ಮನುಷ್ಯರು ಪ್ರಾಣಿಗಳು ಹಕ್ಕಿಗಳು ಹುಳ ಹುಪ್ಪಟೆ ಹಾವುಗಳು ಇವೆಲ್ಲವೂ ನಮ್ಮ ಜೀವ ವೈವಿಧ್ಯದ ಒಂದು ಭಾಗ.  ಆಹಾರ ಸರಪಳಿಯ ಭಾಗವಾಗಿರುವ ಇವುಳು ಒಂದನೊಂದು ಕೊಂದು ಬದುಕುವ ಕಾರಣ ಒಂದನ್ನು ಕಂಡರೆ ಒಂದಕ್ಕಾಗದು,  ಆದರೂ ಇವೆಲ್ಲವೂ ಒಂದೇ ಕಡೆ ಕಾಣಿಸಿಕೊಂಡರೆ ಅಚ್ಚರಿ ಎನಿಸುತ್ತದೆ. ಅಲ್ಲವೇ?

ಮನುಷ್ಯರು ಪ್ರಾಣಿಗಳು ಹಕ್ಕಿಗಳು ಹುಳ ಹುಪ್ಪಟೆ ಹಾವುಗಳು ಇವೆಲ್ಲವೂ ನಮ್ಮ ಜೀವ ವೈವಿಧ್ಯದ ಒಂದು ಭಾಗ. ಆಹಾರ ಸರಪಳಿಯ ಭಾಗವಾಗಿರುವ ಇವುಳು ಒಂದನೊಂದು ಕೊಂದು ಬದುಕುವ ಕಾರಣ ಒಂದನ್ನು ಕಂಡರೆ ಒಂದಕ್ಕಾಗದು, ಆದರೂ ಇವೆಲ್ಲವೂ ಒಂದೇ ಕಡೆ ಕಾಣಿಸಿಕೊಂಡರೆ ಅಚ್ಚರಿ ಎನಿಸುತ್ತದೆ. ಅಲ್ಲವೇ? ಆದರೆ ಇಂತಹ ದೃಶ್ಯವೊಂದು ಈಗ ಕ್ಯಾಮರಾದಲ್ಲಿ ಸೆರೆ ಆಗಿದೆ. ಒಂದು ಕಡೆ ರೈತ ಹೊಲ ಉಳುತ್ತಿದ್ದರೆ, ಮತ್ತೊಂದೆಡೆ ಹುಲಿಯೊಂದು ರಾಜಗಾಂಭೀಯದ ನಡೆಯೊಂದಿಗೆ ಬೆಳೆದು ನಿಂತಿರುವ ಹೊಲದ ಮಧ್ಯೆ ಹೆಜ್ಜೆ ಹಾಕುತ್ತಿದೆ. ಮತ್ತೊಂದೆಡೆ ಅದೇ ಹೊಲದಲ್ಲಿ ಬೆಳ್ಳಕ್ಕಿಗಳು ಹಾರಾಡುತ್ತಿವೆ. ಇಂತಹ ಸುಂದರವಾದ ನಯನ ಮನೋಹರ ದೃಶ್ಯ ಕಂಡು ಬಂದಿದ್ದು, ಉತ್ತರಪ್ರದೇಶದ ಫಿಲಿಭಿತ್‌ನ ಹೊಲವೊಂದರಲ್ಲಿ.. 

ಕ್ಯಾಪ್ಟನ್ ರಾಜ್‌ಲಖ್ನಿ ಎಂಬುವವರು ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಲಕ್ಷಾಂತರ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಕೆಲವರು ಹುಲಿಯ ರಾಜ ಗಾಂಭೀರ್ಯದ ನಡಿಗೆಯನ್ನು ಮೆಚ್ಚಿದರೆ, ರೈತ ಹಾಗೂ ಪ್ರಾಣಿಗಳ ಸಹಬಾಳ್ವೆಗೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 52 ಸೆಕೆಂಡ್‌ಗಳ ವೀಡಿಯೋದಲ್ಲಿ ಕಾಣಿಸುವಂತೆ ಹಸಿರು ತುಂಬಿ ನಿಂತಿರುವ ಭತ್ತದ ಗದ್ದೆಯ ಮಧ್ಯೆ ಹುಲಿಯೊಂದು ನಡೆದು ಹೋಗುತ್ತಿದ್ದರೆ, ಮತ್ತೊಂದೆಡೆ ರೈತ ಟಿಲ್ಲರ್‌ನಿಂದ ಉಳುಮೆ ಮಾಡುತ್ತಿದ್ದಾನೆ. ಇದೇ ವೇಳೆ ಬೆಳ್ಳಕ್ಕಿಗಳ ಹಿಂಡು ಹೊಲದಲ್ಲಿ ಸುತ್ತಾಡುತ್ತಾ ಅತ್ತಿತ್ತ ಹಾರಾಡುವುದನ್ನು ನೋಡಬಹುದಾಗಿದೆ. 

ಅನೇಕರು ಈ ವೀಡಿಯೋವನ್ನು ಮೆಚ್ಚಿದ್ದು, ಮನುಷ್ಯರು ಹಾಗೂ ಪ್ರಾಣಿಗಳು ಸಹಬಾಳ್ವೆಯಿಂದ ಬದುಕಿದರೆ ಎಷ್ಟು ಚೆನ್ನ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

Scroll to load tweet…

ಹುಲಿಗಳ ಭೀಕರ ಕಾದಾಟ... ವಿಡಿಯೋ ವೈರಲ್

ಹುಲಿಗಳೆರಡು ಭೀಕರವಾಗಿ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. one_earth__one_life ಹೆಸರಿನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಎರಡು ಹುಲಿಗಳ ಭಯಾನಕ ಕದನ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಆದರೆ ಈ ಘಟನೆ ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ವಿಡಿಯೋದಲ್ಲಿ ಉಲ್ಲೇಖವಿಲ್ಲ. 

Viral Video| 6 ಹುಲಿಗಳು ಒಟ್ಟಿಗೆ ವಾಕ್‌: ವಿಡಿಯೋ ವೈರಲ್‌!

ನೀವು ಗೂಳಿಗಳ, ಶ್ವಾನಗಳ, ಕಾದಾಟವನ್ನು ನೋಡಿರಬಹುದು ಆದರೆ ಎರಡು ಹುಲಿಗಳು ಕಾದಾಡುವುದನ್ನು(Tiger Fighting) ನೋಡಲು ಸಿಗುವುದು ಬಲು ಅಪರೂಪ. ಆದರೂ ಇಲ್ಲೊಂದು ಕಡೆ ಎರಡು ವ್ಯಾಘ್ರಗಳು ಭೀಕರವಾಗಿ ಕಾದಾಡುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿವೆ. ಹೇಗೆ ಹುಲಿಗಳೆರಡು ಒಂದರ ಮೇಲೆ ಒಂದು ಮುಗಿ ಬೀಳುತ್ತಾ ಭಯಾನಕವಾಗಿ ಕಾದಾಡುತ್ತಿವೆ ಎಂಬುದನ್ನು ಈ ವಿಡಿಯೋ ತೋರಿಸುತ್ತಿದೆ. ಹಲವು ಸೆಕೆಂಡುಗಳವರೆಗೆ ಈ ಹುಲಿಗಳು ಭೀಕರವಾಗಿ ಕಾದಾಡಿ ನಂತರ ದೂರ ಸರಿದು ಹೋಗಿವೆ. ಯಾರೋ ಪ್ರವಾಸಿಗರು ಸಫಾರಿ ಜೀಪ್‌ನಲ್ಲಿ(Saffari jeep ಕುಳಿತುಕೊಂಡು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದು, ಇದು ತುಂಬಾ ಅಪರೂಪದ ದೃಶ್ಯ ಹಿಂದೆಂದೂ ಇಂತಹ ದೃಶ್ಯ ನೋಡಿರಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವುಗಳ ಘರ್ಜನೆ ನನ್ನ ಮೈ ನವಿರೇಳುವಂತೆ ಮಾಡಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಈ ಸಮಯ ಆನಂದಮಯ.. ಕ್ಯಾಮರಾದಲ್ಲಿ ಸೆರೆಯಾಯ್ತು ಟೈಗರ್‌ಗಳ ಸರಸ..!