಚರ್ ಮಫ್ಲರ್ ಹಾಗೂ ಕನ್ನಡಕ ಹಾಗೂ ಆಪ್ ಟೋಪಿ ಧರಿಸಿ ಮಿಂಚಿದ್ದ ಈ ಪುಟ್ಟ ಪೋರನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.