ಖಾಸಗಿ ಬಸ್ಸೊಂದಕ್ಕೆ ಟ್ರಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ದಾರುಣವಾಗಿ ಸಾವನ್ನಪ್ಪಿ 22ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಮಹಾರಾಷ್ಟ್ರದ ಪುಣೆ ಸಮೀಪ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Pune-Bangalore highway) ನಡೆದಿದೆ.

ಪುಣೆ: ಖಾಸಗಿ ಬಸ್ಸೊಂದಕ್ಕೆ ಟ್ರಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ದಾರುಣವಾಗಿ ಸಾವನ್ನಪ್ಪಿ 22ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಮಹಾರಾಷ್ಟ್ರದ ಪುಣೆ ಸಮೀಪ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Pune-Bangalore highway) ನಡೆದಿದೆ. ಸರಕುಗಳನ್ನು ಸಾಗಿಸುತ್ತಿದ್ದ ಕಾರ್ಗೋ ಟ್ರಕ್‌ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ದುರಂತದಲ್ಲಿ ಬಸ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ಬರುವ ನವಲೆ ಬ್ರಿಡ್ಜ್‌ ಪ್ರದೇಶದ ( Navale Bridge area) ಸ್ವಾಮಿ ನಾರಾಯಣ ದೇಗುಲ (Swami Narayan temple) ಸಮೀಪ ಈ ಅನಾಹುತ ನಡೆದಿದೆ. ಖಾಸಗಿ ಐಷಾರಾಮಿ ಬಸ್‌ಗೆ ಡಿಕ್ಕಿ ಹೊಡೆದ ಖಾರ್ಗೋ ಟ್ರಕ್‌ನಲ್ಲಿ 31 ಚೀಲ ಸಕ್ಕರೆ ಚೀಲಗಳಿದ್ದವು. ಬಸ್‌ಗೆ ಡಿಕ್ಕಿ ಹೊಡೆದು ಟ್ರಕ್ ಮಗುಚಿ ಬಿದ್ದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಸಮೀಪದ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. 

ಬೃಹತ್‌ ಟ್ರಕ್‌ಗಳ ಮುಖಾಮುಖಿ ಡಿಕ್ಕಿ: ಲಾರಿಗಳ ಮುಂಭಾಗ ಛಿದ್ರ ಛಿದ್ರ

ಎರಡು ಬೃಹತ್‌ ಲಾರಿಗಳು ಇಂದು ಬೆಳ್ಳಂಬೆಳಗ್ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಲಾರಿ ಚಾಲಕ ಸಾವನ್ನಪ್ಪಿದ ದುರ್ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ಪಟ್ಟಣ ಹೊರವಲಯದಲ್ಲಿ ನಡೆದಿದೆ.

ರಾಜಸ್ಥಾನ ಮೂಲದ ಚಾಲಕ ಅಬ್ಬಾಸ್ (39) ಮೃತ ದುರ್ದೈವಿ ಆಗಿದ್ದಾನೆ. ಹುಮನಾಬಾದ್ ಕಡೆಯಿಂದ ಕಲಬುರಗಿಗೆ ಬರುತ್ತಿದ್ದ ಲಾರಿ ಹಾಗೂ ಜೇವರ್ಗಿಯಿಂದ ಹುಮನಾಬಾದ್ ಕಡೆ ತೆರಳುತ್ತಿದ್ದ ಮತ್ತೊಂದು ಲಾರಿ ಮುಖಾಮುಖಿಯಾಗಿ ಡಿಕ್ಕಿಯಾಗಿವೆ. ಹೀಗೆ ಡಿಕ್ಕಿಯಾದ ರಭಸಕ್ಕೆ ಎರಡೂ ಲಾರಿಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಬ್ಬ ಲಾರಿ ಚಾಲಕ ಸಾವನ್ನಪ್ಪಿದರೆ ಮತ್ತೊಂದು ಲಾರಿಯ ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಒಟ್ಟಾರೆ, ಈ ಭೀಕರ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ ಎಂದು ತಿಳಿದುಬಂದಿದೆ.

ಮದ್ವೆ ಫಿಕ್ಸ್‌ ಆದ್ಮೇಲೆ ಅಪಘಾತ: ವಧುನ ಎತ್ತಿಕೊಂಡೆ ಸಪ್ತಪದಿ ತುಳಿದ ವರ

ಎರಡೂ ಲಾರಿಗಳು ಮರಕ್ಕೆ ಡಿಕ್ಕಿ: ಇನ್ನು ಎರಡೂ ಲಾರಿಗಳು ಮುಖಾಮುಖಿ ಡಿಕ್ಕಿಯಾದ ನಂತರ, ರಸ್ತೆಯ ಬಳಿ ಇರುವ ಇಳಿಜಾರಿನಲ್ಲಿದ್ದ ಹುಣಸೆ ಮರಕ್ಕೆ ಹೋಗಿ ಡಿಕ್ಕಿಯಾಗಿ ನಿಂತಿವೆ. ರಸ್ತೆಯಲ್ಲಿ ಯಾವುದೇ ತಿರುವುಗಳು ಇಲ್ಲದಿದ್ದರೂ ನಿದ್ರೆಯ ಮಂಪರಿನಲ್ಲಿ ಬಲಭಾಗದಲ್ಲಿ ಬಂದ ವ್ಯಕ್ತಿ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.ಇನ್ನು ಈ ವಾಹನಗಳು ಬೃಹತ್‌ ಗಾತ್ರದಾಗಿದ್ದು ಟ್ರ್ಯಾಕ್ಟರ್‌ಗಳಿಂದ ವಾಹನ ತೆರವು ಮಾಡಲು ಸಾಧ್ಯವಾಗದೇ ಸ್ಥಳೀಯರು ಸುಮ್ಮನಾಗಿದ್ದಾರೆ. ಇದರಿಂದ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿ, ಕ್ರೇನ್‌ಗಳ ಮೂಲಕ ತೆರವುಗೊಳಿಸಿದ್ದಾರೆ. 

ಶಿವಮೊಗ್ಗದಲ್ಲಿ ಟ್ರ್ಯಾಕ್ಟರ್‌ ಪಲ್ಟಿ- ಓರ್ವ ಸಾವು: ಮತ್ತೊಂದೆಡೆ ಶಿವಮೊಗ್ಗ ಜಿಲ್ಲೆಯ ಆಯನೂರು ಗ್ರಾಮದಲ್ಲಿ ಕೆರೆ ದಂಡೆ ಮೇಲೆ ಚಲಿಸುತ್ತಿದ್ದ ಟ್ಯಾಕ್ಟರ್ ಪಲ್ಟಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊರ್ವನ ಸ್ಥಿತಿ ಗಂಭೀರವಾಗಿದೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದಲ್ಲಿ ನಡೆದ ಘಟನೆ ನಡೆದಿದ್ದು, ಸಾವನ್ನಪ್ಪಿದ ವ್ಯಕ್ತಿಯನ್ನು ತಮಡಿಹಳ್ಳಿ ಗ್ರಾಮದ ಬೀರೇಶ (40 ) ಎಂದು ಗುರುತಿಸಲಾಗುದೆ. ಇನ್ನು ಮಧು ಎಂಬ ಯುವಕಜರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆಯು ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮೊಗ್ಗದಲ್ಲಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ: ಟ್ರ್ಯಾಕ್ಟರ್‌ ಉರುಳಿ ಒಬ್ಬ ಸಾವು