ದೀಪಾವಳಿಗೆ ಬಂಪರ್ ಗಿಫ್ಟ್: ಉದ್ಯೋಗಿಗಳಿಗೆ ರಾಯಲ್ ಎನ್‌ಫೀಲ್ಡ್ ನೀಡಿದ ಟೀ ಎಸ್ಟೇಟ್ ಮಾಲೀಕ
ತಮಿಳುನಾಡಿನ (Tamilnadu) ನೀಲಗಿರಿಯಲ್ಲಿ ಚಹಾ ಎಸ್ಟೇಟ್ (Tea Estate) ಹೊಂದಿರುವ ವ್ಯಕ್ತಿಯೊಬ್ಬರು ತಮ್ಮ ಉದ್ಯೋಗಿಗಳಿಗೆ ರಾಯಲ್ ಎನ್‌ಫೀಲ್ಡ್ ಗಿಫ್ಟ್ ನೀಡಿ ಔದಾರ್ಯ ಮೆರೆದಿದ್ದಾರೆ.

ನೀಲ್‌ಗಿರಿ: ದೀಪಾವಳಿ ಬಂತೆದರೆ ವಿವಿಧ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಬಹುತೇಕ ಜನ ತಮ್ಮ ಸಂಸ್ಥೆಯಿಂದ ಸಿಗುವ ದೀಪಾವಳಿ ಗಿಫ್ಟ್, ಬೋನಸ್, ಬಡ್ತಿ ಮುಂತಾದವುಗಳಿಗೆ ಜಾತಕ ಪಕ್ಷಿಗಳಂತೆ ಕಾಯ್ತಿರ್ತಾರೆ. ಅಂತಾರಾಷ್ಟ್ರೀಯ ಬಹುರಾಷ್ಟ್ರೀಯ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಹಬ್ಬದ ಸಂದರ್ಭದಲ್ಲಿ ವಿಶೇಚ ಗಿಫ್ಟ್ ನೀಡುತ್ತವೆ. ಆದರೆ ಟೀ ತೋಟ ಚಹಾ ತೋಟ ಮುಂತಾದ ಕೃಷಿ ಸಂಬಂಧಿ ಉದ್ಯಮಗಳಲ್ಲಿ ಕೆಲಸ ಮಾಡುವವರಿಗೆ ಗಿಫ್ಟ್ ಸಿಗುವುದು ತೀರಾ ವಿರಳ. ಹೆಚ್ಚೆಂದರೆ ಬೋನಸ್ ಸಿಕ್ಕಿದರೂ ಸಿಗಬಹುದು ಸಿಗದೆಯೂ ಇರಬಹುದು. ಆದರೆ ತಮಿಳುನಾಡಿನ (Tamilnadu) ನೀಲಗಿರಿಯಲ್ಲಿ ಚಹಾ ಎಸ್ಟೇಟ್ (Tea Estate) ಹೊಂದಿರುವ ವ್ಯಕ್ತಿಯೊಬ್ಬರು ತಮ್ಮ ಉದ್ಯೋಗಿಗಳಿಗೆ ರಾಯಲ್ ಎನ್‌ಫೀಲ್ಡ್ ಗಿಫ್ಟ್ ನೀಡಿ ಔದಾರ್ಯ ಮೆರೆದಿದ್ದಾರೆ. ಮೋಟಾರ್ ವಾಹನ ಸಂಸ್ಥೆಗಳಲೆಲ್ಲಾ ವಾಹನ ಗಿಫ್ಟ್ ಸಿಗುವುದು ದೊಡ್ಡ ವಿಚಾರವಾಗುವುದಿಲ್ಲ, ಆದರೆ ಇಲ್ಲಿ ಚಹಾ ತೋಟದ ಮಾಲೀಕರು ತನ್ನ ತೋಟದಲ್ಲಿ ಕೆಲಸ ಮಾಡುವ ಮಾಲೀಕರಿಗೆ ದೀಪಾವಳಿ ಹಬ್ಬದ ಭಾಗವಾಗಿ ರಾಯಲ್ ಎನ್‌ಫೀಲ್ಡ್ ಗಿಫ್ಟ್ ನೀಡಿದ್ದು, ಇದರಿಂದ ಕಾರ್ಮಿಕರು ಫುಲ್ ಖುಷ್ ಆಗಿದ್ದಾರೆ.
ನೀಲಗಿರಿ ಜಿಲ್ಲೆಯ ಕೊಟಗಿರಿ ನಗರದಲ್ಲಿ ಟೀ ತೋಟದ ಮಾಲೀಕ ತನ್ನ ಉದ್ಯೋಗಿಗಳಿಗೆ ರಾಯಲ್ ಎನ್‌ಫೀಲ್ಡ್ (Royal Enfield) ಕೊಡುಗೆ ನೀಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಉದ್ಯೋಗಿಗಳನ್ನು ವೇದಿಕೆಗೆ ಕರೆಸಿ ರಾಯಲ್ ಎನ್‌ಫೀಲ್ಡ್ ಗಾಡಿಯ ಕೀಗಳನ್ನು ವಿತರಿಸಲಾಗುತ್ತಿದೆ. ಬರೀ ಗಿಫ್ಟ್ ಮಾತ್ರ ಅಲ್ಲ ಉದ್ಯೋಗಿಗಳಿಗಾಗಿ ಹಲವು ಮನೋರಂಜನಾ ಕ್ರೀಡೆಗಳನ್ನು ಕೂಡ ಆಯೋಜಿಸಲಾಗಿದ್ದು, ಉದ್ಯೋಗಿಗಳು ಮ್ಯೂಸಿಕ್ ಚೇರ್ ಆಡುತ್ತಿರುವ ದೃಶ್ಯವಿದೆ. ಅಲ್ಲದೇ ಮಾಲೀಕರು ಕೂಡ ತಮ್ಮ ಉದ್ಯೋಗಿಗಳ ಜೊತೆ ಸೇರಿ ಈ ಮೋಜಿನ ಕ್ಷಣಗಳನ್ನು ಎಂಜಾಯ್ ಮಾಡಿದ್ದಾರೆ.
ರಾಯಲ್ ಎನ್‌ಫೀಲ್ಡ್ ಬುಲೆಟ್ ಫ್ಯಾಕ್ಟರಿ ಹೇಗಿದೆ ಗೊತ್ತಾ?
ಹೀಗೆ ರಾಯಲ್ ಎನ್‌ಫೀಲ್ಡ್ ಗಿಫ್ಟ್ ಪಡೆದ ಉದ್ಯೋಗಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ್ದು, ಈ ರೀತಿಯ ಗಿಫ್ಟ್ ನಾವು ನಿರೀಕ್ಷೆಯೇ ಮಾಡಿರಲಿಲ್ಲ, ಆದರೆ 15 ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನುಉಡುಗೊರೆಯಾಗಿ ನೀಡಿದ್ದಾರೆ. ಈ ರೀತಿ ಉಡುಗೊರೆ ಸಂಸ್ಥೆಯೊಂದರಿಂದ ಸಿಗುವುದು ಕಡಿಮೆ ಆದರೆ ಇದು ನಮಗೆ ಸಿಕ್ಕಿದೆ. ಮಾಲೀಕರ ಹಾಗೂ ಟೀಮ್ ವರ್ಕ್‌ನಿಂದಾಗಿ ನಮಗೆ ಈ ಬಹುಮಾನ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಮಾಲೀಕರ ಈ ಉದಾರ ನಿಲುವಿನಿಂದಾಗಿ ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಫುಲ್ ಖುಷ್ ಆಗಿದ್ದಾರೆ.
ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ನೆಲೆ ನಿಂತ ಕಥೆ