ನವದೆಹಲಿ(ಫೆ.11): ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕ್ರಿಯೆ ಆರಂಭಗೊಂಡಿದ್ದು, ಮತದಾನ ಎಣಿಕೆ ಕಾರ್ಯ ಆರಂಭವಾಗಿದೆ.

ಈಗಾಗಲೇ ಆಡಳಿತಾರೂಢ ಆಪ್ 57 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 13 ಹಾಗೂ ಕಾಂಗ್ರೆಸ್ ಶೂನ್ಯ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಇನ್ನು ಮತ ಎಣಿಕೆ ಕಾರ್ಯ ಆರಂಭಕ್ಕೂ ಮೊದಲು ಸಿಎಂ ಅರವಿಂದ್ ಕೇಜ್ರಿವಾಲ್ ಮನೆಗೆ ಪುಟ್ಟ ಮಕ್ಕಳ ಗುಂಪೊಂದು ಭೇಟಿ ನೀಡಿದ್ದು, ಪುಟ್ಟ ಕಂದನೋರ್ವ ಅರವಿಂದ್ ಕೇಜ್ರಿವಾಲ್ ವೇಷ ತೊಟ್ಟು ಗಮನ ಸೆಳೆದಿದ್ದಾನೆ.

ಬಿಜೆಪಿ 55 ಸೀಟು ಗೆದ್ರೆ ಅಚ್ಚರಿಪಡಬೇಡಿ: ಮನೋಜ್ ತಿವಾರಿ!

ಕೇಜ್ರಿವಾಲ್ ಮನೆಗೆ ಬಂದ ಮಕ್ಕಳಲ್ಲಿ ತಮ್ಮಂತೆ ವೇಷ ತೊಟ್ಟ ಮಗುವನ್ನು ಕಂಡು ಹರ್ಷಗೊಂಡ ಅರವಿಂದ್ ಕೇಜ್ರವಾಲ್, ಮಗುವನ್ನು ಎತ್ತಿ ಮುದ್ದಾಡಿದರು.

ವಿಧಾನಸಭೆ ಚುನಾವಣೆಯಲ್ಲಿ ಆಪ್ ಮುನ್ನಡೆ ಸಾಧಿಸುತ್ತಿರುವುದನ್ನು ಸಂಭ್ರಮಿಸಿದ ಈ ಮಕ್ಕಳು, ಅರವಿಂದ್ ಕೇಜ್ರಿವಾಲ್ ಅವರಿಗೆ ಧನ್ಯವಾದ ಹೇಳಿ ಮನೆಯತ್ತ ಹೆಜ್ಜೆ ಹಾಕಿದರು.