1962 ರಲ್ಲಿ, PLA ಭಾರತೀಯ ಸೇನೆಯನ್ನು ಸೋಲಿಸಿ ನಮ್ಕಾ ಚು ಕಣಿವೆಯನ್ನು ಆಕ್ರಮಿಸಿಕೊಂಡಿದ್ದರು. 25 ವರ್ಷಗಳ ಇದನ್ನು ಪುನರ್ ವಶಪಡಿಸಿಕೊಂಡ ಬಳಿಕ ಈ ಪ್ರದೇಶವು Mi-35 ಹೆಲಿಕಾಪ್ಟರ್‌ಗಳು ಮತ್ತು ಬೋಫೋರ್ ಗನ್‌ಗಳೊಂದಿಗೆ ಸಜ್ಜುಗೊಳಿಸಲಾಗಿತ್ತು.
ನವದೆಹಲಿ (ಏಪ್ರಿಲ್ 24, 2023): 1984 ರಲ್ಲಿ ಇಂದಿರಾ ಗಾಂಧಿಯವರ ಮರಣದ ನಂತರ ಕಾಂಗ್ರೆಸ್ ಗಳಿಸಿದ ಅನುಕಂಪದ ಮತಗಳ ಆಧಾರದ ಮೇಲೆ ದೇಶದ ಸಂಪೂರ್ಣ ರಾಜಕೀಯ ಸನ್ನಿವೇಶದಲ್ಲಿ ಪ್ರಾಬಲ್ಯ ಸಾಧಿಸಿತು. ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ವೇಳೆ ಚೀನಾವನ್ನು ಕೆಲ ದಿನಗಳ ಕಾಲ ಅಂದಿನ ಪ್ರಧಾನಿಗೇ ಅರಿವಿಲ್ಲದೆ ಚೀನಾವನ್ನು ನಡುಗಿಸಿದ್ದರು ಆಗಿನ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಸುಂದರ್‌ಜಿ. ಬನ್ನಿ, ಆಗಿನ ಇತಿಹಾಸದತ್ತ ಒಂದು ನೋಟ ಇಲ್ಲಿದೆ..
ದೆಹಲಿಯ ರೈಸಿನಾ ಕಾರಿಡಾರ್‌ನಲ್ಲಿ ರಾಜಕಾರಣಿಗಳು ಮುಂದಿನ ಚುನಾವಣೆಗೆ ತಯಾರಿ ನಡೆಸುತ್ತಿದ್ದರು. 1986 ರ ಮೇ 2 ರ ಬೆಳಗ್ಗೆ ಸೇನಾ ಪ್ರಧಾನ ಕಚೇರಿ ನವದೆಹಲಿಯಲ್ಲಿರುವ ಮಿಲಿಟರಿ ಕಾರ್ಯಾಚರಣೆ ನಿರ್ದೇಶನಾಲಯದಲ್ಲಿ ಫೋನ್ ರಿಂಗಾಯಿತು. ಈ ವೇಳೆ ಚೀನೀಯರು ಅರುಣಾಚಲ ಪ್ರದೇಶದಲ್ಲಿ ಭಾರತೀಯ ಭೂಪ್ರದೇಶ ಆಕ್ರಮಿಸಿಕೊಂಡಿದ್ದಾರೆ ಮತ್ತು 1962 ರ ಯುದ್ಧದ ರೀತಿ ತಯಾರಿ ನಡೆಸುತ್ತಿದ್ದಾರೆ ಎಂದು ಇಂಟೆಲಿಜೆನ್ಸ್ ಬ್ಯೂರೋ (IB) ನಿರ್ದೇಶಕರಿಂದ ಕರೆ ಬಂದಿತ್ತು. ಈ ಸಂದೇಶವನ್ನು ತಕ್ಷಣವೇ ಆಗಿನ ಸೇನಾ ಮುಖ್ಯಸ್ಥ ಜನರಲ್ ಕೃಷ್ಣಸ್ವಾಮಿ ಸುಂದರ್‌ಜಿ ಅವರಿಗೆ ರವಾನಿಸಲಾಯಿತು.
ಇದನ್ನು ಓದಿ: ಪೂಂಚ್ ದಾಳಿಗೆ ಸ್ಟಿಕ್ಕಿ ಬಾಂಬ್, ಚೀನಾ ನಿರ್ಮಿತ ಉಕ್ಕಿನ ಗುಂಡು ಬಳಕೆ: ಉಗ್ರರ ಶೋಧಕ್ಕೆ 2,000 ಕಮಾಂಡೋ ನಿಯೋಜನೆ
ಆಗ ಸುಂದರ್‌ಜಿ ಅಸಾಂಪ್ರದಾಯಿಕ ಸೇನಾ ಮುಖ್ಯಸ್ಥರಾಗಿದ್ದರು. ಭೌತಶಾಸ್ತ್ರ ಪ್ರಾಧ್ಯಾಪಕ ಮತ್ತು ಗಣಿತ ಶಿಕ್ಷಕರ ಮಗ ಹಾಗೂ ತಮಿಳು ಬ್ರಾಹ್ಮಣರಾಗಿದ್ರೂ ತನ್ನ ತಂದೆಗೆ ತಾನು ಧೈರ್ಯಶಾಲಿ ಎಂದು ಸಾಬೀತುಪಡಿಸಲು ಅವರು ಎಂಬಿಬಿಎಸ್ ಬದಲು ಸೈನ್ಯಕ್ಕೆ ಸೇರಿದ್ದರು. ಆದರೂ ಕಾರ್ಯತಂತ್ರದ ಚಿಂತಕ ಮತ್ತು ಬುದ್ಧಿಜೀವಿ ಎಂಬ ಖ್ಯಾತಿ ಹೊಂದಿದ್ದರು.
ಕರೆ ಬಂದ ತಕ್ಷಣ ವಿಳಂಬ ಮಾಡದೆ ಕಾರ್ಯರೂಪಕ್ಕೆ ಬಂದರು. ಆ ವೇಳೆಗೆ ಚೀನಿಯರು ಅರುಣಾಚಲ ಪ್ರದೇಶದ ಥಾಗ್ಲಾ ಪರ್ವತವನ್ನು ಆಕ್ರಮಿಸಿಕೊಂಡಿದ್ದರು ಮತ್ತು ಅವರು ದಕ್ಷಿಣ ಟಿಬೆಟ್ ಎಂದು ಹೇಳಿಕೊಳ್ಳುವ ಅರುಣಾಚಲ ಪ್ರದೇಶವನ್ನು ಚೀನಾಕ್ಕೆ ಹಸ್ತಾಂತರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಈ ಹಿನ್ನೆಲೆ ಆಕ್ರೋಶಗೊಂಡ ಸುಂದರ್‌ಜಿ, ತಕ್ಷಣವೇ 17ನೇ ಪರ್ವತ ವಿಭಾಗವನ್ನು ಮೇಜರ್ ಜನರಲ್ ಜೆ.ಎಂ.ಸಿಂಗ್ ನೇತೃತ್ವದಲ್ಲಿ ಅರುಣಾಚಲ ಪ್ರದೇಶಕ್ಕೆ ಸ್ಥಳಾಂತರಿಸಿದರು ಮತ್ತು 33 ಕಾರ್ಪ್ಸ್ ಅನ್ನು ಅರುಣಾಚಲ ಪ್ರದೇಶಕ್ಕೆ ಸ್ಥಳಾಂತರಿಸಲು ಸೂಚಿಸಿದ್ದರು.
ಇದನ್ನೂ ಓದಿ: ಆತ್ಮನಿರ್ಭರ ಭಾರತ ಯೋಜನೆಗೆ ಹಿನ್ನಡೆ: ಚೀನಾ ಉತ್ಪನ್ನಗಳು ದೇಶಕ್ಕೆ ಅನಿವಾರ್ಯವಾ..?
ತಮ್ಮ ಸೈನ್ಯವನ್ನು ಪೂರೈಸಲು ಮತ್ತು ಉಳಿಸಿಕೊಳ್ಳಲು ಭಾರತಕ್ಕೆ ರಸ್ತೆಗಳಿಲ್ಲ ಎಂದು ತಿಳಿದಿದ್ದರಿಂದ ಚೀನಿಯರು ಮತ್ತೊಮ್ಮೆ ಯುದ್ಧ ನಡೆಸಿ ಗೆಲ್ಲೋ ವಿಶ್ವಾಸದಲ್ಲಿದ್ರು. ಕೇಂದ್ರ ಸರ್ಕಾರ ಸಹ ಆತಂಕಗೊಂಡಿತ್ತು. ಚಳಿಗಾಲ ಮುಗಿದ ಬಳಿಕ ಭಾರತಕ್ಕೆ ಪಾಠ ಕಲಿಸಲು ತಯಾರಿ ನಡೆಸುತ್ತಿದ್ರು. ಆ ವೇಳೆ ಅರುಣಾಚಲ ಪ್ರದೇಶ ಸಂಪೂರ್ಣ ನಿರ್ಲಕ್ಷ್ಯಗೊಂಡಿದ್ದರಿಂದ ರಸ್ತೆ ಇಲ್ಲದೆ ಕತ್ತೆಗಳ ಮೂಲಕ ಶಸ್ತ್ರಾಸ್ತ್ರ ಸಾಗಿಸಲಾಗುತ್ತಿತ್ತು. ಆದರೆ, ಚೀನಾ ಬಳಿ ಉತ್ತಮವಾದ ಎಲ್ಲ ಹವಾಮಾನಕ್ಕೆ ಸೂಕ್ತವಾಗೋ ರಸ್ತೆ ಇತ್ತು.
ಆದರೂ, ಚೀನಿಯರು ಅಂದುಕೊಂಡಂತೆ ಭಾರತೀಯ ಸೇನೆ ಒಂದು ವರ್ಷ ಸಮಯ ತೆಗೆದುಕೊಳ್ಳದೆ 6 ತಿಂಗಳಿಗೆ ಸನ್ನದ್ಧರಾಗಿದ್ರು. ಚೀನೀಯರಿಗೆ ಪಾಠ ಕಲಿಸುವ ದಿಟ್ಟತನ ಹೊದಿದ್ದ ಸುಂದರ್ ಜೀ ಅವರೇ ಕಾರಣ. 1987 ರ ವಸಂತ ಕಾಲದಲ್ಲಿ ಸುಂದರ್‌ಜಿ ಹಳೆಯ Mi-8s ಜೊತೆಗೆ Mi-17 ರಷ್ಯನ್ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ರಾತ್ರಿಯಿಡೀ 3 ಬ್ರಿಗೇಡ್‌ಗಳನ್ನು (10,000 ಪಡೆಗಳು) ವಿಮಾನದಲ್ಲಿ ಹಾರಿಸಿದರು ಮತ್ತು ಚೀನಿಯರನ್ನು ಮೀರಿಸಿದರು.
ಇದನ್ನೂ ಓದಿ: ಸೂಜಿಮೊನೆಯಷ್ಟು ಜಾಗವನ್ನೂ ಕಬಳಿಸಲಾಗದು: ಅರುಣಾಚಲ ಪ್ರದೇಶದಲ್ಲಿ ಚೀನಾ ವಿರುದ್ಧ ಅಮಿತ್ ಶಾ ಗುಡುಗು
ಇದರಿಂದ ಭಾರತೀಯ ಪಡೆಗಳು ಪರ್ವತದ ತುದಿಗಳಲ್ಲಿ ಕುಳಿತು ಚೀನೀ ಪಡೆಗಳ ನಡೆ ಗಮನಿಸುವ ಅಪಾರ ಪ್ರಯೋಜನ ಹೊಂದಿತ್ತು. ಇಡೀ ದಿನ, ಲೌಡ್‌ಸ್ಪೀಕರ್ ಬಳಸಿ ಭಾರತೀಯ ಸೇನೆಯ ಸೈನಿಕರು ಮ್ಯಾಂಡರಿನ್‌ನಲ್ಲಿ ಚೀನಿಯರನ್ನು ಅವಮಾನಿಸುವ ಸಂದೇಶಗಳನ್ನು ನೀಡಿದ್ದಾರೆ. ಚೀನಿಯರ ಲಾಜಿಸ್ಟಿಕ್ಸ್ ಮತ್ತು ಸರಬರಾಜು ಮಾರ್ಗಗಳನ್ನು ಕಡಿತಗೊಳಿಸಲಾಯಿತು. ಇದರಿಂದ ಚೀನಾದ PLA ಸೈನಿಕರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಾರಂಭಿಸಿದರು. ಅಲ್ಲಿನ ಸರ್ಕಾರವನ್ನೂ ಇದು ಕೆರಳಿದ್ದು, ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರಿಯನ್ನು ಕರೆಸಲಾಯಿತು ಮತ್ತು ಚೀನಾದ ವಿದೇಶಾಂಗ ಸಚಿವರು ಅತ್ಯಂತ ಅಸಂಸದೀಯ ಭಾಷೆಯಲ್ಲಿ ನಿಂದಿಸಿದ್ದರು.
ಇದಕ್ಕೆ ತೆಲೆಕೆಡಿಸಿಕೊಳ್ಳದ ಸುಂದರ್‌ಜಿ ದಕ್ಷಿಣ ಭಾರತ ಮೂಲದ ಮತ್ತೊಂದು ಇನ್‌ಫ್ಯಾಂಟ್ರಿ ಸೈನ್ಯದ ವಿಭಾಗವನ್ನು ಅರುಣಾಚಲ ಪ್ರದೇಶಕ್ಕೆ ಸ್ಥಳಾಂತರಿಸಿ ನಮ್ಕಾ ಚು ಕಣಿವೆಯನ್ನು ಮರು ಆಕ್ರಮಿಸಿಕೊಂಡರು. 1962 ರಲ್ಲಿ, PLA ಭಾರತೀಯ ಸೇನೆಯನ್ನು ಸೋಲಿಸಿ ನಮ್ಕಾ ಚು ಕಣಿವೆಯನ್ನು ಆಕ್ರಮಿಸಿಕೊಂಡಿದ್ದರು. 25 ವರ್ಷಗಳ ಇದನ್ನು ಪುನರ್ ವಶಪಡಿಸಿಕೊಂಡ ಬಳಿಕ ಈ ಪ್ರದೇಶವು Mi-35 ಹೆಲಿಕಾಪ್ಟರ್‌ಗಳು ಮತ್ತು ಬೋಫೋರ್ ಗನ್‌ಗಳೊಂದಿಗೆ ಸಜ್ಜುಗೊಳಿಸಲಾಗಿತ್ತು. ಆಗ ಚೀನಿಯರು ನಿಜವಾಗಿಯೂ ಭಯಭೀತರಾಗಿದ್ದರು. ಕೇವಲ 14 ದಿನಗಳಲ್ಲಿ, ಅವರು 25 ವರ್ಷಗಳಿಂದ ಗಳಿಸಿದ ಪ್ರಯೋಜನವನ್ನು ಕಳೆದುಕೊಂಡರು.
ಇದನ್ನೂ ಓದಿ: ಅದಾನಿಗೆ ಚೀನಾ ನಂಟು; ಆದರೂ ಬಂದರು ನಿರ್ವಹಣೆಗೆ ಅವಕಾಶ: ಕಾಂಗ್ರೆಸ್ ಆಕ್ರೋಶ
ರಾಜೀವ್ ಗಾಂಧಿಯವರಿಗೆ ಕಿಂಚಿತ್ತೂ ಗೊತ್ತಾಗದೆ ಈ ಬೆಳವಣಿಗೆಗಳು ನಡೆದಿದ್ದವು. ಪರಿಸ್ಥಿತಿಯ ಜಟಿಲತೆ ಗೊತ್ತಾದಾಗ ರಾಜೀವ್ ಗಾಂಧಿ ಸಿಟ್ಟಿಗೆದ್ದು ಜನರಲ್ ಸುಂದರ್‌ಜಿ ಅವರನ್ನು ಪಿಎಂಒಗೆ ಕರೆಸಲಾಯಿತು ಮತ್ತು ಚೀನಿಯರೊಂದಿಗೆ ವ್ಯವಹರಿಸುವ ಯೋಜನೆಗಳ ಬಗ್ಗೆ ಕೇಳಿದರು. ಆ ವೇಳೆ ಸೇನಾ ಮುಖ್ಯಸ್ಥ, ಸೈನ್ಯವು ಆಕ್ರಮಣ ಮಾಡಲು ಸಿದ್ಧವಾಗಿದೆ ಮತ್ತು ಟಿಬೆಟ್ ರಿಡ್ಜ್ ಲೈನ್‌ನಲ್ಲಿ ಸುಮಾರು 10,000 ಚದರ ಕಿಲೋಮೀಟರ್‌ಗಳನ್ನು ಆಕ್ರಮಿಸಿ PLA 1962 ರ ಯುದ್ದದಲ್ಲಿ ವಶಪಡಿಸಿಕೊಂಡಿದ್ದ ಎಲ್ಲ ಜಾಗವನ್ನೂ ವಶಕ್ಕೆ ಪಡೆಯೋದಾಗಿ ಉತ್ತರಿಸಿದರು. ಅವರು ಈ ಮಾತುಗಳನ್ನು ಹೇಳುತ್ತಿರುವಾಗ, ಕೋಣೆಯಲ್ಲಿ ಮೌನ ಆವರಿಸಿತ್ತು ಮತ್ತು ರಾಜೀವ್ ಗಾಂಧಿ ದಿಗ್ಭ್ರಮೆಗೊಂಡಿದ್ದರಂತೆ.
ಆದರೆ ನಂತರ ನಡೆದದ್ದೇ ಬೇರೆ. ಸುಂದರ್‌ಜಿ ಅವರನ್ನು ರಾಜೀವ್ ಗಾಂಧಿ ತರಾಟೆಗೆ ತೆಗೆದುಕೊಂಡರು ಮತ್ತು ಹಿಂದೆ ಸರಿಯುವಂತೆ ಸೇನೆಗೆ ಸೂಚಿಸಲಾಯ್ತು. ಇಷ್ಟವಿಲ್ಲದಿದ್ರೂ ಸುಂದರ್‌ಜಿ ಅವರು ಹಾಗೆ ಮಾಡಿದರು. ಆ ವೇಳೆ ಅವರು ಭಾರತವು ಒಂದು ಸುವರ್ಣಾವಕಾಶವನ್ನು ಕಳೆದುಕೊಳ್ಳುತ್ತಿದೆ ಮತ್ತು ಭವಿಷ್ಯದಲ್ಲಿ ದೇಶವು ಅದಕ್ಕೆ ಪಶ್ಚಾತಾಪ ಪಡಲಿದೆ ಎಂದು ಅವರು ಪ್ರಧಾನಿ ಮತ್ತು ರಕ್ಷಣಾ ಸಚಿವರಿಗೆ ಹೇಳಿದ್ದರು ಎಂದು ಮಿಲಿಟರಿ ಕಾರ್ಯಾಚರಣೆ ನಿರ್ದೇಶನಾಲಯದ ಸಿಬ್ಬಂದಿ ನೆನಪಿಸಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಅದು 2017 ರಲ್ಲಿ ನಿಜವಾಗಿದೆ.
ಇದನ್ನೂ ಓದಿ: ಮತ್ತೆ ಚೀನಾ ಕಿರಿಕ್: ಇಬ್ಬರು ಭಾರತೀಯ ಪತ್ರಕರ್ತರ ವೀಸಾ ಫ್ರೀಜ್ ಮಾಡಿದ ಜಿನ್‌ಪಿಂಗ್ ಸರ್ಕಾರ..!
ಬಳಿಕ ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್ ಚೀನಿಯರಿಂದ ಪ್ರಶಂಸೆ ಗಳಿಸಿದರು. ಈಗ 36 ವರ್ಷಗಳ ನಂತರ, 'ಜನರಲ್ ಸುಂದರ್‌ಜಿ ಹೇಳಿದ್ದು ಸರಿಯೇ' ಎಂಬ ಪ್ರಶ್ನೆ ಬಂದರೆ ಅದಕ್ಕೆ ಉತ್ತರ ಹೌದು ಎನ್ನಬಹುದು. ನಾವು ಒಂದು ದೇಶವಾಗಿ ಈಗ ಬೆಲೆಯನ್ನು ಪಾವತಿಸುತ್ತಿದ್ದೇವೆ.
ಸುಂದರ್‌ಜಿ ಚೀನಾಕ್ಕೆ ಮಾತ್ರವಲ್ಲ, ಅವರು 1987 ರಲ್ಲಿ ಜನರಲ್ ಜಿಯಾ ಅವರನ್ನೂ ಹೆದರಿಸಿದ್ದರು. ಪಾಕಿಸ್ತಾನ ಪರಮಾಣು ರಾಷ್ಟ್ರವಾಗುವುದನ್ನು ತಡೆಯಬೇಕು ಎಂದು ಬಹಿರಂಗವಾಗಿ ವಾದಿಸಿದ ಮೊದಲ ಭಾರತೀಯ ಸೇನಾ ಮುಖ್ಯಸ್ಥ ಮತ್ತು ಪರಮಾಣು ಪರೀಕ್ಷೆಗಳನ್ನು ನಡೆಸಬೇಕೆಂದು ಹೇಳಿದ್ರು. ವಾಸ್ತವವಾಗಿ 1998 ರ ಪೋಖ್ರಾನ್ ಪರೀಕ್ಷೆಗಳು ಸುಂದರ್‌ಜಿ 1988 ರಲ್ಲಿ ರೂಪಿಸಿದ ಯೋಜನೆಗಳನ್ನು ಆಧರಿಸಿವೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರು ನಾಮಕರಣ ಮಾಡಿದ ಚೀನಾ: ಮತ್ತೆ ನರಿ ಬುದ್ಧಿ ಪ್ರದರ್ಶಿಸಿದ ಜಿನ್‌ಪಿಂಗ್
ವಿಪರ್ಯಾಸವೆಂದರೆ, ಚೀನೀಯರು ಸುಂದರ್‌ಜಿಯವರ ಸಾಮರ್ಥ್ಯದಿಂದ ಪ್ರಭಾವಿತರಾದರು ಮತ್ತು ಅವರ ನಿವೃತ್ತಿಯ ನಂತರ 1993 ರಲ್ಲಿ ಅವರನ್ನು ಭೇಟಿಗೆ ಆಹ್ವಾನಿಸಿದ್ದರು. ಬೀಜಿಂಗ್‌ನಲ್ಲಿ, PLA ಯ ಮಾರ್ಷಲ್ ಸುಂದರ್‌ಜಿಯನ್ನು ಏನು ತಿನ್ನಲು ಬಯಸುತ್ತೀರಾ ಎಂದು ಕೇಳಿದ್ದಕ್ಕೆ "ನಾನು ಭಾರತೀಯನಾಗಿ ಪೀಕಿಂಗ್ ಸೂಪ್ ಕುಡಿಯಲು ಬಯಸುತ್ತೇನೆ" ಎಂದಿದ್ದರು ಸುಂದರ್‌ಜಿ. ಇದಕ್ಕೆ ಪಿಎಲ್‌ಎ ಮುಖ್ಯಸ್ಥನ ಮುಖ ಕೆಂಪಾಗಿತ್ತು ಎಂದು ಬೇರೆ ಹೇಳಬೇಕಿಲ್ಲ.
ಆದರೂ ಇಂದಿಗೂ, ಜನರಲ್ ಸುಂದರ್‌ಜಿ ಅವರು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ವಿರುದ್ಧ ಸೆಟೆದು ನಿಂತ ಕಾರಣಕ್ಕಾಗಿ ಕಾಂಗ್ರೆಸ್ ಬೆಂಬಲಿಗರಿಂದ ವಿವಾದಾತ್ಮಕ ವ್ಯಕ್ತಿಯಾಗಿ ಉಳಿದಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣಗಳಿಗೆ 12 ಬಿಲಿಯನ್ ಡಾಲರ್ ಹೂಡಿಕೆ: ಚೀನಾ ಆರ್ಥಿಕತೆ ಮೀರಿಸಲು ಭಾರತದ ಮಾಸ್ಟರ್‌ಪ್ಲ್ಯಾನ್..!
