ಶಿವಮೊಗ್ಗದಲ್ಲಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ: ಟ್ರ್ಯಾಕ್ಟರ್‌ ಉರುಳಿ ಒಬ್ಬ ಸಾವು

ಮಂಗಳೂರಿನಿಂದ ಹಾವೇರಿಗೆ ಹೋಗುತ್ತಿದ್ದ 370ಕ್ಕೂ ಅಧಿಕ ಗ್ಯಾಸ್‌ ಸಿಲಿಂಡರ್‌ ಸಾಗಣೆ ಮಾಡುತ್ತಿದ್ದ ಲಾರಿ, ಶಿವಮೊಗ್ಗದ ಆನಂದಪುರ ಪಟ್ಟಣದ ಬಳಿ ಪಲ್ಟಿಯಾಗಿದೆ.

Gas cylinder lorry overturned in Shimoga and Ayanuru near tractor overturned one death sat

ಶಿವಮೊಗ್ಗ (ಏ.23):  ಮಂಗಳೂರಿನಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಗೆ ಹೋಗುತ್ತಿದ್ದ 370ಕ್ಕೂ ಅಧಿಕ ಗ್ಯಾಸ್‌ ಸಿಲಿಂಡರ್‌ ಸಾಗಣೆ ಮಾಡುತ್ತಿದ್ದ ಲಾರಿ ಶಿವಮೊಗ್ಗದ ಆನಂದಪುರ ಪಟ್ಟಣದ ಬಳಿ ಪಲ್ಟಿಯಾಗಿದೆ.

ಪ್ರತಿನಿತ್ಯ ಗ್ಯಾಸ್‌ ಸಿಲಿಂಡರ್‌ಗಳನ್ನು ಸಾಗಣೆ ಮಾಡುತ್ತಿದ್ದ ಲಾರಿಯ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಮಂಗಳೂರಿನಿಂದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ಹೋಗುತ್ತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ  ಲಾರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಪಟ್ಟಣದ ಬಳಿ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜೊತೆಗೆ, ಯಾವುದೇ ಸಿಲಿಂಡರ್‌ಗಳು ಸ್ಪೋಟಗೊಳ್ಳದ ಕಾರಣ ಸ್ಥಳದಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿದುಬಂದಿದೆ. 

ಶಿವಮೊಗ್ಗ: ಬ್ಯಾಂಕ್ ಮ್ಯಾನೇಜರ್ ಸೋಗಲ್ಲಿ ಕರೆ; ₹1.81 ಲಕ್ಷ ಎಗರಿಸಿದ ಖದೀಮರು!

ಶಿಗ್ಗಾವಿ ಮೂಲಕ ಶಿವಲಿಂಗಯ್ಯ ಹಿರೇಮಠ್‌ಗೆ ಗಾಯ: ಒಂದು ಲಾರಿಯಲ್ಲಿ ಬರೋಬ್ಬರಿ 372 ಗ್ಯಾಸ್ ಸಿಲಿಂಡರ್‌ಗಳನ್ನು ತುಂಬಿದ್ದ ಲಾರಿ ಆನಂದಪುರ ಪಟ್ಟಣದ ಬಳಿಯ ಬೀರನ ಕಣವಿಯ ತಿರುವಿನಲ್ಲಿ ಪಲ್ಟಿಯಾಗಿದೆ. ಚಾಲಕ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರವಾದ ಹಾವೇರಿ ಜಿಲ್ಲೆಯ ಶಿಗ್ಗಾವಿಯ ಶಿವಲಿಂಗಯ್ಯ ಹಿರೇಮಠ್ ಎಂದು ಗುರುತಿಸಲಾಗಿದೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿದ್ದು, ರಸ್ತೆಯಲ್ಲಿ ಬಿದ್ದಿದ್ದ ಗ್ಯಾಸ್‌ ಸಿಲಿಂಡರ್‌ಗಳನ್ನು ರಸ್ತೆಯ ಬದಿಗಿರಿಸಿ ವಾಹನ ಸಂಚಾರಕ್ಕೆ ರಸ್ತೆಯನ್ನುಯ ಮುಕ್ತಗೊಳಿಸಿದರು. 

ಆಯನೂರು ಗ್ರಾಮದಲ್ಲಿ ಟ್ರ್ಯಾಕ್ಟರ್‌ ಪಲ್ಟಿ: ಮತ್ತೊಂದೆಡೆ ಶಿವಮೊಗ್ಗ ಜಿಲ್ಲೆಯ ಆಯನೂರು ಗ್ರಾಮದಲ್ಲಿ ಕೆರೆ ದಂಡೆ ಮೇಲೆ ಚಲಿಸುತ್ತಿದ್ದ ಟ್ಯಾಕ್ಟರ್ ಪಲ್ಟಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊರ್ವನ ಸ್ಥಿತಿ ಗಂಭೀರವಾಗಿದೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದಲ್ಲಿ ನಡೆದ ಘಟನೆ ನಡೆದಿದ್ದು, ಸಾವನ್ನಪ್ಪಿದ ವ್ಯಕ್ತಿಯನ್ನು ತಮಡಿಹಳ್ಳಿ ಗ್ರಾಮದ ಬೀರೇಶ (40 ) ಎಂದು ಗುರುತಿಸಲಾಗುದೆ. ಇನ್ನು ಮಧು ಎಂಬ ಯುವಕಜರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆಯು ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಡೀಸೆಲ್‌ ಸಾಗಣೆ ಲಾರಿ ಪಲ್ಟಿ: ಕಳೆದ ಗುರುವಾರ ಯಾದಗಿರಿ ಬಳಿಯ ಮೈಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೀಸೆಲ್‌ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಧಗದಗನೇ ಬೆಂಕಿ ಹೊತ್ತಿಕೊಂಡು ಉರಿದಿತ್ತು. ಡಿಸೇಲ್ ಸಾಗಿಸುತ್ತಿದ್ದ ಟ್ಯಾಂಕರ್ ರಸ್ತೆಯ ಪಕ್ಕದಲ್ಲಿಯೇ ಪಲ್ಟಿಯಾಗಿತ್ತು. ಇನ್ನು ಲಾರಿ ಪಲ್ಟಿ ಆಗುತ್ತಿದ್ದಣತ ದಗದಗನೇ ಬೆಂಕಿ ಆವರಿಸಿಕೊಂಡಿತ್ತು. ಸುಮಾರು 50 ಮೀ. ಸುತ್ತಮುತ್ತಲೂ ಬೆಂಕಿ ಜ್ವಾಲೆ ಕಾಣಿಸಿಕೊಂಡು ಧಗದಹಿಸಿತ್ತು. ಇನ್ನು ಬೆಂಕಿಯು ಸುಮಾರು 1 ಗಂಟೆಗೂ ಅಧಿಕ ಕಾಲ ಹೊತ್ತಿ ಉರಿದಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿ ಆಗಿದ್ದರು.

ಚುನಾವಣೆಗೂ ಮುನ್ನವೇ ಜೆಡಿಎಸ್‌ನ ಒಂದು ವಿಕೆಟ್ ಪತನ: ಕುಮಾರಸ್ವಾಮಿಗೆ ಶಾಕ್!

ಅಡೆತಡೆಗಳು ಇಲ್ಲದಿದ್ದರೂ ಲಾರಿ ಪಲ್ಟಿ: ಇನ್ನು ಡೀಸೆಲ್‌ ತುಂಬಿದ ಟ್ಯಾಂಕರ್‌ ಕಲಬುರ್ಗಿಯಿಂದ ರಾಯಚೂರು ಕಡೆ ಹೋಗುತ್ತಿತ್ತು. ಆದರೆ, ಯಾವುದೇ ಅಡೆತಡೆಗಳು ಇಲ್ಲದಿದ್ದರೂ ವಾಹನದಲ್ಲಿ ಬ್ರೇಕ್‌ ಸಮಸ್ಯೆ ಕಾಣಿಸಿಕೊಂಡು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು ಎಂಬ ಮಾಹಿತಿ ತಿಳಿದುಬಂದಿತ್ತು. ಈ ಘಟನೆಯು ಯಾದಗಿರಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದರು. ನಂತರ ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ವಾಹನದ ಚಾಲಕನನ್ನು ವಶಕ್ಕೆ ಪಡೆದಿದ್ದರು.

 

Latest Videos
Follow Us:
Download App:
  • android
  • ios